Wednesday, 1st December 2021

ಜಯವೀರ ಬ್ರಾಹ್ಮಣ ಇತ್ಯಾದಿ ಕುರಿತು

ಪ್ರತಿಕ್ರಿಯೆ

*ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು.

ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಸಮಾಜದಲ್ಲಿ ಬ್ರಾಾಹ್ಮಣರು ನಿಜವಾದ ಅಸ್ಪಶ್ಯರು, ಶೋಷಿತರಾಗಿದ್ದಾಾರೆ.

ನನ್ನ ಮಾತು ತುಸು ಒರಟು. ಆದರೆ ಅಭಿಪ್ರಾಾಯ ಖಡಕ್, ಅದೂ ಸರಿ ಇದೂ ಸರಿ ಎಂದು ಹೇಳಿ ಗೊತ್ತಿಿಲ್ಲ. ಯಾರಾದರೂ ಸರಿ, ಹೇಳಬೇಕಾಗಿದ್ದನ್ನು ಹೇಳಿಯೇ ಹೇಳ್ತೇನೆ. ಹೆಚ್ಚೆೆಂದರೆ ಗುಂಡು ಹೊಡೆಯಬಹುದು, ಅದಕ್ಕೂ ನಾನು ರೆಡಿ. ಹೀಗೆ ಎರಡು ವರ್ಷಗಳ ಹಿಂದೆ ನೇರಾನೇರ ಹೇಳಿಕೊಂಡು ಅಂಕಣಕಾರರಾಗಿ ವಿಶ್ವವಾಣಿಯಲ್ಲಿ ಬರೆಯಲು ಆರಂಭಿಸಿದ ಉತ್ತರ ಕರ್ನಾಟಕ ದಿಟ್ಟ ಪತ್ರಕರ್ತ

ಜಯವೀರ ವಿಕ್ರಮ ಸಂಪತ್‌ಗೌಡ ಅವರು ಇಲ್ಲಿಯವರೆಗೂ ಬರೆದ ಪ್ರತಿವಾರದ ಬೇಟೆಯನ್ನು ತಪ್ಪದೇ ಓದಿಕೊಂಡು ಬರುತ್ತಿಿದ್ದೇನೆ.
ಅವರ ಪ್ರತಿ ಅಂಕಣವೂ ರೋಚಕವೇ ಆಗಿರುವುದು ಸುಳ್ಳಲ್ಲ. ಆದರೆ ಮೊನ್ನೆೆ ಬ್ರಾಾಹ್ಮಣರ ಕುರಿತು ಬರೆಯಲಾದ ‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಲೇಖನ ಓದಿ ಜಯವೀರರೊಂದಿಗೆ ನೇರವಾಗಿ ಮಾತನಾಡಬೇಕೆಂದು ಅನಿಸಿದ್ದರಿಂದ ಈ ಲೇಖನ. ಜಯವೀರ ಅವರು ಅಗತ್ಯಕ್ಕಿಿಂತ ಹೆಚ್ಚು ನಿಷ್ಟುರವಾದಿಗಳು, ವಸ್ತುನಿಷ್ಠ ವಿಷಯ ಕರ್ಮಠರು ಎಂಬುದು ತಿಳಿದೇ ಇದೆ. ಇದು ಪತ್ರಕರ್ತರಿಗಿರಬೇಕಾದ ಸಹಜ ಗುಣವಾದರೂ ಜಯವೀರರಿಗೆ ತುಸು ಹೆಚ್ಚೇ ಇರಲು ಸರಿ. ಇಂತಹ ಪತ್ರಕರ್ತರಾಗಲಿ, ಅಂಕಣಕಾರರಾಗಲಿ ಕನ್ನಡ ಪತ್ರಿಿಕೋದ್ಯಮದ ಮೇರು ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಪತ್ರಿಿಕೆಗಳಲ್ಲಿ ಮಾತ್ರ ಕಾಣಲು ಸಾಧ್ಯ. ಜಯವೀರರಷ್ಟೇ ತೀಕ್ಷ್ಣವಾಗಿದ್ದ ‘ಬೆತ್ತಲೆ ಜಗತ್ತಿಿನ ಪ್ರತಾಪ್‌ಸಿಂಹ’ ಅವರೂ ಸಹ ಅವರ ಪತ್ರಿಿಕೋದ್ಯಮದ ಆರಂಭಿಕ ದಿನಗಳಲ್ಲಿ ಹೀಗೆಯೇ ಇದ್ದರು.

ಅವರೊಂದಿಗೆ ಮಾತನಾಡುವುದೇ ಭಯಾನಕವಾಗಿತ್ತು. ಆದರೆ ಅವರ ಬರವಣೆಗೆ ಮಾತ್ರ ಓದುಗರನ್ನು ಸಮೀಪಿಸಿಕೊಳ್ಳುತ್ತಿಿತ್ತು. ಅವರ ಅಂಕಣ ನಿಂತುಹೋದ ಮೇಲೆ ಉತ್ತರ ಕರ್ನಾಟಕದ ಖಡಕ್ ಮಿರ್ಚಿಯಂತೆ ಜಯವೀರರನ್ನು ವಿಶ್ವೇಶ್ವರ ಭಟ್ಟರು ಪರಿಚಯಿಸಿದರು.

