Friday, 2nd December 2022

ಖಾಸಗಿ ಬಸ್ಸು ಪ್ರಯಾಣ: ಒಂದಿಷ್ಟು ವೈರುಧ್ಯಗಳು…

ಮೋಹನದಾಸ ಕಿಣಿ ಕಾಪು
ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಎಂಟು, ವಿಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ತಲಾ ಎರಡರಂತೆ ನಾಲ್ಕು ಸೀಟು ಮೀಸಲು ಎಂಬ ಫಲಕವಿರುತ್ತದೆ. ಸರಕಾರಿ ಬಸ್ಸುಗಳಲ್ಲಿ ಈ ಮೀಸಲುನ್ನು ಸರಿಯಾಗಿ ಪಾಲಿಸಲಾಗುತ್ತದೆ. ಆದರೆ ಖಾಸಗಿ ಬಸ್ಸುಗಳಲ್ಲಿ, ಮುಖ್ಯವಾಗಿ ಕರಾವಳಿ ಜಿಲ್ಲೆಗಳ ಖಾಸಗಿ ಬಸ್ಸುಗಳಲ್ಲಿ ಇದು ಪಾಲಿಸಲ್ಪಡುತ್ತಿಿಲ್ಲ. ಈ ವಿಷಯದಲ್ಲಿ ಸಹಕರಿಸಬೇಕಾದ ಪ್ರಯಾಣಿಕರ ಉದ್ಧಟತನದ ವರ್ತನೆಗೆ ಬೆದರಿಯೋ, ನಮಗೇಕೆ ಉಸಾಬರಿ ಎಂಬ ಅಸಡ್ಡೆೆಯಿಂದಲೋ ಬಹುತೇಕ ನಿರ್ವಾಹಕರು ಈ ನಿಟ್ಟಿಿನಲ್ಲಿ ನಿರ್ಲಿಪ್ತರಾಗಿರುತ್ತಾಾರೆ. ಇದರಿಂದ ತೊಂದರೆ ಮಾತ್ರ ವಯೋವೃದ್ಧರು ಮತ್ತು ವಿಚೇತನರು.

ಬಹುತೇಕ ಬಸ್ಸುಗಳಲ್ಲಿ ಮಹಿಳೆಯರಿಗಾಗಿ ಮೀಸಲಿರುವ ಸೀಟುಗಳು ಖಾಲಿ ಇದ್ದರೂ ಇತರ ಸೀಟಿನಲ್ಲಿ ಮಹಿಳೆಯರು ಅದರಲ್ಲೂ ಕಾಲೇಜು ವಿದ್ಯಾಾರ್ಥಿನಿಯರು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಮಾತ್ರವಲ್ಲದೆ, ಹಿರಿಯ ನಾಗರಿಕರಿಗೆ ಮತ್ತು ವಿಚೇತನರಿಗೆ ಮೀಸಲಿರಿಸಿದ ಸೀಟುಗಳನ್ನು ಕೂಡಾ ಆಕ್ರಮಿಸಿಕೊಳ್ಳುವ ಮಹಿಳೆಯರು ತಮಗೆ ಮೀಸಲಿರುವ ಸೀಟಿನಲ್ಲಿ ಹಿರಿಯ ನಾಗರಿಕರೇನಾದರೂ ಕುಳಿತಿದ್ದರೆ ಅವರನ್ನು ಎಬ್ಬಿಿಸಿ ತಮ್ಮ ಹಕ್ಕಿಿನ ಸೀಟು ಪಡೆಯಲು ಹಿಂಜರಿಯುವುದಿಲ್ಲ.

ಒಮ್ಮೆೆಯಂತೂ ಹಿರಿಯ ನಾಗರಿಕರಿಗೆ ಮೀಸಲಿದ್ದ ಸೀಟುಗಳಲ್ಲಿ ಕಾಲೇಜು ವಿದ್ಯಾಾರ್ಥಿನಿಯರು ಬೇರೆಲ್ಲೂ ಖಾಲಿ ಇಲ್ಲದಿದ್ದಾಗ ಮಹಿಳಾ ಸೀಟಿನಲ್ಲಿ ಕುಳಿತ ಒಬ್ಬ ವಯೋವೃದ್ಧರನ್ನು ಎಬ್ಬಿಿಸಿ ನಿಲ್ಲಿಸಿದ್ದನ್ನು ನಾನು ಸ್ವತಃ ನೋಡಿದ್ದೇನೆ. ಈ ವೈರುಧ್ಯವನ್ನು ಪ್ರಶ್ನಿಿಸಿದಾಗ ನಿರ್ವಾಹಕನ ಉತ್ತರ; ಹುಡುಗಿಯರನ್ನು ಎಬ್ಬಿಿಸಿದರೆ ಬಯ್ಯುತ್ತಾಾರೆ! ಆಗ ನನಗನ್ನಿಿಸಿದ್ದು; ಯಾರಿಗೆ ತಮ್ಮ ಹಕ್ಕುಗಳ ಬಗ್ಗೆೆ ಪ್ರಶ್ನಿಿಸಲು ಸಾಮರ್ಥ್ಯವಿಲ್ಲವೋ ಅವರಿಗೆ ಸಿಗಬೇಕಾದ ಹಕ್ಕು ಸಿಗುವುದೇ ಇಲ್ಲ.

ಇಲ್ಲಿ ಗಮನಿಸಬೇಕಾದದ್ದಿಷ್ಟೇ. ಸಂಸ್ಕಾಾರವೆಂದರೆ ದೇವರಿಗೆ ಕೈ ಮುಗಿಯುವುದು ಮಾತ್ರವಲ್ಲ, ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ದೇವರ ಪೂಜೆಗಿಂತಲೂ ಮಿಗಿಲು. ಎಂಬ ತತ್ವವನ್ನು ಪಾಲಿಸಿದಾಗ ಮಾತ್ರ ಸಾಮಾಜಿಕ ನ್ಯಾಾಯಕ್ಕೆೆ ಅರ್ಥ. ನಾನು ಕಳೆದ ವರ್ಷಗಳಲ್ಲಿ ಪಾಶ್ಚಿಿಮಾತ್ಯ ರಾಷ್ಟ್ರಗಳ ಪ್ರವಾಸದಲ್ಲಿ ಈ ಕುರಿತಂತೆ ಗಮನಿಸಿದ ಮೂಲ ವ್ಯತ್ಯಾಾಸ ಹೀಗಿದೆ; ನಮ್ಮ ದೇಶದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಮೀಸಲು ಇದೆ. ಅಲ್ಲಿ ಇಲ್ಲ. ಇಲ್ಲವೆಂದರೆ ಸಂಪೂರ್ಣವಾಗಿ ಇಲ್ಲವೆಂದರ್ಥವಲ್ಲ. ಸಾರ್ವಜನಿಕ ಸಾರಿಗೆಗಳಲ್ಲಿ ಮಾತ್ರವಲ್ಲದೆ, ವಾಹನ ನಿಲುಗಡೆ ಸ್ಥಳಗಳಲ್ಲಿ ಕೂಡಾ ಹಿರಿಯ ನಾಗರಿಕರಿಗೆ, ವಿಚೇತನರಿಗೆ ಮತ್ತು

ಕಂಕುಳಲ್ಲಿ ಮಗುವನ್ನು ಎತ್ತಿಿಕೊಂಡ ಮಹಿಳೆಯರಿಗೆ ಮಾತ್ರ ಈ ಎಲ್ಲಾ ಸೌಲಭ್ಯಗಳು ಮೀಸಲು. ಮಾತ್ರವಲ್ಲ ಮೀಸಲುನ್ನು ಉಲ್ಲಂಸಿದರೆ ದಂಡ ಕೂಡಾ ಇದೆ! ನಮಗೆ ಕಾನೂನು ಗೌರವಿಸುವ ತುಡಿತಕ್ಕಿಿಂತ, ಉಲ್ಲಂಸುವ ಚಪಲವೇ ಜಾಸ್ತಿಿ. ಪಾಶ್ಚಾಾತ್ಯ ರಾಷ್ಟ್ರಗಳನ್ನು ಅನುಕರಿಸಲು ತುದಿಗಾಲಿನಲ್ಲಿ ನಿಲ್ಲುವ ನಾವು ಇಂತಹುದನ್ನು ಅನುಸರಿಸುವ ಮನಸ್ಸು ಮಾಡುವುದಿಲ್ಲ ಎನ್ನುವುದೇ ವಿಪರ್ಯಾಸ.

