ಚಿಕ್ಕಬಳ್ಳಾಪುರ: ಮಾನ್ಯ ಮುಖ್ಯಮಂತ್ರಿಗಳು ಫೆ.2ರಂದು ಗೌರಿಬಿದನೂರು ತಾಲ್ಲೂಕಿನಲ್ಲಿ ಕೈಗೊ ಳ್ಳುವ ಪ್ರವಾಸ ಕಾರ್ಯಕ್ರಮಕ್ಕೆ ಅಗತ್ಯ ಪೂರ್ವ ಸಿದ್ದತೆಗಳನ್ನು ಶಿಷ್ಟಾಚಾರದಂತೆ ಸಮರ್ಪಕ ವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ ದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ "ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಪೂರ್ವ ಸಿದ್ದತಾ ಸಭೆ"ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಬೆದರಿಕೆಗಳಿಗೆ ಭಯಪಡುವ ಶಾಸಕ ನಾನಲ್ಲ ಎಂದ ಶಾಸಕರ ಕ್ಷಮೆಯಾಚನೆಗೆ ದಸಂಸ ಒತ್ತಾಯ
ಮುಖ್ಯಮಂತ್ರಿಗಳು ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಗೌರಿಬಿದ ನೂರು ತಾಲ್ಲೂಕಿನ ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದ ಹೆಲಿಪ್ಯಾಡ್ ಗೆ ಫೆ.೨ ರಂದು ಬೆಳಿಗ್ಗೆ ೧೦.೫೦ಕ್ಕೆ ಆಗಮಿಸಿ ಹೊಸೂರು ಗ್ರಾಮದ ಏರ್ಪಡಿಸಿರುವ "ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಮತ್ತು ಪದ್ಮಭೂಷಣ ಡಾ.ಎಚ್.ನರ ಸಿಂಹಯ್ಯ ರವರ ಜನ್ಮಶತಮಾನೋತ್ಸವ" ಕಾರ್ಯಕ್ರಮದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವೇದಿಕೆ ಸಿದ್ದತೆ, ಅಲಂಕಾರ, ವಾಹನ ನಿಲುಗಡೆ, ಪೊಲೀಸ್ ಭದ್ರತೆ, ಗಾರ್ಡ ಆಫ್ ಹಾನರ್ ಗೌರವ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ,ಅಗ್ನಿ ಶಾಮಕ ವ್ಯವಸ್ಥೆ,ಶಾಮಿಯಾನ,ನೆರಳಿನ ವ್ಯವಸ್ಥೆ, ಆಂಬುಲೆನ್ಸ್ ಸೇರಿದಂತೆ ಆರೋಗ್ಯ ಸೇವೆಯ ವ್ಯವಸ್ಥೆ, ಆಸನಗಳ ವ್ಯವಸ್ಥೆಯನ್ನು ಪರಿಶೀಲಿಸಬೇಕು.
ಚಳಿಗಾಲ ಇರುವುದರಿಂದ ಗಾಳಿಗೆ ಮರಳು ಎದ್ದೇಳುವ ಸಾಧ್ಯತೆ ಇರುತ್ತದೆ. ಕಾರ್ಯಕ್ರಮ ನಡೆ ಯುವ ಸ್ಥಳದ ಸುತ್ತಮುತ್ತಲು ನೀರು ಹಾಕಿ ದೂಳು ಎದ್ದೇಳದಂತೆ ಕ್ರಮ ವಹಿಸಬೇಕು. ಕಾರ್ಯ ಕ್ರಮಕ್ಕೆ ಆಗಮಿಸುವವರಿಗೆ ಹಾಗೂ ಗಣ್ಯರಿಗೆ ಪೂರೈಕೆಯಾಗುವ ಆಹಾರ ಗುಣಮಟ್ಟ ಹಾಗೂ ಸ್ವಚ್ಚತೆಗೆ ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿ ಯಾವ ಯಾವ ಅಧಿಕಾರಿಗಳು ಏನೇನು ಕೆಲಸ ಮಾಡಬೇಕೆಂದು ಕಾರ್ಯಭಾರ ಹಂಚಿಕೆ ಮಾಡಿ ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ಉಪ ವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.