ಜಯವೀರರು ಪತ್ರಿಿಕೋದ್ಯಮದಲ್ಲಿನ ವ್ಯಕ್ತಿಿಸ್ವಾಾತಂತ್ರ್ಯ, ವಾಕ್‌ಸ್ವಾಾತಂತ್ರ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡವರು. ಅವರ ಬಗ್ಗೆೆ ಇಷ್ಟೆೆಲ್ಲಾಾ ಹೇಳಲು ಕಾರಣ ಒಬ್ಬ ಜನಪ್ರಿಿಯ ಅಂಕಣಕಾರರನ್ನು ಕೇವಲ ಒಂದು ಬರಹದ ಮೂಲಕ ಅಲ್ಲಗೆಳೆಯುವುದು ತಪ್ಪಾಾಗುತ್ತದೆ. ಆದ್ದರಿಂದ ಅದನ್ನು ಮೊದಲೇ ತಿಳಿಸಿ, ಜಯವೀರರ ಮೊನ್ನೆೆಯ ಅಂಕಣದ ವಿಷಯಕ್ಕೆೆ ಬರಬೇಕಾಗುತ್ತದೆ.

ಜಯವೀರರು ಬ್ರಾಾಹ್ಮಣರನ್ನು ಖಂಡಿಸಿ ಬರೆದಿರುವ ಲೇಖನದ ಮೂಲ ಹುಡುಕುತ್ತಾಾ ಹೊರಟರೆ, ಎರಡು ತಿಂಗಳ ಹಿಂದೆ ಬೆಂಗಳೂರಿನ ಶ್ರೀಸಾಯಿ ದತ್ತ ರಘುನಾಥ ಗುರೂಜಿ ಎಂಬುವವರು ಕೆಲ ವೈದಿಕ ಬ್ರಾಾಹ್ಮಣರು ತಮ್ಮ ವೃತ್ತಿಿಧರ್ಮದಲ್ಲಿನ ಅತಿಯಾಸೆ, ಅಸಹಜ, ಅನವಶ್ಯಕ ವಿಧಿಕರ್ಮಗಳು, ನಂಬಿ ಬಂದವರನ್ನು ದುರುಪಯೋಗಪಡಿಸಿಕೊಳ್ಳುವಿಕೆ, ಹೀಗೆ ಎಲ್ಲಾಾ ಜಾತಿಗಳಲ್ಲೂ ಇರಬಹುದಾದ, ಅಸಲಿಗೆ ಮನುಷ್ಯನಲ್ಲೇ ಸಹಜವಾದ ಸ್ವಾಾರ್ಥ ದುರಾಸೆಗಳ ಋಣಾತ್ಮಕ ನಡವಳಿಕೆ ಇರುವ ಬ್ರಾಾಹ್ಮಣರ ಕುರಿತು ಖಂಡಿಸಿ ಬರೆದಿದ್ದರು.

ಈ ಲೇಖನ ಪ್ರಕಟವಾದ ಕೂಡಲೇ ಗುರೂಜಿಗಳು ಸಮಸ್ತ ಬ್ರಾಾಹ್ಮಣರ ಕೆಂಗೆಣ್ಣಿಿಗೆ ಗುರಿಯಾಗಿ ಪೊಲೀಸ್ ಠಾಣೆಗೆ ದೂರು ನೀಡುವವರೆಗೂ ಹೋಯಿತು. ಆಗಲೂ ಗುರೂಜಿಗಳ ಆಶಯವನ್ನು ಬೆಂಬಲಿಸಿ ಜಯವೀರ ಗೌಡರು ಬಾಹ್ಮಣರೇ, ಏಕೆ ಹೀಗೆ? ಎಂಬಂತಹ ಧ್ವನಿಯಲ್ಲಿ ಅಂಕಣವನ್ನು ಬರೆದಿದ್ದರು. ಆ ಲೇಖನದಲ್ಲೂ ಬ್ರಾಾಹ್ಮಣರು ಇಂತಹ ತಪ್ಪುು ನಡವಳಿಕೆಯನ್ನು ತಿದ್ದಿಕೊಂಡು ತಮ್ಮ ಸಮಾಜವನ್ನು ಪವಿತ್ರವಾಗಿ ಉಳಿಸಿಕೊಳ್ಳಲು ವಿನಂತಿಸುವ ರೀತಿಯಲ್ಲೇ ಹೇಳಿದ್ದರು. ಅಲ್ಲಿಗೆ ವಿಷಯ ತಣ್ಣಗಾಗಿತ್ತು. ಆದರೆ ಮೊನ್ನೆೆ ರಘುನಾಥ ಗುರೂಜಿಯವರ ಒಂದು ಪತ್ರ (2019 ನವೆಂಬರ್ 18ರ ಸೋಮವಾರ) ವಿಶ್ವವಾಣಿಯ ಓದುಗರ ಓಣಿಯಲ್ಲಿ ‘ನೋವಿಗೆ ಕ್ಷಮೆ ಕೋರುತ್ತೇನೆ’ ತಲೆಬರಹದಲ್ಲಿ ಪ್ರಕಟಗೊಂಡಿತು.

