ಚಿಂತಾಮಣಿ: ನಗರದ ಗ್ರಂಥಾಲಯ ಪಕ್ಕದಲ್ಲಿ ಇಂದು ನೂತನವಾಗಿ ತಾಲೂಕು ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯನ್ನು ಸಂಘದ ಪದಾಧಿಕಾರಿಗಳು ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವುದ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷರಾದ ಆರ್.ವೆಂಕಟಚಲಪತಿರವರು 2019 ರಲ್ಲಿ ಕುಂಬಾರರ ಕ್ಷೇಮಾಭಿವೃದ್ಧಿ ಸಂಘ ಇಲ್ಲಿ ಸ್ಥಾಪನೆ ಮಾಡಿದ್ದು ಕಾರಣಾಂತರಗಳಿಂದ ಸಂಘ ಉದ್ಘಾಟನೆ ಮಾಡುವ ಅವಕಾಶ ಭಾಗ್ಯ ಒದಗಿಸಿ ಬಂದಿಲ್ಲ ಇಂದು ಸಂಘದ ಕಚೇರಿ ಹಾಗೂ ಸಂಘವನ್ನು ಉದ್ಘಾಟನೆ ಮಾಡಿದ್ದೇವೆ ಎಂದು ಹೇಳಿದ ಅವರು ಕುಂಬಾರರು ಸಮಾಜದ ಮುಖ್ಯ ವಾಹನಿಗೆ ಬರಬೇಕೆಂದರೆ ಒಗ್ಗಟ್ಟು ಅತಿ ಮುಖ್ಯ, ಸರ್ಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳು ಸದುಪಯೋಗ ಪಡೆದುಕೊಳ್ಳಲು ಸಮಾಜದ ಪ್ರತಿಯೊಬ್ಬರು ಮುಂದಾಗಬೇಕು. ಈಗಾಗಲೇ ಚಿಂತಾಮಣಿ ತಾಲ್ಲೂಕಿನ ದೊಡ್ಡಹಳ್ಳಿ ಸರ್ವೆ ನಂಬರ್ 13ರಲ್ಲಿ 3 ಗುಂಟೆ ಜಮೀನು ಸರ್ಕಾರಿ ಅಧಿಕಾರಿಗಳು ಭವನ ನಿರ್ಮಾಣ ಮಾಡಿಕೊಳ್ಳಲು ಮಂಜೂರು ಮಾಡಿಕೊಟ್ಟಿದ್ದು, ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳು ಸಿಗುವಂತಹ ಕೆಲಸ ನಾವೆಲ್ಲರೂ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: 2028ಕ್ಕೆ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಎಂಎಲ್ಎ ಆಗಬೇಕು
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಕೆಎಂ ರೆಡ್ಡಪ್ಪ, ಅಧ್ಯಕ್ಷರಾದ ಆರ್ ವೆಂಕಟಾಚಲಪತಿ, ಉಪಾಧ್ಯಕ್ಷರಾದ ಗೋವಿಂದ,ಕಾರ್ಯದರ್ಶಿ ಚಂದ್ರಶೇಖರ್,ಜಂಟಿ ಕಾರ್ಯದರ್ಶಿ ಶಿವಶಂಕರ್, ವಗರಿ ಖಜಾಂಚಿ ಗೋವಿಂದರಾಜು,ಜಂಟಿ ಖಜಾಂಚಿ ಕೆ ನಾಗೇಶ್ , ಆಂತರಿಕ ಲೆಕ್ಕ ಪರಿಶೋಧಕಾರು ಮಂಜುನಾಥ್, ಪತ್ರಿಕಾ ಪ್ರತಿನಿಧಿ ಕೇಬಲ್ ನಾರಾಯಣ್, ನಿರ್ದೇಶಕರಾದ ವೆಂಕಟಸ್ವಾಮಿ, ವೆಂಕಟ ಲಕ್ಷ್ಮಮ್ಮ, ಮುನಿಸ್ವಾಮಿ, ರಮೇಶ್, ವೆಂಕಟಸ್ವಾಮಿ, ಶ್ರೀನಿವಾಸ್, ನಾಗಪ್ಪ, ಸೀನಪ್ಪ, ಆರ್ ಮಂಜು, ಮುರಳಿ, ಸರ್ವಜ್ಞ ಕವಿ ಸಲಹಾ ಸಮಿತಿ ಸದಸ್ಯರಾದ ಎನ್ ಅಂಬರೀಶ್, ಶಿವರಾಂ, ಕೃಷ್ಣಪ್ಪ, ತಿಮ್ಮಯ್ಯ, ನಾರಾಯಣಸ್ವಾಮಿ, ಶ್ರೀ ರಾಮ್, ಗೋಪಾಲ ಕೃಷ್ಣಪ್ಪ, ಅಶ್ವಥ್ ನಾರಾಯಣ, ರಾಮಪ್ಪ ಸೇರಿದಂತೆ ಮುಂತಾದವರು ಇದ್ದರು.