ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಸಾಯಿಪುಷ್ಕರ್ ಮಡಿಲಿಗೆ
ಕಳೆದ ಐದಾರು ವರ್ಷಗಳಿಂದ ಮಗ ಸಾಯಿ ಪುಷ್ಕರ್ ತನ್ನ ಶೈಕ್ಷಣಿಕ ಬದುಕಿನ ಜೊತೆಗೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ನಿರಂತರವಾಗಿ ಅಭ್ಯಾಸ ಮಾಡಿದ್ದಾನೆ. ಇದರ ಫಲವಾಗಿ ಈ ಹಿಂದೆ ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದನು.
-
ಗೌರಿಬಿದನೂರು :ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಪೊತೇನಹಳ್ಳಿ ಗ್ರಾಮದ ದಿವಂಗತ ಜಯರಾಮೇಗೌಡರ ಮೊಮ್ಮಗ ಉದ್ಯಮಿ ಜಯಕೀರ್ತಿ ರವರ ಮಗ ಸಾಯಿಪುಷ್ಕರ್ ಒಡಿಸ್ಸಾದ ಭುವನೇಶ್ವರ್ ನಗರದಲ್ಲಿ ಇತ್ತೀಚಿಗೆ ನಡೆದ 37 ನೇ ಅಖಿಲ ಭಾರತ ಸಬ್ ಜೂನಿಯರ್ (15 ವರ್ಷ ಒಳಗಿನ) ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಅಂತಿಮ ಪಂದ್ಯಾವಳಿಯಲ್ಲಿ ಜಯ ಗಳಿಸಿ ಪ್ರಥಮ ಸ್ಥಾನ ಪಡೆದು ಪಾರಿತೋಷಕವನ್ನು ಮುಡಿಗೇರಿಸಿಕೊಂಡಿದ್ದಾನೆ.
ಮಗನ ಈ ಅಭೂತಪೂರ್ವ ಸಾಧನೆಯನ್ನು ಕಂಡು ಪೋಷಕರಾದ ಜಯಕೀರ್ತಿ ಮತ್ತು ರೂಪ ಸಂತಸ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿದ ಜಯಕೀರ್ತಿ, ಕಳೆದ ಐದಾರು ವರ್ಷಗಳಿಂದ ಮಗ ಸಾಯಿ ಪುಷ್ಕರ್ ತನ್ನ ಶೈಕ್ಷಣಿಕ ಬದುಕಿನ ಜೊತೆಗೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ನಿರಂತರವಾಗಿ ಅಭ್ಯಾಸ ಮಾಡಿದ್ದಾನೆ. ಇದರ ಫಲವಾಗಿ ಈ ಹಿಂದೆ ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದನು.
ಇದನ್ನೂ ಓದಿ: IND vs SA 1st T20I: ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್, ಸಂಜು ಸ್ಯಾಮ್ಸನ್ ಔಟ್!
ಇದೀಗ ಭುವನೇಶ್ವರಿಯಲ್ಲಿ ನಡೆದ 15 ವರ್ಷದ ಒಳಗಿನ ಬಾಲಕರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಮಗನ ಶೈಕ್ಷಣಿಕ ಪ್ರಗತಿಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ ಎಂದು ತಿಳಿಸಿದರು.
ಚಾಂಪಿಯನ್ ಶಿಪ್ ವಿಜೇತ ಸಾಯಿಪುಷ್ಕರ್ ಗೆ ಕ್ರೀಡಾ ಸಂಸ್ಥೆಯು ಪ್ರಮಾಣಪತ್ರ, ಪಾರಿತೋಷಕ, ಮೆಡಲ್ ಜೊತೆಗೆ 1 ಲಕ್ಷ ಚೆಕ್ ನೀಡಿ ಆತ್ಮೀಯವಾಗಿ ಅಭಿನಂದಿಸಿದೆ.