Sri Madhusudan sai: ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರ ಆರಂಭಿಸುವ ಗುರಿ: ಶ್ರೀ ಮಧುಸೂದನ ಸಾಯಿ
Sathya Sai Grama: ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳನ್ನು ಆರಂಭಿಸುವ ಗುರಿ ಇರಿಸಿಕೊಳ್ಳಲಾಗಿದೆ. 2025ರ ನವೆಂಬರ್ 23 ರೊಳಗೆ ನೂರು ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಈ ಗುರಿಯನ್ನು ತಲುಪುವ ಸಮೀಪಕ್ಕೆ ಬಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ. ನವೆಂಬರ್ 23 ರಿಂದ ಈ 100 ಕೇಂದ್ರಗಳು ಸಂಪೂರ್ಣವಾಗಿ ಕಾರ್ಯವನ್ನು ಆರಂಭಿಸುವುದರೊಂದಿಗೆ ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.
-
Prabhakara R
Nov 2, 2025 8:15 PM
ಚಿಕ್ಕಬಳ್ಳಾಪುರ, ನ.2: ಸತ್ಯ ಸಾಯಿ ಸಂಸ್ಥೆಯಿಂದ ಆರಂಭಿಸಲಾಗಿರುವ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳನ್ನು (Sai Swasthya Wellness Centre) ದ್ವಿಗುಣಗೊಳಿಸಲು ಎಲ್.ವಿ.ಪ್ರಸಾದ್ ಐ ಇನ್‌ಸ್ಟಿಟ್ಯೂಟ್ ಚಿಕಿತ್ಸಾಲಯಗಳ ಸಹಭಾಗಿತ್ವದಲ್ಲಿ ಪ್ರಾಯೋಗಿಕ ಯೋಜನೆ ರೂಪಿಸಲಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sri Madhusudan sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 79ನೇ ದಿನವಾದ ಭಾನುವಾರ (ನ 2) ಆಶೀರ್ವಚನ ನೀಡಿದ ಸದ್ಗುರು, ಹೆಚ್ಚಿನ ಜನರಿಗೆ ಸಹಾಯ ಮಾಡಲು ಪಾಲುದಾರಿಕೆ ಮಾರ್ಗವನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಎಲ್.ವಿ.ಪ್ರಸಾದ್ ಸಂಸ್ಥೆಯು ಗ್ರಾಮೀಣ ಭಾಗದ ಸಣ್ಣ ಚಿಕಿತ್ಸಾಲಯಗಳನ್ನು ಎರವಲು ಪಡೆದಿರುವುದು ಸಂತೋಷದ ವಿಚಾರ. ಸಮಸ್ಯೆಯನ್ನು ಮೊದಲೇ ಗುರುತಿಸಲು ಮತ್ತು ನಂತರ ರೋಗಿಯನ್ನು ದೊಡ್ಡ ಆಸ್ಪತ್ರೆಗೆ ಸಂಪರ್ಕಿಸಲು ಮತ್ತು ಆರೈಕೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳುತ್ತದೆ.
ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳನ್ನು ಆರಂಭಿಸುವ ಗುರಿ ಇರಿಸಿಕೊಳ್ಳಲಾಗಿದೆ. 2025ರ ನವೆಂಬರ್ 23 ರೊಳಗೆ ನೂರು ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಈ ಗುರಿಯನ್ನು ತಲುಪುವ ಸಮೀಪಕ್ಕೆ ಬಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ. ನವೆಂಬರ್ 23 ರಿಂದ ಈ 100 ಕೇಂದ್ರಗಳು ಸಂಪೂರ್ಣವಾಗಿ ಕಾರ್ಯವನ್ನು ಆರಂಭಿಸುವುದರೊಂದಿಗೆ ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ ಎಂದು ವಿವರಿಸಿದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

ರಾಷ್ಟ್ರಕವಿ ಕುವೆಂಪು ಅವರು ನಾವೆಲ್ಲರೂ ವಿಶ್ವಮಾನವರಾಗಬೇಕು ಎಂದಿದ್ದರು. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಿಶ್ವಮಾನವರಾಗಬೇಕು, ಜಾಗತಿಕ ಪ್ರಜೆಗಳಾಗುವುದರೊಂದಿಗೆ ಸೇವೆ ಸಲ್ಲಿಸಬೇಕು. ನಿಮಗೂ ಸವಾಲುಗಳು ಇರುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು. ಸಾಂಸ್ಕೃತಿಕ ಉತ್ಸವದಲ್ಲಿ ಸಂಸ್ಥೆಗಳನ್ನು ನಿರ್ಮಿಸಿದ, ಜಗತ್ತಿಗೆ ಒಳ್ಳೆಯದನ್ನು ಮಾಡಿದ ನಾಯಕರ ಕಥೆಗಳನ್ನು ಕೇಳುತ್ತಿದ್ದೀರಿ. ಎಲ್ಲ ಸವಾಲುಗಳ ನಡುವೆಯೂ ಅವರು ಪ್ರತಿಯೊಂದು ಆಡಚಣೆಯಲ್ಲೂ ಆ ಗುರಿಯನ್ನು ಸಾಧಿಸಿದ್ದಾರೆ. ಈ ಕಥೆಗಳು ನಿಮಗೆ ಸ್ಫೂರ್ತಿಯಾಗಬೇಕು. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವವರು ಉತ್ತಮ ವೈದ್ಯರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಅತಿಥಿ ದೇಶ ಮೆಕ್ಸಿಕೋ ಬಗ್ಗೆ ಮಾತನಾಡಿದ ಸದ್ಗುರು, ಬಣ್ಣಗಳು, ಪಾಕಪದ್ದತಿ, ಸಂಸ್ಕೃತಿಗಳಿಂದ ತುಂಬಿರುವ ಅತ್ಯಂತ ವಿಶಿಷ್ಟ ದೇಶ ಮೆಕ್ಸಿಕೋ. ಆಧುನಿಕತೆಯಲ್ಲಿ ಪ್ರಾಚೀನತೆಯನ್ನು ಹೊಂದಿದೆ. ನಮ್ಮ ಫೌಂಡೇಶನ್ ಅಲ್ಲಿನ ಬುಡಕಟ್ಟು ಜನರಿಗಾಗಿ ಸೇವೆ ಸಲ್ಲಿಸುತ್ತಿದೆ. ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್ ಮಾದರಿಯಲ್ಲಿ ಬೆಳಗ್ಗಿನ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಅಲ್ಲಿನ ಸ್ಥಳೀಯ ಸಮುದಾಯಗಳ ನೆರವಿನಿಂದ ಸೇವೆ ಮಾಡಲು ಸಹಾಯವಾಗುತ್ತಿದೆ. ಮೆಕ್ಸಿಕನ್ ಸಹೋದರ, ಸಹೋದರಿಯರು ಇಲ್ಲಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | Sathya Sai Grama: ನಮ್ಮೊಳಗಿನ ದೇವರ ಮಾತು ಕೇಳಿಸಿಕೊಳ್ಳಲು ಮೌನದಿಂದ ಮಾತ್ರವೇ ಸಾಧ್ಯ: ಶ್ರೀ ಮಧುಸೂದನ ಸಾಯಿ
ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್ ನ ಉಪಾಧ್ಯಕ್ಷರಾದ ಶಾಶ್ವತ್ ಗೋಯೆಂಕಾ ಹಾಗೂ ಎಲ್ ವಿ ಪ್ರಸಾದ್ ಐ ಇನ್ ಸ್ಟಿಟ್ಯೂಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ ಗುಲ್ಲಪಲ್ಲಿ ನಾಗೇಶ್ವರ್ ರಾವ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಸತ್ಯ ಸಾಯಿ ಸಂಸ್ಥೆಯ ಹಣಕಾಸು ಮತ್ತು ಲೆಕ್ಕ ವಿಭಾಗಕ್ಕೆ ಬೆಂಬಲ ನೀಡುತ್ತಿರುವ 'ಐಕ್ಯಂ ಸಲ್ಯೂಷನ್ಸ್'ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಭಾಕರ ಶಾಸ್ತ್ರಿ ಪ್ರಶಸ್ತಿ ಸ್ವೀಕರಿಸಿದರು. ಮೆಕ್ಸಿಕೋ ದೇಶದಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಜೋಸ್ ಲೂಯಿಸ್ ಅಲ್ವಾರೆಜ್ (Jose Luis Alvarez) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು.