ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಪಂದನಾ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಹಾಕಿದೆ: ಡಾ.ಮೇತ್ರಿ

ಕೇವಲ ಸಾರ್ವಜನಿಕರ ತಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿಯೇ ಒಳ್ಳೆಯ ಸೇವೆ ಸಿಗುತ್ತದೆ ಎಂಬ ಮನೋಧೋರಣೆ ತಗೆದು ಹಾಕಿ ನಮ್ಮಲ್ಲಿಯೂ ಕೂಡಾ ಸುಸಜ್ಜಿತ ಆಸ್ಪತ್ರೆ ಇದೆ ಎಂಬ ನಂಬಿಕೆಯಿಂದ ಬನ್ನಿ. ನಮ್ಮ ಆಸ್ಪತ್ರೆಯಲ್ಲಿ ೨೪*೦೭ ನಿರತಂತರ ವೈದ್ಯರು ಲಭ್ಯವಿರುತ್ತಾರೆ. ಅಂಬುಲೇನ್ಸ್, ತುರ್ತು ಚಿಕಿತ್ಸಾ ವಿಭಾಗ, ಇಸಿಜಿ, ಆಪರೇಶನ್ ಥಿಯೇಟರ್, ಎಕ್ಸರೇ, ಮೇಡಿಕಲ್, ವೇಂಟಿಲಿಟರ್, ಐಸಿಯು, ಒಳರೋಗಿಗಳ ವಿಭಾಗ, ಲ್ಯಾಬ್ ಇನ್ನು ಇತರೆ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ

ಸ್ಪಂದನಾ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಹಾಕಿದೆ

ಸ್ಪಂದನಾ ಆಸ್ಪತ್ರೆಯಲ್ಲಿ ಡಾ.ಲಕ್ಷ್ಮೀಕಾಂತ ಮೇತ್ರಿ ಪತ್ರಿಕಾಗೋಷ್ಠಿ ನಡೆಸಿದರು.

Profile Ashok Nayak Jul 20, 2025 11:39 PM

ಇಂಡಿ: ಸ್ಪಂದನಾ ಆಸ್ಪತ್ರೆ ಜು.೩೦ರಂದು 1 ವರ್ಷಗಳ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿದ್ದು ಸಾಕಷ್ಟು ಅನುಭವಿ ನುರಿತ ವೈದ್ಯರಿಂದ ಅತ್ಯಂತ ಕ್ಲಿಷ್ಟಕರ ಆಪರೇಶನ್ ಮಾಡಿ ಯಶಸ್ವಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಡಾ.ಲಕ್ಷ್ಮೀಕಾಂತ ಮೇತ್ರಿ ಹೇಳಿದರು.

ಪಟ್ಟಣದ ಸ್ಪಂದನಾ ಆಸ್ಪತ್ರೆ ಆವರಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ೧ ವರ್ಷಗಳಿಂದ ಸ್ಪಂದನಾ ಆಸ್ಪತ್ರೆಯ ವೈದ್ಯರ ತಂಡ ಸಾಕಷ್ಟು ಕೆಲ ಆಸ್ಪತ್ರೆಗಳಿಂದ ಆಗದೆ ಇರುವ ರೋಗವನ್ನು ಚಾಲೆಂಜ್‌ ಅನ್ನಾಗಿ ಸ್ಪೀಕರಿಸಿ ರೋಗ ವಾಸಿ ಮಾಡಿದ್ದಾರೆ. ಇದೇ ೧೦ ದಿನಗಳ ಹಿಂದೆ ಪುಟ್ಟ ಬಾಲಕಿ ಅಪಘಾತದಿಂದ ತಲೆಗೆ ಪೆಟ್ಟಾಗಿ ಕಾಲು ಮುರಿದುಕೊಂಡು ಕೋಮಾದಲ್ಲಿ ಹೋದಾಗ ಬಡವರು ಇರುವದರಿಂದ ಸ್ಪಂದನಾ ಆಸ್ಪತ್ರೆಗೆ ಬಾಲಕಿಯನ್ನು ತುರ್ತು ಸೇವೆಗೆ ತಂದಾಗ ವೈದ್ಯರು ಪರೀಕ್ಷಿಸಿದಾಗ ವೇಂಟಿಲೇಟರ್ ಸಹಾಯದಿಂದ ಆಪರೇಶನ್ ಮಾಡಿ ಬಡ ಬಾಲಕಿ ಜೀವ ಉಳಿಸಿದ್ದಾರೆ.

