Tuesday, 5th July 2022

ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ, ಕೊಡವರ ಪ್ರತಿಭಟನೆ

ಕೊಡಗು: ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ, ಕೊಡವರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿದ್ದರಾಮಯ್ಯ ವಿರುದ್ದ ಕೊಡವ ಸಮುದಾಯದ ಕೊಡವ ಕೊಡವತಿಯರ ಆಕ್ರೋಶ ವ್ಯಕ್ತ ವಾಗಿದೆ. ಕಾವೇರಿ ಮಾತೆ, ಇಗ್ಗುತ್ತಪ್ಪ, ಕೊಡವ ಕುಲಕ್ಕೆ ಜಯಕಾರ ಹಾಕಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಹೇಳಿಕೆಯಿಂದ ಕೊಡವ ಸಮುದಾಯಕ್ಕೆ ಅಪಮಾನವಾಗಿದೆ. ಸಿದ್ದರಾಮಯ್ಯ ಬಹಿರಂಗವಾಗಿ ಕೊಡವರ ಕ್ಷಮೆ ಕೋರಬೇಕು. ತಮ್ಮ ಹೇಳಿಕೆ ಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸದರು.

ಮಡಿಕೇರಿ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ಮಡಿಕೇರಿ ಹಿತ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆ ಸದಸ್ಯ ರಿಂದ ಪ್ರತಿಭಟನೆ ನಡೆಯಿತು.