ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್(Dr M C Suadhakar) ಅವರು ನಗರದ ಆಜಾದ್ ಚೌಕದಲ್ಲಿರುವ ಸ್ಥಳೀಯ ಹೋಟೆಲ್ ಒಂದಕ್ಕೆ ಭೇಟಿ ನೀಡಿ ಸಾಮಾನ್ಯರಂತೆ ಬೆಂಚಿನ ಮೇಲೆ ಕುಳಿತು ಮಸಾಲಾ ದೋಸೆ ಸವಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕ್ಷೇತ್ರದ ಪ್ರವಾಸದಲ್ಲಿದ್ದ ಸಚಿವರು ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಆಜಾದ್ ಚೌಕದ ಸಣ್ಣ ಹೋಟೆಲ್‌ಗೆ ಭೇಟಿ ನೀಡಿದರು. ಹೋಟೆಲ್‌ನಲ್ಲಿದ್ದ ಸಾಮಾನ್ಯ ಗ್ರಾಹಕರೊಂದಿಗೇ ಬೆಂಚಿನ ಮೇಲೆ ಕುಳಿತು ಮುದ್ದಾದ ಬಾಳೆ ಎಲೆಯ ತಟ್ಟೆಯಲ್ಲಿ ಬಿಸಿಬಿಸಿ ಮಸಾಲಾ ದೋಸೆ ಸವಿದರು.
ಸಚಿವರನ್ನು ಇಷ್ಟು ಹತ್ತಿರದಿಂದ ಕಂಡ ಹೋಟೆಲ್‌ನಲ್ಲಿದ್ದ ಸಾರ್ವಜನಿಕರು ಹಾಗೂ ಅಭಿಮಾನಿಗಳು ಅವರ ಸರಳತೆಯನ್ನು ಕಂಡು ಆಶ್ಚರ್ಯಚಕಿತರಾದರು. ಈ ಸಂದರ್ಭ ದಲ್ಲಿ ಸಚಿವರು ಸ್ಥಳೀಯರೊಂದಿಗೆ ನಗುನಗುತ್ತಾ ಮಾತನಾಡುತ್ತಾ, ಅತ್ಯಂತ ಆತ್ಮೀಯ ವಾಗಿ ಸಮಯ ಕಳೆದರು.
ಸಚಿವರ ಈ ಸಾಂಪ್ರದಾಯಿಕ ಹಾಗೂ ಸರಳ ಶೈಲಿಯ ದೋಸೆ ಸವಿಯುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯ ದಲ್ಲಿ ಅವರ ಸರಳತೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಅಕ್ಷಯ್, ಆರ್ ಎಂ ಜೆ ಶ್ರೀನಿವಾಸ್ ಹಾಗೂ ಸಚಿವರ ಅಭಿಮಾನಿಗಳು ಉಪಸ್ಥಿತರಿದ್ದರು.