Monday, 30th January 2023

ಕಾವ್ಯ ಪರಂಪರೆಗೆ ಜ್ಞಾನವಿಶಿಷ್ಠಕಲ್ಪನಾ ಶಕ್ತಿ ಅತ್ಯವಶ್ಯ: ಸಂಶೋಧಕ ಡಿ.ಎನ್ ಅಕ್ಕಿ ಅಭಿಮತ

ಇಂಡಿ: ಕಾವ್ಯ ಪರಂಪರೆಗೆ ಜ್ಞಾನವಿಶಿಷ್ಠಕಲ್ಪನಾ ಶಕ್ತಿ ಮತ್ತು ಭಾವಸೋಕ್ಷö್ಮತೆಗಳು ಉತ್ತಮ ಕಾವ್ಯ ರಚನೆಗೆ ಅನಿವಾರ್ಯ ಮತ್ತು ಅತ್ಯವಶ್ಯ ಎಂದು ಸಾಹಿತಿ ಸಂಶೋಧಕ ಡಿ.ಎನ್ ಅಕ್ಕಿ ಹೇಳಿದರು.

ಅಗರಖೇಡ ರಸ್ತೆಯ ಎ.ಎಸ್ ಕೋಚಿಂಗ್ ಕ್ಲಾಸ್ ಭವನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ,ವಿಜಯಪೂರ ತಾಲೂಕಾ ಶಾಖೆ ಮಹಿಳಾ ಘಟಕ ಇಂಡಿ ರಾಜ್ಯೋತ್ಸವದ ಸಂಭ್ರಮಾಚರಣೆ ನಿಮಿತ್ಯ ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಕವಿಯಾದವರಿಗೆ ಸೋಕ್ಮಗ್ರಹಿಕೆ ವಿವಿಧ ಸನ್ನಿವೇಶ, ವಿಷಯಗಳನ್ನು ಆಳವಾಗಿ ಮನನ ಮಾಡಿಕೊಂಡು ಭಾವನೆಗಳನ್ನು ಹರಳು ಗಟ್ಟಿಸಿ ಭಾಷೆ ಮತ್ತು ಸರಳ ಶೈಲಿಯಲ್ಲಿ ಶಾಬ್ದಿಕ ಅಭಿವ್ಯಕ್ತಿಯನ್ನು ಪದ್ಯಗಳಲ್ಲಿ ಹಿಡಿದಿಡಬೇಕು.

ಕವಿತೆಗಳ ಬರವಣಿಗೆ ಕರಿಯನ್ನು ಕನ್ನಡಿಯಲ್ಲಿ ,ಅನಂತವನ್ನು ಅಣುವಿನಲ್ಲಿ ತೋರಿಸಿ ದಂತೆ ಪವಾಡ ಸದೃಶ್ಯ ಸಿದ್ದಿಗಳನ್ನು ಕೃತಿ ,ಕವನಗಳಲ್ಲಿರಬೇಕು. ಗಡಿನಾಡಿನಲ್ಲಿ ಯುವ ಕವಿಗಳು ಸಾಹಿತಿಕ ಸ್ಪೂರ್ತಿ ಸೇಲೆಯಾಗಿ ಹೊರಹೋಮುತ್ತಿರುವುದು ಸಂತಸ ತಂದಿದೆ ಎಂದು ಯುವಕವಿಗಳ ಕವನ ವಾಚನ ಕೇಳಿ ಸಂತಸ ವ್ಯಕ್ತಪಡಿಸಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಕೇವಲ ಕರ್ನಾಟಕ ರಾಜ್ಯೋ ತ್ಸವ ದಿನದಂದು ಕನ್ನಡದ ಭಾಷೆ,ಸಾಹಿತ್ಯೆ , ಸಂಸ್ಕೃತಿಯ ಬಗ್ಗೆ ಸ್ಮರಣೆ ಮಾಡಿದರೆ ಸಾಲದು ಪ್ರತಿಯೋಬ್ಬ ಕನ್ನಡಿಗರಲ್ಲಿ ಕನ್ನಡದ ಸ್ವಾಭಿಮಾನದ ಕೆಚ್ಚು ಇರಬೇಕು. ನಮ್ಮ ಸಮಾಜದಲ್ಲಿ ಸ್ತ್ರೀ ಪುರುಷ ಅಸಮಾನತೆ ಕಡಿಮೆಯಾಗಿಲ್ಲ ಮಹಿಳೆಯರು ಮಾಡುವ ಪ್ರತಿಯೊಂದು ಕೆಲಸ ,ಕಾರ್ಯ ಚಟುವಟಿಕೆಗಳಿಗೆ ಪುರುಷರು ಹಿಂಜರಿ ಯುತ್ತಾರೆ. ಇದರಿಂದ ಮಹಿಳೆಯರಲ್ಲಿ ಆತಂಕ, ದುಗುಡ ಬರುತ್ತದೆ. ಕೇವಲ ಆರಂಭ ಶೂರರಂತೆ ಹುರಿದುಂಬಿಸಿದರೆ ಸಾಲದು ಮುಂಬರುವ ದಿನಗಳಲ್ಲಿ ಸಾಹಿತ್ಯೆ ಕ್ಷೇತ್ರವನ್ನು ಎಲ್ಲರೂ ಸೇರಿ ಗಡಿನಾಡಿಲ್ಲಿ ಮತ್ತಷ್ಟು ಗಟ್ಟಿಗೋಳಿಸೋಣ ಎಂದು ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ ಹೇಳಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ,ವಿಜಯಪೂರ ತಾಲೂಕಾ ಶಾಖೆ ಮಹಿಳಾ ಘಟಕ ಇಂಡಿ ರಾಜ್ಯೋತ್ಸವದ ಸಂಭ್ರಮಾಚರಣೆ ನಿಮಿತ್ಯ ಕವಿ ಗೋಷ್ಠಿ ಮಾಡಿರುವ ಉದ್ದೇಶ ಗ್ರಾಮೀಣ ಭಾಗದ ಮಹಿಳೆಯರಿಗೆ ಹಾಗೂ ಯುವಕವಿಗಳನ್ನು ಗುರುತಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿ ಗಡಿಭಾಗದಲ್ಲಿ ಉತ್ತೇಜಿಸುವ ಗುರಿಯಾಗಿದೆ. ಮಹಿಳೆಯರಿಂದ ಪ್ರಾರಂಭವಾದ ಸಾಹಿತ್ಯ ವೇದಿಕೆ ಮುಂಬರುವ ದಿನಗಳಲ್ಲಿ ವಿನೂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರು ಮತ್ತಷ್ಟು ಮುಖ್ಯವಾಹಿನಿಗೆ ಬರುವಂತೆ ಮಾಡಲಾ ಗುವುದು ಎಂದು ತಾಲೂಕಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಡಾ.ಕಾಂತು ಇಂಡಿ ಹೇಳಿದರು.

