MLA S R Srinivas: ಲಿಂಕ್ ಕೆನಾಲ್ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿಯ ನೀಡಿದ್ದೇನೆ: ಶಾಸಕ ಎಸ್ ಆರ್ ಶ್ರೀನಿವಾಸ್*
ತಾಲೂಕಿನ ಮದನ ಘಟ್ಟ, ಸಾರಿಗೆ ಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಒಟ್ಟು 5 ಕೋಟಿ ರೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಚಿವ ಸ್ಥಾನಕ್ಕೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಒಂದು ಬಾರಿ ಮಾತ್ರ ಕೇಳಿದ್ದು, ಸಾಧಕ ಬಾಧಕಗಳನ್ನು ನೋಡಿ ವಿಚಾರ ಮಾಡುವ ಭರವಸೆ ನೀಡಿದ್ದಾರೆ. ಹಾಗಾಗಿ ಅದನ್ನು ಮೀರಿ ಪ್ರತಿನಿತ್ಯ ಅವರ ಮನೆಗೆ ಹೋದರೆ ಸರಿ ಹೋಗುವುದಿಲ್ಲ
-
ಗುಬ್ಬಿ : ಲಿಂಕ್ ಕೆನಾಲ್ ವಿಚಾರವಾಗಿ ಆರಂಭದಿಂದಲೂ ನನ್ನ ವಿರೋಧ ಇದೆ. ನಾಲೆ ಅಗಲೀ ಕರಣ ಮಾಡಿ ಲಿಂಕ್ ಕೆನಾಲ್ ಬೇಡ ಎಂದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದೇನೆ ಎಂದು ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ ಆರ್ ಶ್ರೀನಿವಾಸ್ (KSRTC Corporation Board Chairman MLA S R Srinivas) ತಿಳಿಸಿದರು.
ತಾಲೂಕಿನ ಮದನ ಘಟ್ಟ, ಸಾರಿಗೆ ಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಒಟ್ಟು 5 ಕೋಟಿ ರೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಚಿವ ಸ್ಥಾನಕ್ಕೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಒಂದು ಬಾರಿ ಮಾತ್ರ ಕೇಳಿದ್ದು, ಸಾಧಕ ಬಾಧಕಗಳನ್ನು ನೋಡಿ ವಿಚಾರ ಮಾಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Gubbi News: ಇಂದು ಅದ್ದೂರಿ ಬಸವ ಜಯಂತಿ: ಯಶಸ್ವಿಗೆ ಆಚರಣಾ ಸಮಿತಿ ಮನವಿ
ಹಾಗಾಗಿ ಅದನ್ನು ಮೀರಿ ಪ್ರತಿನಿತ್ಯ ಅವರ ಮನೆಗೆ ಹೋದರೆ ಸರಿ ಹೋಗುವುದಿಲ್ಲ ಎಂದ ಅವರು, 125 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ರಿಸೀವ್ ಸೆಂಟರ್ ಮಾಡುತ್ತಿದ್ದು, ತಾಲೂಕಿನಲ್ಲಿ 7ಸಾವಿರ ಟಿ ಸಿ ಇದ್ದು. ಎಲ್ಲಾ ರೈತರು ಪಂಪ್ ಮೋಟಾರ್ ಅಳವಡಿಸಿದ ಕಾರಣ ವಿದ್ಯುತ್ ಸಮಸ್ಯೆ ಉಂಟಾಗಿದೆ. ಯರಬಳ್ಳಿ, ನಲ್ಲೂರು, ತಾಳೆಕೊಪ್ಪ, ಹಂಡನಹಳ್ಳಿ ಸೇರಿದಂತೆ ಹಲವು ಕಡೆ ಎಂಎಸ್ಎಸ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ರಾಮಲಿಂಗೇಗೌಡ, ರವಿ, ಸಣ್ಣರಂಗಯ್ಯ, ಪವನ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.