ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ರಮವೆಸಗಿದ್ದಾರೆ

ಚುನಾವಣೆ ಪ್ರಕ್ರಿಯೆ ಫೆ.15ರಿಂದ ಆರಂಭವಾಗಿದ್ದು ಅದಕ್ಕಿಂತಲೂ ಒಂದು ದಿನ ಮುಂಚೆ ಯೇ ನೋಟಿಸ್ ಬೋರ್ಡಿಗೆ ಅರ್ಹ ಮತದಾರರ ಯಾದಿ ಹಾಗೂ ಚುನಾವಣೆ ಮಾಹಿತಿ ಅಂಟಿಸ ಬೇಕಿತ್ತು. ಆದರೆ ಅಂದು ನೋಟಿಸ್ ಬೋರ್ಡಿಗೆ ಹಚ್ಚದ ಕಾರಣ ಸಾರ್ವಜನಿಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಫೆ.15 ರಂದು ಕೇಳಿದಾಗ ಅಂದು ಬೆಳಿಗ್ಗೆ ನೋಟಿಸ್ ಬೋರ್ಡಿಗೆ ಮಾಹಿತಿ ಅಂಟಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಆನಂದ ಪವಾರ ಮಾತನಾಡಿದರು.

ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಇಂಗಳಗಿ ಚುನಾವಣೆ ಯಾದಿಯಲ್ಲಿ ಸಾಕಷ್ಟು ಅಕ್ರಮವೆಸಗ ಲಾಗಿದೆ ಎಂದು ಸಂಘದ ಅ ವರ್ಗದ ಸದಸ್ಯ ಆನಂದ ಪವಾರ್ ಸೇರಿದಂತೆ ಹಲವರು ಆರೋಪಿಸಿದ್ದಾರೆ. ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಅಂತಿಮ ಶೇರುದಾರರ ಪಟ್ಟಿಯಲ್ಲಿ ಅಪೂರ್ಣ ಶೇರ್ ಹೊಂದಿದ ಸದಸ್ಯ ರ ಹೆಸರು ಸಹ ಇವೆ. ಅಲ್ಲದೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮೂರಕ್ಕಿಂತ ಹೆಚ್ಚು ಸಹಿ ಮಾಡಿದ್ದರೂ ಸಹ ಅಂತಹವರ ಹೆಸರುಗಳನ್ನು ಕೈ ಬಿಡಲಾಗಿದೆ. ಅಂತಿಮ ಯಾದಿ ಯಲ್ಲಿನ ಸದಸ್ಯತ್ವ ಸಂಖ್ಯೆ ಹಾಗೂ ಸಂಘದ ಗಣಕಯಂತ್ರದಲ್ಲಿನ ಸದಸ್ಯತ್ವ ಸಂಖ್ಯೆ ಗಳನ್ನು ಪರಿಶೀಲಿಸಿದಾಗ ಎರಡೂ ಸಹ ಬೇರೆ-ಬೇರೆ ಇವೆ. ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ವಾಘ ಮೋರೆ ದೊಡ್ಡ ಪ್ರಮಾಣದ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Vijayapura (Indi) News: ಆಧುನಿಕ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ: ಡಾ.ಶಿವರಾಜ ಕೊಪ್ಪಾ

ಚುನಾವಣೆ ಪ್ರಕ್ರಿಯೆ ಫೆ.15ರಿಂದ ಆರಂಭವಾಗಿದ್ದು ಅದಕ್ಕಿಂತಲೂ ಒಂದು ದಿನ ಮುಂಚೆ ಯೇ ನೋಟಿಸ್ ಬೋರ್ಡಿಗೆ ಅರ್ಹ ಮತದಾರರ ಯಾದಿ ಹಾಗೂ ಚುನಾವಣೆ ಮಾಹಿತಿ ಅಂಟಿಸಬೇಕಿತ್ತು. ಆದರೆ ಅಂದು ನೋಟಿಸ್ ಬೋರ್ಡಿಗೆ ಹಚ್ಚದ ಕಾರಣ ಸಾರ್ವಜನಿಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಫೆ.15 ರಂದು ಕೇಳಿದಾಗ ಅಂದು ಬೆಳಿಗ್ಗೆ ನೋಟಿಸ್ ಬೋರ್ಡಿಗೆ ಮಾಹಿತಿ ಅಂಟಿಸಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದು ಬಲಾಢ್ಯರೇ ಮತ್ತೆ, ಮತ್ತೆ ಅಧಿಕಾರ ಹಿಡಿಯುಂತಾಗಿದೆ.

ಈ ಕುರಿತು ಸಹಾಯಕ ಉಪನಿಬಂಧಕರ ಕಾರ್ಯಾಲಯಕ್ಕೆ ಹಾಗೂ ಜಿಲ್ಲಾ ಸಹಾಯಕ ಉಪನಿಬಂಧಕರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು ಸಹ ಯಾವೊಬ್ಬ ಅಧಿಕಾರಿಗಳು ತನಿಖೆಯಾಗಲಿ, ಅಥವಾ ಸ್ಥಳಕ್ಕೆ ಬಂದು ಚೌಕಾಸಿ ಮಾಡುತ್ತಿಲ್ಲ, ಇದರಿಂದ ನೇರವಾಗಿ ಆಡಳಿತ ನಡೆಸುವವರು ಲಂಚದ ಬಲೆಯಲ್ಲಿ ಬಿದ್ದಿದ್ದಾರೆಂಬುದು ತಿಳಿಯುತ್ತದೆ. ಮುಗ್ಧ ರೈತರ ಸಂಘದಲ್ಲಿಯೂ ನೀಚ ರಾಜಕಾರಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಇದರ ಹಿಂದೆ ದೊಡ್ಡ-ದೊಡ್ಡ ರಾಜಕಾರಣಿಗಳ ಕೈವಾಡವೂ ಇದೆ ಎಂದು ಆರೋಪಿಸಿ ದರು.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಯಾದಿಯನ್ನು ತಯಾರು ಮಾಡಿ ಗ್ರಾಮದ ಜನತೆಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದರೆ ಸಾರ್ವಜನಿಕ ರೆಲ್ಲರೂ ಸೇರಿ ಉಗ್ರ ಹೋರಾಟಕ್ಕೆ ಅಣಿಯಾಗುತ್ತೇವೆ ಅದಕ್ಕೆ ನೇರವಾಗಿ ತಾಲೂಕಾ ಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.