ಮೈಸೂರು, ನ.12: ಮುಸ್ಲಿಂ ಯುವಕರು ಬಡತನ, ನಿರುದ್ಯೋಗ ಇತ್ಯಾದಿಗಳಿಂದಾಗಿ ಭಯೋತ್ಪಾದನೆಯ (Terrorism) ಹಾದಿ ಹಿಡಿಯುತ್ತಿದ್ದಾರೆ ಎಂದು ಕತೆ ಕಟ್ಟಬೇಡಿ. ದಿಲ್ಲಿ ಕಾರು (Delhi car blast) ಸ್ಫೋಟದ ರೂವಾರಿಗಳೆಲ್ಲರೂ ವಿದ್ಯಾವಂತರಾಗಿದ್ದು, ಡಾಕ್ಟರ್ಸ್ ಆಗಿದ್ದಾರೆ. ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾಗಿ ಬದಲಾಗುತ್ತಿರೋದು ಬಹಳ ಅಪಾಯಕಾರಿ ಎಂದು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ (BJP leader Pratap Simha) ಹೇಳಿದ್ದಾರೆ.
ದೆಹಲಿಯ ಕೆಂಪುಕೋಟೆ ಬಳಿ 9 ಮಂದಿಯನ್ನು ಬಲಿ ಪಡೆದ ಐ20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಮುಸ್ಲಿಂ ವಿದ್ಯಾವಂತರೇ ಭಯೋತ್ಪಾದಕರಾಗಿ ಬದಲಾಗುತ್ತಿರೋದು ಬಹಳ ಅಪಾಯಕಾರಿ. ಮುಸ್ಲಿಮರ ಸಮಸ್ಯೆ ಬಡತನ ಅಲ್ಲ, ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೇ ಇಂತಹ ಘಟನೆಗಳಿಗೆ ಕಾರಣ. ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸವಾಗಿದೆ. ವಿದ್ಯಾವಂತ ಮುಸ್ಲಿಮರು ಉಗ್ರರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ನಿಮ್ಮ ನೆರೆಹೊರೆಯಲ್ಲಿರಬಹುದಾದ ಇಂಥ ವಿದ್ಯಾವಂತ ಧರ್ಮಾಂಧರ ಬಗ್ಗೆಯೂ ಹುಷಾರಾಗಿರಿ ಎಂದು ಅವರು ಎಚ್ಚರಿಸಿದ್ದಾರೆ.
ಹಿಂದೂ ರಾಷ್ಟ್ರ ಆಗಲು ಬಿಡಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ಈ ದೇಶವನ್ನು ಮುಸ್ಲಿಂ ರಾಷ್ಟ್ರ ಏನಾದರೂ ಮಾಡುತ್ತಾರಾ? ಇಂತಹ ನಾಯಕರು ಇರೋವರೆಗೆ ಈ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.