ಸಾಮಾನ್ಯವಾಗಿ ರಾಜ್ಯಮಟ್ಟದಲ್ಲಿ ಪತ್ರಿಿಕೆಯ ಸಂಪಾದಕೀಯ ಪುಟಗಳಲ್ಲಿ ಪ್ರಕಟವಾಗುವುದೆಂದರೆ ಅಷ್ಟು ಸುಲಭವಾಗುವುದಿಲ್ಲ.
ಪತ್ರಿಿಕೋದ್ಯಮದಲ್ಲಿ ಸಂಪಾದಕೀಯ ಪುಟದ ಬರಹಗಳು ನ್ಯಾಾಯಾಲಯದ ಆದೇಶದಂತೆ, ಸೂಚಕದಂತೆ, ಎಚ್ಚರಿಕೆಯಂತೆ ಇರುತ್ತದೆ. ಅದು ಪತ್ರಿಿಕೆಯ ಧರ್ಮವೂ ಆಗಿರುತ್ತದೆ. ಸಾಮಾನ್ಯವಾಗಿ ಅಂತಹ ಬರಹಗಳಲ್ಲಿ ಕ್ಷಮೆ ಕೋರುವ ಪ್ರಸಂಗಳು ಬರುವುದಿಲ್ಲ. ಎಲ್ಲೋೋ ಸಾವಿರಕ್ಕೆೆ ಒಂದು ಅಂತಹ ಸ್ಥಿಿತಿಯನ್ನು ತಂದೊಡ್ಡಬಹುದು. ಅದರಲ್ಲೂ ವಿಶ್ವೇಶ್ವರ ಭಟ್ ಅವರಂತಹ ಮೇದಾವಿ ಸಂಪಾದಕರ

ಪತ್ರಿಿಕೆಗಳಲ್ಲಂತೂ ಅದರ ಖದರ್ ಬೇರೆಯಾಗಿರುತ್ತದೆ ಎಂಬುದು ಅವರ ಪತ್ರಿಿಕೆಯ ಓದುಗರರಿಗೆ ಗೊತ್ತು. ಆದರೆ ಗುರೂಜಿ ಅವರಂತಹವರು ಕೆಲ ವೈದಿಕ ಬ್ರಾಾಹ್ಮಣರ ದೋಷಗಳ ಕುರಿತು ಬರೆಯಲಾದ ಬರಹಕ್ಕೆೆ ಎರಡು ತಿಂಗಳುಗಳ ನಂತರ ಕ್ಷಮೆ ಕೋರುತ್ತಾಾರೆ ಎಂದರೆ ಏನರ್ಥ?. ಅವರ ಇಂತಹ ಮನಸ್ಥಿಿತಿಗೆ ತಲುಪಬೇಕಾದರೆ ಅವರನ್ನು ಒತ್ತಡವು ಯಾವ ಮಟ್ಟಕ್ಕೆೆ ತಂದು ನಿಲ್ಲಿಸಿರಬಹುದು. ಬಹುಶಃ ಇದೇ ಕ್ಷಮಾಪಣೆ ಪತ್ರ ಜಯವೀರರನ್ನು ಕೆರಳಿಸರಬಹುದು.

ರಘುನಾಥ ಗುರೂಜಿಯವರನ್ನು ಇಂತಹ ಹೀನಾಯ ಪರಿಸ್ಥಿಿತಿಗೆ ತಂದೊಡ್ಡಿಿದ ಸಮಾಜದ ಕೆಲವರ ನಡವಳಿಕೆಗಳನ್ನು ಬರಹದ ಮೂಲಕ ತೀವ್ರವಾಗಿ ಖಂಡಿಸಲು ‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ತಲೆಬರಹದ ಲೇಖನ ಬರೆದಿರುವುದು ಸುಳ್ಳಲ್ಲ. ಜಯವೀರರೊಂದಿಗೆ ಒಡನಾಟವಿಲ್ಲದಿದ್ದರೂ ಅವರನ್ನು ಹತ್ತಿಿರದಿಂದ ಬಲ್ಲವನಾಗಿ ಹೇಳಬೇಕೆಂದರೆ, ಅವರು ಇಲ್ಲಿಯವರೆಗೂ ಯಾರನ್ನೂ ಬಿಟ್ಟಿಿಲ್ಲ. ಜಿ. ಪರಮೇಶ್ವರ್ ಅವರ ಅಸಹಾಯಕ ಪರಿಸ್ಥಿಿತಿಯನ್ನು ವಿಶ್ಲೇಷಿಸಿ ವಿಧವೆಗೆ ಹೋಲಿಸಿದ್ದರು. ಒಕ್ಕಲಿಗ ಸಮುದಾಯದ ದೇವೇಗೌಡರು, ಕುಮಾರಸ್ವಾಾಮಿ, ಡಿ.ಕೆ. ಶಿವಕುಮಾರ್ ಅವರನ್ನೂ ಖಂಡಿಸಿದರು. ಹಿಂದುಳಿದ ಸಮುದಾಯ ಆಯೋಗದ ಅಧ್ಯಕ್ಷರಾಗಿದ್ದ ದ್ವಾಾರಕನಾಥ್ ಅವರು ಹವ್ಯಕ ಬ್ರಾಾಹ್ಮಣರ ಸಮಾವೇಶದ ಕುರಿತು ಎಲ್ಲಾಾ ಕನ್ನಡ ಪತ್ರಿಿಕೆಗಳಲ್ಲಿ ವಿಶೇಷ ವರದಿ ಬರೆದು, ಆ ಪತ್ರಿಿಕೆಗಳ ಸಂಪಾದಕರ ಜಾತಿಗಳನ್ನು ಲೆಕ್ಕಹಾಕಿ ಬ್ರಾಾಹ್ಮಣರನ್ನು ಖಂಡಿಸಿ ಬರೆದುಕೊಂಡಾಗ ಇದೇ ಜಯವೀರಗೌಡರು ದ್ವಾಾರಕಾನಾಥ್ ಅವರನ್ನು ಖಂಡಿಸಿ ಬರೆದು ಬ್ರಾಾಹ್ಮಣರ ಔದಾರ್ಯವನ್ನು ಎತ್ತಿಿ ಹಿಡಿದಿದ್ದರು.