ಇದನ್ನೂ ಓದಿ: Indi (Vijayapura) News: 19 ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಮಂದಹಾಸ: ಶಾಸಕ ಯಶವಂತರಾಯಗೌಡ ಪಾಟೀಲ

೧ ವರ್ಷದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಒಳರೋಗಿಗಳ ಚಿಕಿತ್ಸೆ ೧೪ ನೂರು ,ಓ.ಪಿ.ಡಿ ೬ ನೂರು , ೯೦ ಕ್ಲಿಷ್ಟಕರ ಆಪರೇಶನ್ ಚಿಕಿತ್ಸೆ ೮೦ ಕಾಲು ಮುರಿದ ರೋಗಿಗಳ ಚಿಕಿತ್ಸೆ ಮಾಡಿ ಸುಮಾರು ೪೦ ಕಡೆಗಳಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ರೋಗಿಗಳ ರೋಗ ಪತ್ತೆ ಹಚ್ಚಿ ಗುಣಪಡಿಸಲಾಗಿದೆ. ಸ್ಪಂದನಾ ಆಸ್ಪತ್ರೆ ವೈದ್ಯರು ಹಾಗೂ ನರ್ಸಗಳು ರೋಗಿಗಳ ಸೇವೆ ದೇವರ ಸೇವೆ ಎಂಬ ನಂಬಿಕೆ ಯಿಂದ ಕಾಯಕ ಮಾಡುತ್ತಿದ್ದಾರೆ.

ಕೇವಲ ಸಾರ್ವಜನಿಕರ ತಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿಯೇ ಒಳ್ಳೆಯ ಸೇವೆ ಸಿಗುತ್ತದೆ ಎಂಬ ಮನೋಧೋರಣೆ ತಗೆದು ಹಾಕಿ ನಮ್ಮಲ್ಲಿಯೂ ಕೂಡಾ ಸುಸಜ್ಜಿತ ಆಸ್ಪತ್ರೆ ಇದೆ ಎಂಬ ನಂಬಿಕೆಯಿಂದ ಬನ್ನಿ. ನಮ್ಮ ಆಸ್ಪತ್ರೆಯಲ್ಲಿ ೨೪*೦೭ ನಿರತಂತರ ವೈದ್ಯರು ಲಭ್ಯವಿರುತ್ತಾರೆ. ಅಂಬುಲೇನ್ಸ್, ತುರ್ತು ಚಿಕಿತ್ಸಾ ವಿಭಾಗ, ಇಸಿಜಿ, ಆಪರೇಶನ್ ಥಿಯೇಟರ್, ಎಕ್ಸರೇ, ಮೇಡಿಕಲ್, ವೇಂಟಿಲಿಟರ್, ಐಸಿಯು, ಒಳರೋಗಿಗಳ ವಿಭಾಗ, ಲ್ಯಾಬ್ ಇನ್ನು ಇತರೆ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೆಲ ದಿನಗಳಲ್ಲಿ ಆರೋಗ್ಯ ಸೇವೆಗಾಗಿ ಸರಕಾರದಿಂದ ಎ.ಪಿ.ಎಲ್. ಬಿ.ಪಿ.ಎಲ್ ನೆರವಿನೊಂದಿಗೆ ಚಿಕಿತ್ಸೆ ಹಾಗೂ ಕೆ.ಎಸ್ ಆರ್.ಟಿ.ಸಿ ನೌಕರರಿಗೆ ಅವರ ಇಲಾಖೆಯ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುವುದು.

ಡಾ.ಶಂಕರಗೌಡ ಪಾಟೀಲ, ಡಾ. ಶಾಂತಲಾ ಪಾಟೀಲ, ಡಾ.ಸೋಯಲ್ ಮಳಖೇಡ, ರಿತೇಶ ಮೂರಮನ್ ಸೇರಿದಂತೆ ಅನೇಕ ವೈದ್ಯರು ಹಾಗೂ ಸಿಬ್ಬಂದಿಗಳು ಇದ್ದರು.