*

ಭಾಷೆ ಎಂಬ ಬೆಳ್ಳಿ ಇರದಿದ್ದರೆ ಈ ಪ್ರಪಂಚ ಕತ್ತಲಾಗುತ್ತಿತ್ತು. ಕನ್ನಡ ಭಾಷೆ ಉಳಿದೇಲ್ಲಾ ಭಾಷೆಗಳಿಗಿಂತ ಶ್ರೀಮಂತವಾಗಿರು ವುದಕ್ಕೆ ಕನ್ನಡ ಬದುಕಿನ ಹತ್ತಿರ ಮತ್ತು ಭಾವನೆಗಳಿಂದ ಕೂಡಿದೆ. ನಾಗರೀಕತೆ ಬೆಳೆದಂತೆ ಸಂಸ್ಕೃತಿಯನ್ನು ಕಡೆಗಣಿಸುವುದು ಭಾಷೆಗೆ ಅಪಾಯಕಾರಿ ಕನ್ನಡ ಭಾಷೆಯ ಸಂಸ್ಕೃತಿ,ಸಾಹಿತ್ಯ ಮೈಳೆವಿಸಿಕೊಳ್ಳುವುದರ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡರೆ ಕನ್ನಡ ಭಾಷೆ ವಿಶ್ವಜ್ಯೋತಿಯಾಗಿ ನಾಡು ಬೆಳಗುತ್ತದೆ. ಪತ್ರಕರ್ತ ಶರಣಬಸಪ್ಪಾ,ಕಾಂಬಳೆ.

ಮುಖ್ಯ ಅತಿಥಿ ರುಕ್ಮೀಣಿ ನಾಯ್ಕೋಡಿ ,ಶಿಕ್ಷಕ ಹಾಗೂ ಸಾ.ಸಂ.ವೇದಿಕೆ ಉಪಾಧ್ಯಕ್ಷ ಜಿ.ಜಿ ಬರಡೋಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕವಿಗಳಾದ ಧಾನಮ್ಮಾ ಹಿರೇಮಠ, ಭವಾನಿ ಗುಳೇದಗುಡ್ಡ, ಸರೋಜನಿ ಮಾವಿನಮರ, ಜಯಶ್ರೀ ಅಳ್ಳಗಿ, ವಿಧ್ಯಾಶ್ರೀ ಕುಂಬಾರ, ಬಸಮ್ಮಾ ಪೊಲೀಸಪಾಟೀಲ, ರಿಯಾನಾ ಪಾಸ್ಟ್,ಬಿ.ಈ ಹಿರೇಮಠಕಾವ್ಯವಾಚನ ಮಾಡಿದರು. ಶಿಕ್ಷಕ ಬಸವರಾಜ ಗೋರನಾಳ, ರಾಜುಕುಲಕರ್ಣಿ, ಬಿ.ಈ ಹಿರೇಮಠ, ಸಾಹಿತಿಕ ಸಂಸ್ಕೃತಿಕ ವೇದಿಕೆ ಮಹಿಳಾ ಘಟಕದ ಶಶೀಕಲಾ ಬೆಟಗೇರಿ, ಧಾನಮ್ಮಾ ಹಿರೇಮಠ, ರಾಜೇಶ್ವರಿ ಕ್ಷತ್ರಿ ಸೇರಿದಂತೆ ಅನೇಕ ಪದಾಧಿಕಾರಿಗಳು ಇದ್ದರು. ಶಶೀಕಲಾ ಬೆಟಗೇರಿ ಸ್ವಾಗತಿಸಿ, ಸಂಗೀತಾ ಡೋಳ್ಳಿನ ನಿರೂಪಿಸಿ ರೀಯಾನಾ ಪಾಸ್ಟ್ ವಂದಿಸಿದರು.

error: Content is protected !!