ಜಯವೀರರನ್ನು ಖಂಡಿಸಿ ಮತ್ತೊೊಬ್ಬರು ಬರೆದ ಬೇಟೆ-ತೀಟೆ ಎಂಬ ವ್ಯಂಗಭರಿತ ಬರಹವನ್ನೂ ಇದೇ ವಿಶ್ವವಾಣಿಯಲ್ಲಿ ಪ್ರಕಟಿಸಲಾಗಿತ್ತು. ಇದು ಎರಡೂ ರೀತಿಯ ವಾದಗಳಿಗೆ ಪತ್ರಿಿಕೆ ಮುಕ್ತ ಅವಕಾಶವನ್ನು ನೀಡಿದ್ದು ಪತ್ರಿಿಕೆಯ ಹೆಚ್ಚುಗಾರಿಕೆ. ಈಗ ಇದೇ ಜಯವೀರರು ಬ್ರಾಾಹ್ಮಣತ್ವದ ಹುಳುಕುಗಳನ್ನು ವೇದ ಪುರಾಣಗಳಿಂದ ಎಳೆದು ತಂದು ಪ್ರಸ್ತಾಾಪಿಸಿ ಬ್ರಾಾಹ್ಮಣತ್ವದಲ್ಲಿರುವ ಕಹಿಸತ್ಯವನ್ನು ಹೇಳಿರುವುದು ಅವರನ್ನು ಬ್ರಾಾಹ್ಮಣರ ವಿರೋಧಿಯನ್ನಾಾಗಿಸುವ ಅಪಾಯವಿದೆ. ಇಲ್ಲಿನ ಇನ್ನೊೊಂದು ವಿಷಯವೆಂದರೆ ಈ ಲೇಖನ ಪ್ರಕಟಗೊಂಡಿರುವುದು ವಿಶ್ವೇಶ್ವರ ಭಟ್ ಅವರ ಪತ್ರಿಿಕೆಯಲ್ಲೇ ಎಂಬುದು ಹಲವರಿಗೆ ವಿಚಿತ್ರವಾಗಿ ಕಾಣುತ್ತಿಿದೆ.

ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಸಮಾಜದಲ್ಲಿ ಬ್ರಾಾಹ್ಮಣರು ನಿಜವಾದ ಅಸ್ಪಶ್ಯರು, ಶೋಷಿತರಾಗಿದ್ದಾಾರೆ. ಮಾತೆತ್ತಿಿದ್ದರೆ ಕೋಮುವಾದಿಗಳು, ಪುರೋಹಿತಶಾಹಿಗಳು, ಆರೆಸ್ಸಸ್ಸಿಿಗರು, ಚಡ್ಡಿಿಗಳು ಎಂದು ಕೆಲವರು ಆರೋಪ ಹೊರಿಸಿದ್ದಾಾರೆ.

ಕುರಿ ಹಳ್ಳಕ್ಕೆೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ಬ್ರಾಾಹ್ಮಣರು ಬಿದ್ದರೆ ಸಾಕು ಜನ್ಮಜಾಲಾಡಿ ಬಿಡುವ ಅಪಾಯವೇ ಹೆಚ್ಚು. ಅದಕ್ಕಾಾಗಿ ಗೂಬೆಗಳಂತೆ ಕಾದು ಕುಳಿತ ಮಂದಿಗಳಿದ್ದಾಾರೆ. ಪರಿಸ್ಥಿಿತಿ ಹೀಗಿರುವಾಗ ಜಯವೀರರು ಎಲ್ಲಾಾ ಜಾತಿಗಳಲ್ಲೂ ಇರುವಂಥ ದುಷ್ಟರನ್ನು ಪ್ರತ್ಯೇಕಿಸಿ ಖಂಡಿಸುವ ಬದಲಾಗಿ ಇಡೀ ಬ್ರಾಾಹ್ಮಣ ಸಮುದಾಯವನ್ನು ಎಳೆದಿರುವುದು ಸಹಜವಾಗಿ ಅಸಮಧಾನ ಮೂಡಿಸಿದೆ. ವಿಶ್ವವಾಣಿ ಸಂಪಾದಕರ ನಿಲುವನ್ನು ಅರಿಯದ ಎಷ್ಟೋೋ ಮಂದಿಗೆ ಪತ್ರಿಿಕೆಯ ಮೇಲೆ ಅಪವಾದ ಮೂಡಬಾರದೆಂಬುದು ಈ ಲೇಖನದ ಆಶಯ.

