8th Smart India Hackathon: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2025ರ ೮ನೇ ಆತಿಥ್ಯಕ್ಕೆ ನಾಗಾರ್ಜುನ ಕಾಲೇಜು ಸನ್ನದ್ಧ : ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆತಿಥ್ಯ ವಹಿಸಲು ದೇಶದ 3600 ತಾಂತ್ರಿಕ ಕಾಲೇಜುಗಳು ಅರ್ಜಿ ಸಲ್ಲಿಸಿದ್ದು ಡಿಜಿಟಲೀರಣಗೊಂಡ ಮೂಲಭೂತ ಸೌಕರ್ಯಗಳು, ಆಧುನಿಕ ಬೆಳವಣಿಗೆ,ಆತಿಥ್ಯಕ್ಕೆ ಆಡಳಿತ ಮಂಡಳಿತ ಸಹಮತ ಇವುಗಳ ಆಧಾರದಲ್ಲಿ ಕೇಂದ್ರ ಸರಕಾರ ೬೦ ನೋಡಲ್ ಕೇಂದ್ರ ಗಳನ್ನು ಗುರುತಿಸಿದೆ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೫ರ ೮ ನೇ ಆತಿಥ್ಯಕ್ಕೆ ನಾಗಾರ್ಜುನ ಕಾಲೇಜು ಸನ್ನಧ್ಧ ಎಂದು ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ತಿಳಿಸಿದರು. -
ಚಿಕ್ಕಬಳ್ಳಾಪುರ : ಕೇಂದ್ರ ಸರಕಾರ, ಸಚಿವಾಲಯಗಳು,ಇಲಾಖೆ, ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ಮುಕ್ತ ವೇದಿಕೆಯನ್ನು ಸೃಷ್ಟಿಸುತ್ತಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೫ರ ೮ನೇ ಆವೃತ್ತಿಯಲ್ಲಿಯೂ ಕೂಡ ನಾಗಾರ್ಜುನ ತಾಂತ್ರಿಕ ಕಾಲೇಜು ಆತಿಥ್ಯ ವಹಿಸಲಿದೆ ಎಂದು ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ತಿಳಿಸಿದರು.
ನಗರ ಹೊರವಲಯ ನಾರ್ಗಾರ್ಜುನ ತಾಂತ್ರಿಕ ಶಿಕ್ಷಣ ಸಮೂಹ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2025 ಆತಿಥ್ಯ ಸಂಬAಧ ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಗಾರ್ಜುನ ನೋಡಲ್ ಕೇಂದ್ರ
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆತಿಥ್ಯ ವಹಿಸಲು ದೇಶದ 3600 ತಾಂತ್ರಿಕ ಕಾಲೇಜುಗಳು ಅರ್ಜಿ ಸಲ್ಲಿಸಿದ್ದು ಡಿಜಿಟಲೀರಣಗೊಂಡ ಮೂಲಭೂತ ಸೌಕರ್ಯಗಳು, ಆಧುನಿಕ ಬೆಳವಣಿಗೆ,ಆತಿಥ್ಯಕ್ಕೆ ಆಡಳಿತ ಮಂಡಳಿತ ಸಹಮತ ಇವುಗಳ ಆಧಾರದಲ್ಲಿ ಕೇಂದ್ರ ಸರಕಾರ ೬೦ ನೋಡಲ್ ಕೇಂದ್ರ ಗಳನ್ನು ಗುರುತಿಸಿದೆ. ಅದರಲ್ಲಿ ನಾಗಾರ್ಜುನ ತಾಂತ್ರಿಕ ಕಾಲೇಜು ಕೂಡ ಒಂದು ಎಂದು ಹೇಳಲು ಹೆಮ್ಮೆಯೆನಿಸಿದೆ.