ಇದಿಷ್ಟು ಮೀಸಲು ಸೀಟುಗಳ ಬಗೆಗಿನ ಪ್ರವರವಾದರೆ ಸರಕಾರಿ ಬಸ್ಸುಗಳಲ್ಲಿ ವಿದ್ಯಾಾರ್ಥಿಗಳಿಗೆ ಇರುವಂತೆ, ಹಿರಿಯ ನಾಗರಿಕರಿಗೂ ರಿಯಾಯಿತಿ ಅಪೇಕ್ಷಿಸುವುದರಲ್ಲಿ ತಪ್ಪೇನಿದೆ? ಯಾರಾದರೂ ಇಂತಹ ರಿಯಾಯಿತಿ ನೀಡುವಂತೆ ನಿರ್ವಾಹಕರನ್ನು ಕೋರಿಕೊಂಡರೆ ಯಾವುದೋ ವಿಚಿತ್ರ ಪ್ರಾಾಣಿಯನ್ನು ನೋಡುವಂತೆ ವರ್ತಿಸುತ್ತಾಾರೆ. ಆಡಿಕೊಳ್ಳುತ್ತಾಾರೆ. ಅಷ್ಟೇಕೆ ಒಮ್ಮೆೆ ನಾನೇ ನೋಡಿದಂತೆ ಇಂತಹ ವಿನಾಯಿತಿ ನೀಡುವಂತೆ ಕೇಳಿದ ವೃದ್ಧರೊಬ್ಬರಿಗೆ ದಬಾಯಿಸಿ ಅರ್ಧ ದಾರಿಯಲ್ಲಿ ಇಳಿಸಲು ಸಿದ್ದರಾದದ್ದೂ ಇದೆ. ಅದೂ ಕೇವಲ ಎರಡು ರುಪಾಯಿಗೆ. ಇದನ್ನು ಗಮನಿಸಿದ ನಾನು ಆ ಎರಡು ರುಪಾಯಿ ವೆಚ್ಚ ಭರಿಸುವುದಾಗಿ ತಿಳಿಸಿ, ಅವರನ್ನು ಇಳಿಸದಂತೆ ತಡೆದಿದ್ದೆ. ಇದೆಲ್ಲಾ ನೋಡುವಾಗ ನಮ್ಮಲ್ಲಿ ಮಾನವೀಯತೆ ಏಕೆ ನಶಿಸುತ್ತಿಿದೆ; ನಾಳೆ ನಮಗೂ ವಯಸ್ಸಾಾಗುತ್ತದೆ ಎಂಬುದನ್ನು ಇವರೇಕೆ ಮರೆಯುತ್ತಾಾರೋ ಎನಿಸುತ್ತದೆ.

ಪ್ರತಿದಿನ ಎಂಬಂತೆ ಇಂತಹ ಘಟನೆಗಳು ಇರುತ್ತದೆ. ಆದರೆ ನಾವು ಪ್ರಯಾಣಿಕರೋ ಸದಾ ನಿರ್ಲಿಪ್ತ! ಹಿರಿಯ ನಾಗರಿಕರಿಗೆ ಅವಮಾನವಾಗಲಿ, ನಿರ್ವಾಹಕರು, ಚಾಲಕರು ದರ್ಪದಿಂದ ವರ್ತಿಸಲಿ, ಮಿತಿ ಮೀರಿದ ವೇಗದಲ್ಲಿ ಸಾಗಲಿ, ಚಾಲಕರು ವಾಹನ ಚಲಾಯಿಸುತ್ತಿಿರುವಾಗ ಮೊಬೈಲ್ ಅಥವಾ ಪಕ್ಕದಲ್ಲಿರುವ ಪ್ರಯಾಣಿಕರೊಂದಿಗೆ ನಿರಂತರ ಸಂಭಾಷಣೆಯಲ್ಲಿ ನಿರತವಾಗಿರಲಿ. ನಮಗೇಕೆ ಉಸಾಬರಿ ಎಂಬ ಧೋರಣೆ. ಏನಾದರೂ ನಡೆದರೆ ಆಗ ಮಾತ್ರ ಎಲ್ಲರೂ ಎಚ್ಚರವಾಗುತ್ತಾಾರೆ!