ನಮ್ಮ ಭಾರತೀಯ ಪರಂಪರೆಯಲ್ಲಿ ಬ್ರಾಾಹ್ಮಣರ ಪಾತ್ರವನ್ನು ಸರಳವಾಗಿ ಹೇಳಬೇಕೆಂದರೆ ಅವರದು ಒಬ್ಬ ಶಾಲೆಯ ಶಿಕ್ಷನ ಪಾತ್ರ. ವಿದ್ಯಾಾರ್ಥಿಗಳು ಯಾವ ಜಾತಿಧರ್ಮದವರೇ ಆಗಲಿ ಶಿಕ್ಷಕನಿಗೆ ಎಲ್ಲರೂ ಒಂದೇ. ನಮ್ಮ ಜಾನಪದ ಮತ್ತು ಗ್ರಾಾಮೀಣ ಸಮಾಜದಿಂದಲೂ ಬ್ರಾಾಹ್ಮಣರನ್ನು ಅಯ್ಯೋರೆ, ಬುದ್ದಿಗಳೇ, ರಾಯರೇ ಎಂದು ಸಂಬೋಧಿಸಿ ಗೌರವದಿಂದ ಕಾಣುವುದು ಸಹಜ ಮತ್ತು ನೈಜವಾದುದಾಗಿದೆ. ಪೂಜೆ ಪುನಸ್ಕಾಾರ, ಮಂತ್ರ ಹೋಮ ಹವನಗಳನ್ನು ಮಾಡಿಕೊಂಡು ಅವರ ಪಾಡಿಗೆ ಅವರು ಬದುಕುತ್ತಾಾರೆ ಹೊರತು ತಮ್ಮತನವನ್ನು ಬದಿಗೊತ್ತಿಿ ಎಲ್ಲದಕ್ಕೂ ಕಚ್ಚೆೆಕಟ್ಟಿಿ ನಮ್ಮೊೊಂದಿಗೆ ಪೈಪೋಟಿಗೆ ಇಳಿದು ಸ್ಪರ್ಧಿಸುವ ದುರುಳರಲ್ಲ ಎಂಬ ಪುಟ್ಟ ವಿವೇಚನೆ ಸಮಾಜದಲ್ಲಿದೆ. ಅದಕ್ಕೆೆ ಕೃತಜ್ಞತೆಯಾಗಿ ದೇವಾಲಯದಲ್ಲಿ ಮಂಗಳಾರತಿ ತಟ್ಟೆೆಗೆ ಹುಂಡಿಗೆ ಮತ್ತು ಪೂಜಾವಿಧಿಗಳನ್ನು ಮಾಡಿಸಿಕೊಂಡು ಕೈತುಂಬ ದಕ್ಷಿಣೆ ಅಕ್ಕಿಿಕಾಳು ಬೆಲ್ಲ ತುಪ್ಪ ನೀಡುತ್ತಾಾರೆಯೇ ಹೊರತು ಬೇರೇನಲ್ಲ.

ಬ್ರಾಾಹ್ಮಣರನ್ನು ಕೆಡುಕರಂತೆ ಕಾಣುವವರು ಬೇರೇನೂ ಬೇಡ, ನಮ್ಮ ಪೊಲೀಸ್ ಠಾಣೆಗಳಲ್ಲಿನ ಅಪರಾಧಿಗಳ ಇಲ್ಲಿಯವರೆಗಿನ ಜಾತಿಯನ್ನು ಸಮೀಕ್ಷೆ ಮಾಡಿನೋಡಲಿ. ಅಲ್ಲಿ ಬ್ರಾಾಹ್ಮಣರು ಖಂಡಿತಾ ಅಲ್ಪಸಂಖ್ಯಾಾತರೆಂಬುದು ಯಾರೇ ಆಗಲಿ ಒಪ್ಪುುವಂತ ವಿಚಾರ.
ಜಯವೀರ ಸಂಪತ್ ಗೌಡರು ಪುರಾಣದಲ್ಲಿನ ಬಾಹ್ಮಣರನ್ನು ಮಾತ್ರ ಪ್ರಸ್ತಾಾಪಿಸಿದ್ದಾಾರೆ. ಆದರೆ ಇಂದಿನ ಸಮಾಜದಲ್ಲಿನ ಅವರ ಪಾತ್ರವನ್ನು ಇಲ್ಲಿ ಹೇಳಲೇ ಬೇಕು.