ದೇಶದ ೧೧ ರಾಜ್ಯಗಳಿಂದ ೨೦ ತಂಡಗಳ ೧೨೦ ವಿದ್ಯಾರ್ಥಿಗಳು ಇಲ್ಲಿ ಭಾಗಿಯಾಗಲಿದ್ದಾರೆ. ಹೀಗೆ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ,ಮಹಾರಾಷ್ಟç,ಚಂಢೀಗಡ ಪಂಚಾಬ್, ದೆಹಲಿ, ಗುಜರಾಜ್, ಕೇರಳ ಸೇರಿದಂತೆ ಒಟ್ಟು ೧೧ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳ ತಂಡವನ್ನು ಸ್ವಾಗತಿಸಿ ಅವರಿಗೆ ಉತ್ತಮ ಗುಣಮಟ್ಟದ ಆತಿಥ್ಯ ನೀಡಲು ನಾಗಾರ್ಜುನ ತಾಂತ್ರಿಕ ಕಾಲೇಜು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ ಎಂದು ತಿಳಿಸಿದರು.
೩೬ ಗಂಟೆಗಳ ಸ್ಪರ್ಧೆ
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೫ರ ೮ನೇ ಆವೃತಿಯು ೩೬ ಗಂಟೆಗಳ ಕಾಲ ನಡೆಯಲಿದ್ದು ೨೦ ತಂಡಗಳು ವಿದ್ಯಾರ್ಥಿಗಳು ನಮ್ಮ ಕ್ಯಾಂಪಸ್ಸಿಗೆ ಬರಲಿದ್ದು ಪ್ರತಿ ತಂಡದಲ್ಲಿ ೫ ಮಂದಿ ಹುಡುಗರು ಒಬ್ಬ ವಿದ್ಯಾರ್ಥಿನಿ ಇರಲಿದ್ದಾರೆ.ಇವರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಗಳು, ಪ್ರಯೋಗಕ್ಕೆ ಬೇಕಾದ ಪರಿಕರಗಳನ್ನು ಒದಗಿಸಲಾಗಿದ್ದು ೨೦೧೭ರಿಂದ ನಿರಂತರವಾಗಿ ಈ ಕಾರ್ಯಕ್ರಮದ ಆತಿಥ್ಯವನ್ನು ನಮ್ಮ ಕಾಲೇಜು ವಹಿಸುತ್ತಿರುವುದೇ ಸಂಸ್ಥೆಯ ಗುಣಾತ್ಮಕ ಬೆಳವಣಿಗೆಯ ಧ್ಯೋತಕವಾಗಿದೆ ಎಂದರು.
೧.೫ ಲಕ್ಷ ಬಹುಮಾನ
ಇಂತಹ ಕಾರ್ಯಕ್ರಮ ಡಿ.೮ರ ಸೋಮವಾರ ಬೆಳಗ್ಗೆ ೮ ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಯಾಗಲಿದೆ. ಮಂಗಳವಾರ ಸಂಜೆ ೮ ಗಂಟೆಗೆ ಮುಕ್ತಾಯವಾಗಿ ಸಮಾರೋಪ ಸಮಾರಂಭ ನಡೆಯಲಿದೆ.ಈ ಅವಧಿಯಲ್ಲಿ ದೇಶದ ೨೦ ಜ್ವಲಂತ ಸಮಸ್ಯೆಗಳನ್ನು ಈ ತಂಡಗಳ ಮುಂದಿಡ ಲಾಗಿದ್ದು ಇವಕ್ಕೆ ಯಾರು ಪರಿಣಾಮಕಾರಿಯಾದ ಪರಿಹಾರದ ಮಾರ್ಗ ತೋರಿಸುತ್ತಾರೋ ಅಂತಹ ತಂಡಕ್ಕೆ ಕೇಂದ್ರ ಸರಕಾರ ೧.೫ಲಕ್ಷ ಬಹುಮಾನ ನೀಡಲಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಕೊಡುವ ಪರಿಹಾರಗಳನ್ನು ದೇಶದ ಬೆಳವಣಿಗೆಗೆ ಬಳಸಿಕೊಳ್ಳಲಾಗುವುದು ಎಂದರು.