ಇನ್ನು ಶಾಲಾ ಕಾಲೇಜು ವಿದ್ಯಾಾರ್ಥಿಗಳಿಗೆ ರಿಯಾಯಿತಿ ನೀಡುವುದಕ್ಕೆೆ ಸಂಬಂಧಿಸಿದಂತೆ, ಖಾಸಗಿ ಬಸ್ಸು ನಿರ್ವಾಹಕರು ಮತ್ತು ಚಾಲಕರ ವಿಚಿತ್ರವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಇದು ಅಷ್ಟಾಾಗಿ ಇಲ್ಲದಿದ್ದರೂ ಗ್ರಾಾಮೀಣ ಪ್ರದೇಶದಲ್ಲಿ ಸೀಮಿತ ಸಂಖ್ಯೆೆಯ ಸಾರಿಗೆ ವ್ಯವಸ್ಥೆೆ ಇರುವಲ್ಲಿ, ವಿದ್ಯಾಾರ್ಥಿಗಳನ್ನು ಕಂಡರೆ ನಿಲ್ಲಿಸದೇ ಚಲಿಸುವ ಬಸ್ಸುಗಳು ಬಹಳಷ್ಟಿಿವೆ. ಇದಕ್ಕೆೆ ಪರೋಕ್ಷವಾಗಿ ಸರಕಾರದ ಧೋರಣೆಯೂ ಕಾರಣವೆನ್ನಬಹುದು.

ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ ನೀಡಲಾಗುವ ರಿಯಾಯಿತಿ ಮೊತ್ತವನ್ನು ಸಾರಿಗೆ ನಿಗಮಕ್ಕೆೆ ಹಿಂಭರ್ತಿ ಮಾಡಿಕೊಡುವ ಸರಕಾರ ಇಂತಹುದೇ ಸೌಲಭ್ಯ ಒದಗಿಸುವ ಖಾಸಗಿ ಸಾರಿಗೆ ಸಂಸ್ಥೆೆಗಳಿಗೇಕೆ ಹಿಂಭರ್ತಿ ಮಾಡಿಕೊಡುವುದಿಲ್ಲ? ಸರಕಾರಿ ಸಾರಿಗೆ ನಿಗಮಕ್ಕೆೆ ಕೊಡುವ ಹಣವೂ ಹಣ. ಉಪಯೋಗ ಪಡೆಯುವವರು ತೆರಿಗೆ ಪಾವತಿಸುವ ನಾಗರಿಕರು. ಖಾಸಗಿ ಸಾರಿಗೆ ವ್ಯವಸ್ಥೆೆಯ ಉಪಯೋಗ ಪಡೆಯುವವರೂ ಅವರೇ. ಹಾಗಿರುವಾಗ ಎರಡರ ನಡುವೆ ಬೇಧವೇಕೆ? ಈ ಸೌಲಭ್ಯವನ್ನು ಖಾಸಗಿಯವರಿಗೂ ವಿಸ್ತರಿಸಿ, ಶಾಲಾ ಕಾಲೇಜುಗಳಿಗೆ ಹೆಚ್ಚಿಿನ ಸಂಖ್ಯೆೆಯಲ್ಲಿ ವಿದ್ಯಾಾರ್ಥಿಗಳು ಹೋಗುವ ವೇಳೆಯಲ್ಲಿ ವಿದ್ಯಾಾರ್ಥಿಗಳಿಗಾಗಿ ಒಂದೆರಡು ಬಸ್ಸುಗಳನ್ನು ಪ್ರತ್ಯೇಕವಾಗಿ ಓಡಿಸಿದರೆ ಸಾರ್ವಜನಿಕರಿಗೂ ಅನುಕೂಲ. ವಿದ್ಯಾಾರ್ಥಿಗಳಿಗೂ ಅನುಕೂಲ. ಈ ನಿಟ್ಟಿಿನಲ್ಲಿ ಸಂಬಂಧಿಸಿದವರು ಗಮನ ಹರಿಸಲಿ.

