ಚಿಂತಾಮಣಿ: ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಈ ಹಿಂದೆ ಚಿಂತಾಮಣಿ ನಗರಸಭೆ ಅಧ್ಯಕ್ಷರಾಗಿದ್ದ ರೇಖಾ ಅವರ ಪತಿ ಉಮೇಶ್ ಅವರ ಜತೆ ಮಾತನಾಡಿರುವ ಆಡಿಯೋ ವೊಂದು ಇದೀಗ ವ್ಯಾಟ್ಸಾಪ್, ಫೇಸ್ ಬುಕ್ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ವೈರಲ್ ಆಗುವ ಮೂಲಕ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಡಾ.ಎಂ.ಸಿ.ಸುಧಾಕರ್(Dr.M.C.Sudhakar) ಅವರು ಸಚಿವರಾಗುವುದುಕ್ಕೂ ಮುನ್ನ ತಮ್ಮದೇ ಪಕ್ಷದ ರೇಖಾ ಅವರು ಚಿಂತಾಮಣಿ ನಗರಸಭೆ ಅಧ್ಯಕ್ಷರಾಗಿದ್ದಾಗ ಅವರ ಪತಿ ಉಮೇಶ್ ಜತೆ ಮೊಬೈಲ್ ನಲ್ಲಿ ಮಾತನಾಡಿರುವ ’ಕಮೀಷನರ್ ವಿರುದ್ದ ಧರಣಿ ಮಾಡಿ, ಶಾಸಕರಿಗೂ ಸಚಿವರಿಗೂ ಧಿಕ್ಕಾರ ಕೂಗಿ’ ಎಂದು ಪ್ರಚೋದನೆ ನೀಡಿ ಮಾತನಾಡಿರುವುದು ಆಡಿಯೋದಲ್ಲಿದ್ದು ರಾಜೀವ್‌ಗೌಡ ಗುಂಪಿನಲ್ಲಿ ವೈರಲ್ ಆಗಿದೆ.
ಮಹಿಳಾ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಎಸ್ಟಿಮೇಟ್ ಕಾಫಿಗಳನ್ನು ತೆಗೆದುಕೊಳ್ಳಿ. ಇನ್ನು ಮುಂದೆ ಕೆಲಸ ಮಾಡಲು ಬಿಡಬೇಡಿ, ಕಮೀಷನರ್ ವಿರುದ್ದ ದೂರುಗಳನ್ನು ಕೊಡ್ತಾ ಇರಬೇಕು’ ಎಂದೆಲ್ಲಾ ಮಾತನಾಡಿದ್ದಾರೆ.
ಇದನ್ನೂ ಓದಿ: MP Sudhakar: 2028ಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸುಧಾಕರ್ ಶಾಸಕರಾಗುವುದು ಖಚಿತ: ನಗರ ಸಭಾಧ್ಯಕ್ಷ ಗಜೇಂದ್ರ
ಚಿಂತಾಮಣಿ ನಗರಸಭೆಯ ಕಮೀಷನರ್ ಅವರು ಯಾವುದೆ ರೀತಿಯಲ್ಲಿ ನಮಗೆ ಸಹಕರಿಸುತ್ತಿಲ್ಲ. ಸೌಜನ್ಯಕ್ಕಾದರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿ ಅಲ್ಲೇ ಕಚೇರಿ ಮುಂದೆ ಪ್ರತಿಭಟನೆ ಮಾಡಿ. ಚುನಾಯಿತ ಅಧ್ಯಕ್ಷರಿಗೆ ಕನಿಷ್ಟ ಗೌರವ ನೀಡುತ್ತಿಲ್ಲ ಎಂದು ಧರಣಿ ಮಾಡಿ ಎಂದು ನಗರಸಭೆ ಅಧ್ಯಕ್ಷೆ ರೇಖಾ ಅವರ ಪತಿ ಉಮೇಶ್‌ಗೆ ಸೂಚನೆ ನೀಡಿದ್ದಾರೆ.
ಕಾರ್ಯಕ್ರಮ 5 ಅಥವಾ 6ನೇ ತಾರೀಕು ಅಲ್ಲವಾ, 4ನೇ ತಾರೀಕು ಲೆಟರ್ ಕೊಟ್ಟು 5ನೇ ತಾರೀಕು ಅಥವಾ ಕಾರ್ಯಕ್ರಮದ ದಿನವೇ ಪ್ರತಿಭಟನೆ ಮಾಡಿ ನೋಡಿ ಎಂದು ಉಮೇಶ್ ಅವರಿಗೆ ಸೂಚನೆ ಕೊಟ್ಟಿದ್ದಾರೆ.
ಇದೀಗ ರಂಜಾನ್ ಹಬ್ಬ ಮುಗಿಸಿಕೊಂಡು ಬುಧವಾರ ಎಲ್ಲರೂ ಸೇರಿ ಮಾತನಾಡಿಕೊಂಡು ಶನಿವಾರ ತಾನೆ ಕಾರ್ಯಕ್ರಮ ಇದೋದು ಆವೊತ್ತು ಧರಣಿ ಕೂತ್ಕೊಳ್ಳಿ ಅಥವಾ ಹಿಂದಿನ ದಿನವೇ ಕೂತುಕೊಳ್ಳಿ. ಬಾಯ್ಕಾಟ್ ಮಾಡಿ ಯಾರೂ ಕೂಡ ಪ್ರೋಗ್ರಾಂಗೆ ಹೋಗಬೇಡಿ.