ಆರ್ಥಿಕತೆಯೆಡೆಗೆ ಪ್ರಯಾಣ
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೫ರ ೮ ನೇ ಆವೃತಿಯಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ನವೀಕರಿಸಬಹುದಾದ ಶಕ್ತಿ, ಸೈಬರ್ ಸುರಕ್ಷತೆ,ಮೆಡೆಟೆಕ್, ರೊಬೊಟಿಕ್ಸ್ ಮತ್ತು ಡ್ರೋನ್ಸ್, ಸ್ಮಾರ್ಟ್ ಆಟೋಮೇಷನ್ಸ್,ರಕ್ಷಣಾ ತಂತ್ರಜ್ಞಾನ, ಸ್ಮಾರ್ಟ್ ಶಿಕ್ಷಣ, ಅಗ್ರಿಟೆಕ್, ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ.ಈ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವಾಲಯದ ಇನ್ನೋ ವೇಶನಲ್ ಸೆಲ್, ಮತ್ತು ಅಖಿಲಭಾರತ ತಾಂತ್ರಿಕ ಶಿಕ್ಷಣ ಪರಿಷತ್ತುಗಳ ಸಹಯೋಗದಲ್ಲಿ ವಿದ್ಯಾರ್ಥಿ ಗಳಲ್ಲಿ ಸೃಜನಶೀಲ ಚಿಂತನೆ,ಸಮಸ್ಯೆ ಪರಿಹಾರಿಸುವ ಸಾಮರ್ಥ್ಯ ಮತ್ತು ಉದ್ಯಮ ಶೀಲತಾ ಮನೋಭಾವವನ್ನು ಪೋಷಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಕೇಂದ್ರ ಸರಕಾರ ರೂಪಿಸಿದ್ದು, ಆರ್ಥಿಕತೆಯೆಡೆಗೆ ಭಾರತದ ಪ್ರಯಾಣಕ್ಕೆ ಇದು ಕೊಡುಗೆ ನೀಡಲಿದೆ ಎಂದರು.
ಗುಣಾತ್ಮಕ ಆಯ್ಕೆಗೆ ಒತ್ತು
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವಿಶ್ವದ ಅತಿ ದೊಡ್ಡ ಮುಕ್ತ ನಾವಿನ್ಯತೆಯ ಮಾದರಿ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ಉತ್ಪನ್ನ ನಾವೀನ್ಯತೆ ಮತ್ತು ಸಮಸ್ಯೆ ಪರಿಹರಿಸುವ ಮನೋಧರ್ಮದ ಸಂಸ್ಕೃತಿಯನ್ನು ಪ್ರೇರೇಪಿಸುತ್ತದೆ. ದೇಶಾದ್ಯಂತ ನಡೆಯುತ್ತಿರುವ 2025ರ ಹ್ಯಾಕಥಾನ್‌ನಲ್ಲಿ 8160ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಿದ್ದು ಈ ಪೈಕಿ ಕೇವಲ 1360 ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗಿದೆ. ಇವರನ್ನು ೨೦ ತಂಡಗಳಲ್ಲಿ ಹಂಚಿದ್ದು ಕರ್ನಾ ಟಕದ ವಿದ್ಯಾರ್ಥಿಗಳು ಹೊರರಾಜ್ಯಕ್ಕೆ ಅಲ್ಲಿನ ವಿದ್ಯಾರ್ಥಿಗಳು ಇಲ್ಲಿಗೆ ಬರಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಗಾರ್ಜುನ ಇಂಜಿನಿಯರಿAಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಿಪ್ಪೇಸ್ವಾಮಿ ಜಿ, ಆಡಳಿತ ಮಂಡಳಿ ಮುಖ್ಯಸ್ಥರಾದ ಕಿಶನ್, ಶಿಬು ಸುಕುಮಾರ್, ಸಹ ನಿರ್ದೇಶಕ ಡಾ.ಯೋಗೇಶ, ವಿಭಾಗದ ಮುಖ್ಯಸ್ಥರಾದ ಡಾ.ಗೋಪಿನಾಥ್, ಇಸಿ ವಿಭಾಗದ ಡಾ.ರೋಹಿತ್ ಹಾಗೂ ಇತರರು ಹಾಜರಿದ್ದರು.