Vishweshwar Bhat's Book Release: ನ.16ಕ್ಕೆ ವಿಶ್ವೇಶ್ವರ ಭಟ್ ಅವರ 103ನೇ ಕೃತಿ ʼಬದುಕುಳಿದವರು ಕಂಡಂತೆʼ ಲೋಕಾರ್ಪಣೆ
Badukulidavaru Kandanthe Book: 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭಯಾನಕ ದಾಳಿ ಮತ್ತು ಹತ್ಯಾಕಾಂಡದಲ್ಲಿ ಬದುಕು ಉಳಿದವರು ಹೇಳಿದ ಮನ ಮಿಡಿಯುವ ರೋಚಕ ಕಥನವನ್ನು ಪುಸ್ತಕ ಒಳಗೊಂಡಿದೆ. ಮೂಲಕೃತಿ ʼವನ್ ಡೇ ಇನ್ ಅಕ್ಟೋಬರ್ ʼ ಅನ್ನು ಯೇನ್ ಅಗಮೋನ್, ಓರಿಯಾ ಮೇವೊರೊಚ್ ರಚಿಸಿದ್ದಾರೆ. ಈ ಕೃತಿಯನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿಶ್ವೇಶ್ವರ ಭಟ್ -
ಬೆಂಗಳೂರು, ನ.14: ವಿಶ್ವವಾಣಿ, ವಿಶ್ವವಾಣಿ ಟಿವಿ ಮತ್ತು ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ 103ನೇ ಪುಸ್ತಕ ʼಬದುಕುಳಿದವರು ಕಂಡಂತೆʼ (Badukulidavaru Kandanthe Book) ಬಿಡುಗಡೆ ಕಾರ್ಯಕ್ರಮವನ್ನು ಇದೇ ನವೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕೆ.ಜಿ ರಸ್ತೆಯ ಮೈಸೂರು ಬ್ಯಾಂಕ್ ಹಿಂಭಾಗದಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಸ್ರೇಲಿನ ಕಾನ್ಸುಲ್ ಜನರಲ್ ಒರ್ಲಿ ವೆಯಿಟ್ಜ್ಮನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಲಿದ್ದು, ಪುಸ್ತಕದ ಲೇಖಕರಾದ ವಿಶ್ವೇಶ್ವರ ಭಟ್ ಉಪಸ್ಥಿತರಿರಲಿದ್ದಾರೆ.
ಪುಸ್ತಕದ ವಿಶೇಷತೆ ಏನು?
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭಯಾನಕ ದಾಳಿ ಮತ್ತು ಹತ್ಯಾಕಾಂಡದಲ್ಲಿ ಬದುಕು ಉಳಿದವರು ಹೇಳಿದ ಮನ ಮಿಡಿಯುವ ರೋಚಕ ಕಥನವನ್ನು ಪುಸ್ತಕ ಒಳಗೊಂಡಿದೆ. ಮೂಲಕೃತಿಯನ್ನು ಯೇನ್ ಅಗಮೋನ್, ಓರಿಯಾ ಮೇವೊರೊಚ್ ರಚಿಸಿದ್ದಾರೆ.
ಹಮಾಸ್ ಉಗ್ರರು ದಾಳಿ ನಡೆಸಿದ್ದ ಸ್ಥಳವನ್ನು ಸಂದರ್ಶಿಸಿರುವ ವಿಶ್ವೇಶ್ವರ ಭಟ್ ಅವರು, ಅಲ್ಲಿಯೇ ಕೃತಿಯನ್ನು ಅನುವಾದಿಸಲು ನಿರ್ಧರಿಸಿದ್ದರು.
ಹಮಾಸ್ ಭಯೋತ್ಪಾದಕರು 2023ರ ಅಕ್ಟೋಬರ್ 7ರಂದು ಗಾಜಾ ಗಡಿಯಿಂದ ಒಂದೇ ಸಮನೆ ರಾಕೆಟ್, ಕ್ಷಿಪಣಿಗಳನ್ನು ಇಸ್ರೇಲ್ ನತ್ತ ಉಡಾಯಿಸಿದ್ದರು. ಅವರ ಗುರಿ ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ನೋಮಾ ಮ್ಯೂಸಿಕ್ ಫೆಸ್ಟಿವಲ್ ಮತ್ತು ಸುತ್ತಲಿನ ಪ್ರದೇಶಗಳಾಗಿತ್ತು. ಅಲ್ಲಿ ನಾಲ್ಕು ಸಾವಿರ ಮಂದಿ ಸೇರಿದ್ದರು. ಅಂದು ಹಮಾಸ್ ಉಗ್ರರು ಪ್ಯಾರಾಚೂಟ್‌ಗಳಿಂದ ಇಳಿದು ಇಸ್ರೇಲಿನ ಗಡಿ ಭಾಗದಲ್ಲಿರುವ ಹಳ್ಳಿಗಳು ಮತ್ತು ಸಮುದಾಯ ಕೇಂದ್ರಗಳಲ್ಲಿದ್ದ ಅಮಾಯಕ ಜನರ ಮೇಲೆ ಗುಂಡು ಹಾರಿಸಿದ್ದರು. ಇಸ್ರೇಲ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು. ಮಕ್ಕಳ ಮೇಲೂ ಗುಂಡಿಕ್ಕಿ ಸಾಯಿಸಿದ್ದರು. 251 ಜನರನ್ನು ಅಪಹರಿಸಿದ್ದರು. ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿ ಹತರಾದರು. ಈ ಘೋರ ನರಮೇಧದ ಬಗ್ಗೆ ಯೇರ್ ಅಗಮೋನ್ ಮತ್ಗು ಓರಿಯಾ ಮೇವೊರೊಚ್ ಅವರು ಬರೆದ ʼವನ್ ಡೇ ಇನ್ ಅಕ್ಟೋಬರ್ ʼ ಎಂಬ ಕೃತಿಯನ್ನು ವಿಶ್ವೇಶ್ವರ ಭಟ್ ಅವರು ಅನುವಾದಿಸಿದ್ದಾರೆ. ಹತ್ಯಾಕಾಂಡದಲ್ಲಿ ಬದುಕಿ ಉಳಿದವರು ಹೇಳಿರುವ, ಮನಮಿಡಿಯುವ, ಹೃದಯವಿದ್ರಾವಕ, ರೋಚಕ ಕಥನವನ್ನು ಇದು ಒಳಗೊಂಡಿದೆ. ಆ ಭೀಕರ ಘಟನೆಯನ್ನು 34 ಮಂದಿ ತಮ್ಮ ಅನುಭವದ ಅಧಾರದಲ್ಲಿ ವಿವರಿಸಿದ್ದರು. ಈ ಅಪರೂಪದ ಧೈರ್ಯಶಾಲಿ ಕಥೆಯನ್ನು ಪುಸ್ತಕದಲ್ಲಿ ನೀವು ಓದಬಹುದು.
ಈ ಸುದ್ದಿಯನ್ನೂ ಓದಿ | Vishweshwar Bhat Column: ರಿಸ್ಕ್ ಇದ್ದಾಗಲೇ ಬದುಕು ಮತ್ತಷ್ಟು ರೋಚಕ