ಇಂದು ನಾವುಗಳು ಇಷ್ಟೆೆಲ್ಲಾಾ ಬರೆಯಲು ಕನ್ನಡಕ್ಕೆೆ ಲಿಪಿಯನ್ನು ನೀಡಿದವರು ಕನ್ನಡದ ಮೊದಲ ದೊರೆ ಕದಂಬ ಮಯೂರಶರ್ಮ ಹವ್ಯಕ ಬ್ರಾಾಹ್ಮಣ. ಹನ್ನೆೆರಡನೇ ಶತಮಾನದಲ್ಲಿ ಕರ್ಣಿಕ ವೃತ್ತಿಿಯ (ಕುಲಕರ್ಣಿ) ಬ್ರಾಾಹ್ಮಣರಾಗಿದ್ದ ಬಸವಣ್ಣನವರು ಲೋಕದ ಡೊಂಕನ್ನು ತಿದ್ದಲು ಲಿಂಗಧಾರಣೆಮಾಡಿ ತ್ರಿಿಮೂರ್ತಿಗಳಲ್ಲಿ ಒಬ್ಬರಾದ ಪರಶಿವನನ್ನು ಆರಾಧಿಸಿ ಎಂದರೆ ಹೊರತು ಅನ್ಯ ಧರ್ಮದ ದಾರಿ ತೋರಲಿಲ್ಲ. ಶ್ರೀಕೃಷ್ಣದೇವರಾಯ ಬ್ರಾಾಹ್ಮಣರಿಗೆ ಎಷ್ಟು ಮಹತ್ವ ನೀಡಿದ್ದರೆಂದರೆ ತನ್ನ ಸಾಮ್ರಾಾಜ್ಯದಲ್ಲಿದ್ದ ಸಾವಿರಾರು ದೇಗುಲದಲ್ಲಿ ಪೂಜೆಸಲ್ಲಿಸಲು ದೂರದ ಕಾಶಿಯಿಂದ ಆರು ಸಾವಿರ ಸ್ಮಾಾರ್ಥ ಬ್ರಾಾಹ್ಮಣರನ್ನು ಅವರ ಕುಟುಂಬ ಸಮೇತರಾಗಿ ಹಂಪಿಗೆ ಕರೆಸಿಕೊಂಡು ಆಶ್ರಯ ನೀಡಿ ಗೌರವಿಸುತ್ತಾಾರೆ. ಅವರು ಆರುವೇಲು (ತೆಲುಗಿನಲ್ಲಿ 6 ಸಾವಿರ) ಬ್ರಾಾಹ್ಮಣುಲು ಎಂದು ಕರೆಸಿಕೊಂಡು ಅವರ ವಂಶಸ್ಥರು ಇಂದಿಗೂ ಹಂಪಿಯಲ್ಲಿ ಭಟ್, ಜೋಷಿ, ಪುರೋಹಿತ್ ಹೆಸರಿನೊಂದಿಗೆ ಕನ್ನಡ, ತೆಲುಗು, ಹಿಂದಿ ಭಾಷೆಗಳನ್ನು ಸಮಾಂತರವಾಗಿ

ಆಡುತ್ತಾಾ ಅದೇ ಅರ್ಚಕ ವೃತ್ತಿಿಯನ್ನು ಮಾಡಿಕೊಂಡಿದ್ದಾಾರೆ. ಭಾರತದ ಕೀರ್ತಿಯನ್ನು ವಿಶ್ವದಲ್ಲಿ ಬೆಳಗಿಸಿದ ಉನ್ನತ ಪ್ರಶಸ್ತಿಿಗಳಲ್ಲಿ ಒಂಬತ್ತು (ದಲೈಲಾಮ ಸೇರಿ) ಹಿಂದೂಧರ್ಮಕ್ಕೆೆ ಸೇರಿದ ನೊಬೆಲ್ ಪ್ರಶಸ್ತಿಿ ಪುರಸ್ಕೃರಲ್ಲಿ ಆರು ಪ್ರಶಸ್ತಿಿಗಳು ಬ್ರಾಾಹ್ಮಣರಿಂದಲೇ ದೊರಕಿದೆ.

48 ಭಾರತರತ್ನ ಪ್ರಶಸ್ತಿಿಗಳಲ್ಲಿ ಹದಿನೆಂಟು ಹಾಗೂ ಪದ್ಮವಿಭೂಷಣ, ಪದ್ಮಭೂಷಣ, ಜ್ಞಾಾನಪೀಠದಂತಹ ಇನ್ನೂ ಅನೇಕ ಉನ್ನತ ಪ್ರಶಸ್ತಿಿಗಳನ್ನು ಪಡೆದವರಲ್ಲಿ ಬ್ರಾಾಹ್ಮಣರೇ ಬಹುಸಂಖ್ಯಾಾತರು. ಸುಪ್ರೀಂಕೋರ್ಟ್, ಹೈಕೋರ್ಟ್‌ನಲ್ಲಿನ ಅನೇಕ ನ್ಯಾಾಯಾಧೀಶರು ವಿಜ್ಞಾಾನಿಗಳು, ದೇಶದ ಐಕಾನ್ ಎನಿಸಿರುವ ಆರ್ಯಭಟ, ಶಕುಂತಲಾದೇವಿ, ಸ್ವಾಾತಂತ್ರಕ್ಕಾಾಗಿ ಕ್ಷತ್ರಿಿಯರ ಅವತಾರವೆತ್ತಿಿದ ಲೋಕಮಾನ್ಯ ತಿಲಕ್, ರಾಣಿ ಲಕ್ಷ್ಮೀಬಾಯಿ, ಗೋಪಾಲಕೃಷ್ಣ ಗೋಖಲೆ, ಚಂದ್ರಶೇಖರ ಆಜಾದ್, ಮಂಗಲಪಾಂಡೆ, ವಿನಾಯಕ ದಾಮೋಧರ ಸಾವಾರ್ಕರ್, ನಾನಾ ಸಾಹಿಬ್ ಪೇಶ್ವೆೆ ಮುಂತಾದವರು ಕೇವಲ ಬ್ರಹ್ಮಜ್ಞಾಾನ ಹೊಂದಿದವರಾಗಿರಲಿಲ್ಲ.