ಇದಿಷ್ಟು ಒಬ್ಬ ಪ್ರಯಾಣಿಕನ ದೃಷ್ಟಿಿಯ ವಿಮರ್ಶೆಯಾದರೆ, ಸಾರಾಸಗಟಾಗಿ ಚಾಲಕರು ಸರಿಯಿಲ್ಲ ವಾದವೂ ತಪ್ಪುು. ಇಲ್ಲಿ ಮೇಲ್ನೋೋಟಕ್ಕೆೆ ಕಾಣಿಸದ ಇನ್ನೊೊಂದು ಮುಖವೂ ಇದೆ. ಖಾಸಗಿ ಬಸ್ಸುಗಳ ಸಿಬ್ಬಂದಿ ಹೀಗೇಕೆ ವರ್ತಿಸುತ್ತಾಾರೆ ಎಂಬ ಕುರಿತು ಒಂದಿಷ್ಟು ವಿಮರ್ಶಿಸುವುದೂ ಪ್ರಸ್ತುತ ಎನಿಸುತ್ತದೆ. ಕರಾವಳಿಯ ಸಾರಿಗೆ ಬಸ್ಸುಗಳಲ್ಲಿ ಬಹಳಷ್ಟು ಬಸ್ಸುಗಳು ಏಕ ವ್ಯಕ್ತಿಿ ಮಾಲೀಕತ್ವದವುಗಳಾಗಿವೆ.

ಈ ಬಸ್ಸುಗಳ ಮಾಲೀಕರಿಗೆ ಪ್ರಯಾಣಿಕರ ಅಥವಾ ಸಿಬ್ಬಂದಿಗಳ ಹಿತಾಸಕ್ತಿಿಗಿಂತ ಆದಾಯವೊಂದೇ ಮುಖ್ಯ. ಕೆಲವು ಬಸ್ಸುಗಳ ನಿರ್ವಹಣಾ ವ್ಯವಸ್ಥೆೆ ಹೇಗಿದೆಯೆಂದರೆ ತೆರಿಗೆ ಪಾವತಿ ಮುಂತಾದ ಕಾನೂನಾತ್ಮಕ ಜವಾಬ್ದಾಾರಿ ಹೊರತುಪಡಿಸಿ ದೈನಂದಿನ ನಿರ್ವಹಣೆ ಚಾಲಕ ಮತ್ತು ನಿರ್ವಾಹಕರದ್ದು. ಸಂಜೆಯಾಗುವಾಗ ನಿಗದಿತ ಮೊತ್ತವನ್ನು ಮಾಲೀಕರಿಗೆ ಪಾವತಿಸಿದರಾಯಿತು. ಇಂತಹ ವ್ಯವಸ್ಥೆೆಯಿಂದಾಗಿ ಹೆಚ್ಚು ಆದಾಯ ಸಂಪಾದಿಸುವುದು ಅನಿವಾರ್ಯ. ಇದರಿಂದ ಚಾಲಕರ ಮತ್ತು ನಿರ್ವಾಹಕರ ಮೇಲೆ ವಿಪರೀತ ಮಾನಸಿಕ ಮತ್ತು ದೈಹಿಕ ಒತ್ತಡಗಳು ಬೀಳುತ್ತವೆ.

ಕೆಲವೊಮ್ಮೆೆ ನಿರಂತರ 15 ಗಂಟೆಗೂ ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಯಾವುದಾದರೂ ಕಾರಣಕ್ಕೆೆ ಒಂದು ನಿಲ್ದಾಾಣಕ್ಕೆೆ ತಲುಪಬೇಕಾದ ಸಮಯಕ್ಕಿಿಂತ ತುಸು ವಿಳಂಭವಾದರೂ ಪ್ರಯಾಣಿಕರು ಇನ್ನೊೊಂದು ಬಸ್ಸಿಿಗೆ ಹೋಗಿ ಸಿಗುವ ಆದಾಯ ತಪ್ಪಿಿಹೋಗುವ ಆತಂಕ ಚಾಲನೆಯಲ್ಲಿ ಮಾತ್ರವಲ್ಲದೆ ಪ್ರಯಾಣಿಕರೊಂದಿಗೆ ವರ್ತನೆಯಲ್ಲೂ ಒರಟುತನ ಮೇಳೈಸುವಂತೆ ಮಾಡುತ್ತದೆ. ಇದನ್ನು ನಿವಾರಿಸುವುದಕ್ಕೆೆ ಖಾಸಗಿ ಮತ್ತು ಸರಕಾರಿ ಬಸ್ಸುಗಳ ಸಿಬ್ಬಂದಿಗೆ ಕಾಲಕಾಲಕ್ಕೆೆ ಒತ್ತಡ ನಿರ್ವಹಣಾ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಈ ಮೂಲಕ ಬಹಳಷ್ಟು ಸಂಭಾವ್ಯ ಅನಾಹುತಗಳನ್ನು ತಪ್ಪಿಿಸಬಹುದೇನೋ.