Friday, 7th May 2021

ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ

ಮಧುಗಿರಿ: ಕರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಸರ್ಕಾರವನ್ನು ದೂಷಿಸುವ ಬದಲು ಜನರೇ ಸ್ವಯಂ ಪ್ರೇರಿತ ವಾಗಿ ಸಾಮಾಜಿಕ ಅಂತರ -ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಓಡಾಟದಿಂದ ದೂರವಿರಿ ಎಂದು ಪುರಸಭಾ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.

ಗುರುವಾರ ಪುರಸಭಾ ವ್ಯಾಪ್ತಿಯಲ್ಲಿ ಅಗ್ನಿ ಶಾಮಕದಳದಳದವರೊಂದಿಗೆ ಪುರಸಭೆಯವರು ನಾಲ್ಕು ಸಾವಿರ ಲೀಟರ್ ನಷ್ಟು ಸ್ಯಾನಿಟೈಸ್ ನ್ನು ಪ್ರಮುಖ ರಸ್ತೆಗಳಲ್ಲಿ ಸ್ವತಃ ಮಾಡುವ ಮೂಲಕ ನಾಗರಿಕರಿಗೆ ಸಂದೇಶ  ನೀಡಿದರು.

ಪಟ್ಟಣದಲ್ಲಿ ಜನ ಬಿಡದಿ ಇರುವ ಸ್ಥಳಗಳಲ್ಲಿ ಪುರಸಭಾ ವತಿಯಿಂದ ದಿನ ಬಿಟ್ಟು ದಿನ ಸ್ಯಾನಿಟೈಸ್ ಮಾಡ ಲಾಗುತ್ತಿದೆ. ಸಾರ್ವಜನಿಕರು ಸಹಾ ಸರ್ಕಾರದ ಮೇಲೆ ಅವಲಂಬಿತರಾಗದೆ ಈ ವೈರಸ್ ಅನ್ನು ಓಡಿಸಲು ಸನ್ನದ್ಧರಾಗಬೇಕು. ಸಾರ್ವಜನಿಕರು ಮತ್ತು ಸರ್ಕಾರ ಒಟ್ಟಾಗಿ ಹೋರಾಟ ಮಾಡಬೇಕು, ರಸ್ತೆಗಳಲ್ಲಿ ಅನಗತ್ಯ ವಾಗಿ ಓಡಾಡಬೇಡಿ ಮಾಸ್ಕ್ ಧರಿಸಿ ಪ್ರಾಣ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ್ ಆರೋಗ್ಯ ನಿರೀಕ್ಷಕ ಬಾಲಾಜಿ, ಅಗ್ನಿಶಾಮಕದಳದವರು ಇದ್ದರು.

Leave a Reply

Your email address will not be published. Required fields are marked *