ಅದೇರೀತಿ ಕ್ರೀಡೆಯಲ್ಲಿ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ, ಪ್ರಕಾಶ್ ಪಡುಕೋಣೆ, ವಿಶ್ವನಾಥ್ ಆನಂದ್, ಬಿ.ಎಸ್. ಚಂದ್ರಶೇಖರ್ ಅಲ್ಲದೆ ಹದಿನೈದು ವರ್ಷಗಳ ಹಿಂದೆ ಅನಿಲ್‌ಕುಂಬ್ಳೆೆ, ಜಾವಗಲ್ ಶ್ರೀನಾಥ್, ವೆಂಕಟೇಶ್‌ಪ್ರಸಾದ್, ಸುನಿಲ್‌ಜೋಷಿ, ರಾಹುಲ್‌ದ್ರಾಾವಿಡ್, ವಿಜಯ್ ಭಾರದ್ವಾಾಜ್ ಸೇರಿ ಭಾರತದ ಅರ್ಧ ತಂಡ ಬ್ರಾಾಹ್ಮಣರ ತಂಡವೇ ಆಗಿತ್ತು. ಇನ್ನು ಕಲೆಯ ವಿಚಾರಕ್ಕೆೆ ಬಂದರೆ ಭೀಮಸೇನ್ ಜೋಷಿ, ಲತಾ ಮಂಗೇಶ್ವರ್, ವಾಣಿ ಜಯರಾಂ, ಕುಮಾರ್‌ಶಾನು, ವಿಜಯಪ್ರಕಾಶ್, ಹರಿಹರನ್, ಉಷಾಉತ್ತುಪ್, ಕೆ.ವಿ. ಮಹದೇವನ್, ಎಸ್. ಜಾನಕಿ, ಟಿ.ಎಂ ಸೌಂದರ ರಾಜನ್, ಉನ್ನಿಿಕೃಷ್ಣನ್, ಹೇಮಮಲಿನಿ, ರೇಖ, ಮಣಿರತ್ನಂ ಹೀಗೆ ಎಲ್ಲಾಾ ಕ್ಷೇತ್ರದಲ್ಲೂ ಬ್ರಾಾಹ್ಮಣರ ಪ್ರತಿಭೆ ಕೆಸರಿನ ಕಮಲದಂತೆ ಅರಳಿ ನಿಂತಿದೆ. ಡಾ. ರಾಜ್, ಅಬ್ದುಲ್ ಕಲಾಂ ಅವರಂತಹ ಮಹಾಪುರುಷರು ತಮ್ಮ ಜೀವನದಲ್ಲಿ ಕೆಲ ಬ್ರಾಾಹ್ಮಣ್ಯವನ್ನು ಅನುಸರಿಸಿದ್ದರು. ಅಷ್ಟೇ ಏಕೆ ಮಹಾಕ್ಷತ್ರೀಯ ಎನಿಸಿದ ವಿಂಗ್‌ಕಮಾಂಡರ್ ಅಭಿನಂದನ್ ವರ್ತಮಾನ್ ಮತ್ತು ದೇಶದ ಭದ್ರತೆಯ ಹೊಣೆ ಹೊತ್ತಿಿರುವ ಅಜಿತ್ ದಾವೋಲ್ ಸಹ ಬ್ರಾಾಹ್ಮಣರು ಎಂಬುದು ಸತ್ಯ.

