ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhatkal News: ಭಟ್ಕಳದಲ್ಲಿ ಹಿಂದೂಗಳ ಮುರಿನಕಟ್ಟೆ ಒಡೆಯಲು ಮುಸ್ಲಿಮರ ಯತ್ನ; ತಡೆಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ!

ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಮುರಿನಕಟ್ಟೆ ತೆರವು ಮಾಡಲಾಗಿತ್ತು. ಹೀಗಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಮುರಿನಕಟ್ಟೆ ಮರು ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಮುಸ್ಲಿಂ ಸಂಘಟನೆ ಭಾರಿ ವಿರೋಧ ವ್ಯಕ್ತಪಡಿಸಿದೆ. ಸಂಜೆ ಏಕಾಏಕಿ ಜಮಾಯಿಸಿದ ನೂರಾರು ಮುಸ್ಲಿಮರು, ಮುರಿನ ಕಟ್ಟೆಯನ್ನು ಒಡೆಯಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ.

ಭಟ್ಕಳ: ಹಿಂದೂಗಳ ಮುರಿನಕಟ್ಟೆ (Murin Katte) ಮರು ನಿರ್ಮಾಣ ವಿವಾದ ಸಂಬಂಧ ಭಟ್ಕಳದಲ್ಲಿ (Bhatkal News) ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮುರಿನಕಟ್ಟೆ ಒಡೆಯಲು ಮುಸ್ಲಿಮರು ಯತ್ನಿಸಿದ್ದು, ಈ ವೇಳೆ ಅವರನ್ನು ತಡೆಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಭಟ್ಕಳ ನಗರದ ವೆಂಕಟಾಪುರದ ಜಾಗಟೆಬೈಲ್‌ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಾದಿಕಾಲದಿಂದಲೂ ದೇವರ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಮುರಿನಕಟ್ಟೆ ತೆರವು ಮಾಡಲಾಗಿತ್ತು. ಹೀಗಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಮುರಿನಕಟ್ಟೆ ಮರು ನಿರ್ಮಾಣ ಮಾಡಲಾಗಿತ್ತು.

ಮುರಿನಕಟ್ಟೆ ಮರು ನಿರ್ಮಾಣಕ್ಕೆ ಮುಸ್ಲಿಂ ಸಂಘಟನೆ ಭಾರಿ ವಿರೋಧ ವ್ಯಕ್ತಪಡಿಸಿ, ಕಟ್ಟೆಯನ್ನು ತೆರವು ಮಾಡಲು ಆಗ್ರಹಿಸಿತ್ತು. ಸಂಜೆ ಏಕಾಏಕಿ ಜಮಾಯಿಸಿದ ನೂರಾರು ಮುಸ್ಲಿಮರು, ಮುಂಜಾನೆ ನಿರ್ಮಾಣ ಮಾಡಿದ್ದ ಮುರಿನ ಕಟ್ಟೆಯನ್ನು ಒಡೆದಿದ್ದಾರೆ. ಈ ಸಂದರ್ಭದಲ್ಲಿ ತಡೆಯಲು ಯತ್ನಿಸಿದ ಪೋಲಿಸರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಇದರಿಂದ ಭಟ್ಕಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.