Monday, 6th February 2023

ರಂಗಭೂಮಿ ನಟ ಕಾರ್ತಿಕ್‌ ಬ್ರಹ್ಮಾವರ ನಿಧನ

ಬ್ರಹ್ಮಾವರ: ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್‌ ಬ್ರಹ್ಮಾವರ (31) ಅವರು ನಿಧನ ಹೊಂದಿದರು. ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಹಲವಾರು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದ್ದು, ಕಲಾವಿದ ಮನು ಹಂದಾಡಿ ಅವರ ತಂಡದಲ್ಲಿ ಕೂಡ ಗುರುತಿಸಿಕೊಂಡಿದ್ದರು.

ಮಂದಾರ ಬೈಕಾಡಿ, ಭೂಮಿಕಾ ರಂಗತಂಡ ಹಾರಾಡಿ, ದುರ್ಗಾ ಕಲಾ ತಂಡ, ಖ್ಯಾತ ನಿರ್ದೇಶಕ ರಾಜ್‌ಗುರು ಹೊಸಕೋಟೆ ತಂಡ, ಅರೆಹೊಳೆ ಪ್ರತಿಷ್ಠಾನದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಕನಸು ಕಾರ್ತಿಕ್‌ ಹಲವಾರು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು.

ಖಾಸಗಿ ವಾಹಿನಿಯ ಕುಂದಾಪುರ ಕನ್ನಡ ಹಾಸ್ಯ ಕಾರ್ಯಕ್ರಮದಲ್ಲಿ ತೊಡಗಿದ್ದರು. ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದರು.

error: Content is protected !!