ಕನ್ನಡ ಚಿತ್ರರಂಗವನ್ನು ಕಟ್ಟಿಿದ ಕಣಗಾಲ್‌ಪ್ರಭಾಕರ ಶಾಸ್ತ್ರಿಿ, ಕು.ರ. ಸೀತಾರಾಮಶಾಸ್ತ್ರಿಿ, ಬಿ.ಆರ್. ಪಂತಲು, ಹುಣಸೂರು ಕೃಷ್ಣಮೂರ್ತಿ, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಮಣ್ಯಂ, ಪುಟ್ಟಣ್ಣ ಕಣಗಾಲ್ ಇವರೆಲ್ಲರೂ ಬ್ರಾಾಹ್ಮಣರಾಗಿದ್ದರೂ ಡಾ. ರಾಜ್ ಅವರಂತಹ ಮೇರುನಟರ ಕುಲಗೋತ್ರವನ್ನು ಕೇಳದೆ ಜತೆಯಾಗಿ ಬೆಳೆದವರಾಗಿದ್ದರು. ವಿಷ್ಣುವರ್ಧನ್, ಉಪೇಂದ್ರ, ಶಂಕರನಾಗ್, ಅನಂತನಾಗ್ ಸೇರಿ ಅನೇಕರು ತಮ್ಮ ಬ್ರಾಾಹ್ಮಣತ್ವವನ್ನು ಹಣೆಗೆ ಕಟ್ಟಿಿಕೊಳ್ಳದೆ ಬೆಳೆದು ಅನೇಕರನ್ನು ಬೆಳೆಸಿದ್ದಾಾರೆ. ನೇರವಾಗಿ ಹೇಳಬೇಕೆಂದರೆ ದೇಶದ ಎಲ್ಲಾಾ ಕೀರ್ತಿ ಪತಾಕೆಗಳಲ್ಲೂ ಬ್ರಾಾಹ್ಮಣರದೇ ಪ್ರತಿಶತ 80ರಷ್ಟು ಮೇಲುಗೈ ಕೊಡುಗೈಯಾಗಿದೆ. ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿರುವ ಅಧಿಕ ಸಂಖ್ಯೆೆಯ ವಿದ್ಯಾಾರ್ಥಿಗಳ ಹೆಸರಿನ ಕೊನೆಯಲ್ಲಿ ಹೆಗಡೆ, ಭಟ್, ಶರ್ಮ, ರಾವ್, ಕುಲಕರ್ಣಿ ಎಂಬ ಪದಗಳಿರುತ್ತವೆ. ಆದರೂ ಈ ಬ್ರಾಾಹ್ಮಣರು ಇಂದು ನಿಜವಾದ ಅಸ್ಪಶ್ಯರು ಎಂಬುದು ಶೋಚನೀಯ. ಇಷ್ಟೆೆಲ್ಲಾಾ ಸಾಧಿಸಿದ ಬ್ರಾಾಹ್ಮಣರು ಯಾವುದೇ ರೀತಿಯ ಮೀಸಲಾತಿಯನ್ನು ಮೂಸಿದವರಲ್ಲ. ಯಾವುದೇ ಭಾಗ್ಯಗಳಿಗೆ ಒಳಗಾಗದೆ, ಗಂಜಿಕೇಂದ್ರಗಳನ್ನು ಆಶ್ರಯಿಸದೆ, ರಾಜಕಾರಣಿಗಳ ಹಿಂದೆ ನರಿಗಳಂತೆ ಹೆಜ್ಚೆೆ ಇಟ್ಟವರಲ್ಲ. ದಯನೀಯವಾಗಿ ಗೋಗರೆದವರಲ್ಲ, ತಮ್ಮ ಹಿತಕ್ಕಾಾಗಿ ರಸ್ತೆೆಗೆ ಬಂದು ಗಲಭೆ ಎಬ್ಬಿಿಸಿ ರೈಲು, ಬಸ್ಸು ಒತ್ತೊೊಟ್ಟಿಿಗಿರಲಿ ಒಂದು ಸೈಕಲ್‌ನ್ನು ತಡೆದವರಲ್ಲ, ಟೈರನ್ನು ಸುಟ್ಟವರಲ್ಲ.

ದೇಶದಲ್ಲಿ ಬ್ರಾಾಹ್ಮಣರೆಂದರೆ ಮಿಸ್ಟರ್ ಕ್ಲೀನ್ ಎಂಬ ಭಾವನೆ ಖಂಡಿತವಾಗಿಯೂ ಇದೆ. ನಿತ್ಯ ಕೊರೆವ ಚಳಿಮಳೆಗಾಳಿಯಲ್ಲಿ ಸಂಪ್ರದಾಯದ ಕಠಿಣ ವ್ರತಾಚರಣೆಗಳ್ನು ಮಾಡಿ, ಸಸ್ಯಹಾರವನ್ನೇ ಪರಮ್ಮಾಾನ್ನವಾಗಿ ಸೇವಿಸಿ ಹಗಲುರಾತ್ರಿಿ ಶ್ರದ್ಧೆೆಯಿಂದ ದುಡಿದು ನಿತ್ಯದ ಜೋಳಿಗೆ ತುಂಬಿಸಿಕೊಳ್ಳುವ ಬ್ರಾಾಹ್ಮಣರು ಸಮಾಜದಲ್ಲಿ ಇತರರಂತೆ ಅನ್ಯವೃತ್ತಿಿಗಳನ್ನು ಅಷ್ಟು ಸುಲಭವಾಗಿ ಮಾಡುವವರಲ್ಲ. ಮಾಡಲು ನಿಂತರೆ ಅದರ ಕಥೆಯೇ ಬೇರೆ. ನಮ್ಮ ವಿಜಯನಗರದ ಬ್ರಾಾಹ್ಮಣೇತರ ಅರಸರು ಹೊರಡಿಸುತ್ತಿಿದ್ದ ಶಾಸನದ ಅಂತ್ಯದಲ್ಲಿ ‘ಬ್ರಹ್ಮಾಾತ್ಯಾಾದಿ ಗೋಹತ್ಯಾಾದಿ ಮಹಾ ಪಾಪಕ್ಕೆೆ ಗುರಿಯಾಗುತ್ತಾಾರೆ’ ಎಂದು ಬರೆಸಿರುತ್ತಾಾರೆ. ಇದು ಐತಿಹಾಸಿಕ ಸತ್ಯ. ಆದ್ದರಿಂದ ಕಡೆಗೆ ಜಯವೀರರ ಲೇಖನವನ್ನು ವಿಡಂಬನಾತ್ಮಕವಾಗಿ ಸ್ವೀಕರಿಸಿ, ಆಧುನಿಕ ಬ್ರಾಾಹ್ಮಣತ್ವದಲ್ಲಿನ ದೋಷಗಳನ್ನು ಸರಿಪಡಿಸಿಕೊಂಡರಷ್ಟೇ ಸಾಕು. ಜಾತಿಯನ್ನು ಖ್ಯಾಾತಿ ಅಥವಾ ಕುಖ್ಯಾಾತಿಗೊಳಿಸುವುದಲ್ಲ.