ನೆಕ್ಸ್ಟ್ ಕೌನ್ಸಿಲ್ ಮೀಟಿಂಗ್ ಕರೆದಾಗ ನೀವೇ ಕಮೀಷನ್‌ರ ವಿರುದ್ದ ನೀವೇ ಜಾಡ್ಸಿ, ಮಾತ ನಾಡಿ, ನಮ್ಮನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ. ನಮಗೆ ಗೌರವ ಕೊಡುತ್ತಿಲ್ಲ. ಕೆಲಸಗಳು ಏನೂ ಆಗುತ್ತಿಲ್ಲ. ಕೆಲಸ ಮಾಡಲು ಆಗೊಲ್ಲ ಎಂದಾದರೆ ಕೆಲಸ ಬಿಟ್ಟು ಹೋಗಿ ಎಂದು ದೂರು ಕೊಡ್ತಾ ಇರಬೇಕು ಎಂದಿದ್ದಾರೆ.
ಕಾರ್ಯಕ್ರಮದ ಬಗ್ಗೆ ಲೆಟರ್ ಕೊಟ್ಟಿದ್ದಾನೆ ಮನೆಗೆ ಬಂದು ಎಂದು ರೇಖಾ ಪತಿ ಉಮೇಶ್ ಹೇಳಿದಾಗ ಬೇಡ ಈದಿನ ರಜೆ ತಾನೇ ಎಂದು ಹೇಳಿ ವಾಪಸ್ ಮಾಡು ಬುಧವಾರ ಬಂದು ಕೊಡಲು ಹೇಳು ಎಂದು ಹೇಳಿರುವ ಡಾ.ಎಂ.ಸಿ.ಸುಧಾಕರ್ ಅವರು, ಎಸ್ಟಿಮೇಟ್ ಕಾಪಿ ಗಳನ್ನು ತಗೊಳ್ಳಿ ಎಂದು ಹೇಳಿದ್ದಾರೆ.
ನೀವು ಇಷ್ಟೆ ಮಾಡಬೇಕಿರುವುದು ಬಿಡಬೇಡಿ ಎಲ್ಲದಕ್ಕೂ ವಿರೋಧ ಮಾಡಿ ಎಂದು ನಗರಸಭೆ ಅಧ್ಯಕ್ಷೆ ರೇಖಾ ಅವರ ಪತಿ ಉಮೇಶ್‌ಗೆ ಸೂಚನೆ ನೀಡಿರುವ ಆಡಿಯೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಡಾ.ಎಂ.ಸಿ.ಸುಧಾಕರ್ ಮಾತನಾಡಿರುವ ಆಡಿಯೋವನ್ನು ಟ್ಯಾಗ್ ಮಾಡಿ, ಬಾಯಲ್ಲಿ ಹೇಳುವುದು ಒಂದು ಮಾಡೋದು ಇನ್ನೊಂದು ಎಂದು ಡಾ.ಎಂ.ಸಿ.ಸುಧಾಕರ್ ವಿರುದ್ದ ಕಿಡಿಕಾರುತ್ತಿದ್ದಾರೆ.
ಸಚಿವರ ಸ್ಪಷ್ಟನೆ!!
ಆಡಿಯೋ ವೈರಲ್ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಯಾರು ಯಾರಿಗೆ ಹೇಳುತ್ತಿದ್ದಾರೆ ಎಂಬ ಸ್ಪಷ್ಟತೆಯಿಲ್ಲ. ಪಾಪ ಕೆಲವರು ಹತಾಶರಾಗಿ ಈ ರೀತಿಯ ಪ್ರಯತ್ನ ಮಾಡು ತ್ತಿದ್ದಾರೆ. ಇದರಲ್ಲೇನೋ ಖುಷಿ ತಗೋಬೇಕಂತ ನೋಡುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾರನ್ನೋ ಹಿಯಾಳಿಸುವುದು ಸಹಜ. ಆದರೆ ನೇರವಾಗಿ ಯಾರು ವ್ಯಕ್ತಿ ಎನ್ನುವುದು ಗೊತ್ತಿಲ್ಲ. ಸಾರ್ವಜನಿಕ ಜೀವನದಲ್ಲಿ ನಮ್ಮ ವಿರೋಧಿಗಳು ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಹಜ. ಚೇಷ್ಟೆ ಮಾಡುವವರು ಹೀಗೆ ಮಾಡುತ್ತಾರೆ. ಅವರಿಗೆ ಖುಷಿಯಾಗುವುದಾದರೆ ಆಗಲಿ ಬಿಡಿ ಎನ್ನುವ ಮೂಲಕ ಈ ಧ್ವನಿ ನನ್ನದಲ್ಲ, ಶಿಡ್ಲಘಟ್ಟದ ಘಟನೆಯಿಮದ ಹತಾಶರಾಗಿ ಬಹುಶಃ ಈ ರೀತಿ ಮಾಡುತ್ತಿರ ಬಹುದು. ಜವಾಬ್ದಾರಿ ಸ್ಥಾನದಲ್ಲಿರುವವರು ಒಬ್ಬ ಅಧಿಕಾರಿ ಅವಾಚ್ಯವಾಗಿ ಸಂಬೋಧಿಸು ವುದಕ್ಕೂ, ಆಡಿಯೋದಲ್ಲಿದೆ ಎಂದು ಹೇಳುವ ರೀತಿಗೂ ತುಂಬಾ ವ್ಯತ್ಯಾಸ ವಿದೆ. ಅದು ಯಾರು ಯಾರಿಗೆ ಹೇಳಿದ್ದಾರೆ ಎಂದು ಸ್ಪಷ್ಟತೆಯಿಲ್ಲದಿದ್ದರೂ ವೈರಲ್ ಮಾಡಿದ್ದಾರೆ. ಅವರಿಗೆ ಸಂತೋಷ ಆಗುವುದಾದರೆ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪವನ್ನು ತಳ್ಳಿ ಹಾಕಿದರು.