Tuesday, 7th December 2021

ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌: ಸಚಿವ ಎಲ್.ಮುರುಗನ್

ಅಂತಾರಾಷ್ಟ್ರೀಯ ಮಟ್ಟಕ್ಕೆ ಐದು ಮೀನುಗಾರಿಕಾ ಬಂದರುಗಳ ಆಧುನೀಕರಣ

ಹೈದರಾಬಾದ್: ಎಲ್ಲಾ ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಅಡಿಯಲ್ಲಿ ಪ್ರಯೋಜನ ಗಳನ್ನು ವಿಸ್ತರಿಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು ತಯಾರಾಗುತ್ತಿವೆ ಎಂದು ಕೇಂದ್ರ ರಾಜ್ಯ ಸಚಿವ ಎಲ್.ಮುರುಗನ್ ಭಾನುವಾರ ಹೇಳಿದರು.

ನಮ್ಮ ಸರ್ಕಾರವು ಈಗಾಗಲೇ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿದೆ ಮತ್ತು ಮೀನುಗಾ ರರಿಗೂ ಆ ಸೌಲಭ್ಯವನ್ನು ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರು ತಿಳಿಸಿದರು.

‘ಈ ಸೌಲಭ್ಯವನ್ನು ಎಲ್ಲಾ ಮೀನುಗಾರರಿಗೆ ವಿಸ್ತರಿಸಬೇಕು. ಪ್ರತಿಯೊಬ್ಬ ಮೀನುಗಾರರು ಈ ಸೌಲಭ್ಯ ಪಡೆಯಬೇಕು ಮತ್ತು ಶೀಘ್ರದಲ್ಲೇ ಕೆಸಿಸಿ ಪಡೆಯುತ್ತಾರೆ. ಸರ್ಕಾರವು ಸಮುದ್ರ ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸುವ ಯೋಜನೆ ಹೊಂದಿದ್ದು, ಐದು ಮೀನುಗಾರಿಕಾ ಬಂದರುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಧುನೀಕರಿಸಿ ಸಂಸ್ಕರಣೆ ಘಟಕಗಳು, ಕೋಲ್ಡ್ ಸ್ಟೋರೇಜ್ ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.