Friday, 19th August 2022

ಆರ್‌ಎಸ್‌ಎಸ್‌ ಮುಖಂಡನಿಗೆ ಇಬ್ಬರಿಂದ ಚಾಕು ಇರಿತ

ಕೋಲಾರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖಂಡನ ಮುಖಕ್ಕೆ ಅನ್ಯಕೋಮಿನ ಇಬ್ಬರು ಚಾಕು ಇರಿದ ಪ್ರಕರಣ ನಡೆದಿದೆ.

ಆರ್​ಎಸ್‌ಎಸ್​ ಮುಖಂಡ ರವಿ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ರವಿಗೆ ಕಿವಿಯ ಭಾಗದಲ್ಲಿ ಗಾಯ ವಾಗಿದೆ.

ರವಿ ಮಾಲೀಕತ್ವದ ಸ್ಟೀಲ್ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ‌ ನಡೆಯುತಿತ್ತು. ಆ ಸಂದರ್ಭದಲ್ಲಿ ರವಿ ಗಲಾಟೆ ಬಿಡಿಸಲು ಹೋಗಿದ್ದು, ಅನ್ಯಕೋಮಿನ ಇಬ್ಬರು ರವಿಯ ಮುಖಕ್ಕೆ ಚಾಕು ಹಾಕಿದ್ದಾರೆ. ಪ್ರಕರಣ ಖಂಡಿಸಿ ಮಾಲೂರು ಬಸ್ ನಿಲ್ದಾಣದಲ್ಲಿ ಆರ್​ಎಸ್​ಎಸ್​ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕು ಇರಿದವರು ಗಾಂಜಾ ಸೇವಿಸಿದ್ದು, ಗಲಾಟೆ ಬಿಡಿಸಿ ವಾಪಸ್ ಆಗುವಾಗ ಚಾಕು ಇರಿ ದಿದ್ದರು. ಆರೋಪಿಗಳಲ್ಲಿ ಒಬ್ಬ ಆಟೋ ಚಾಲಕನಾಗಿದ್ದು, ಇನ್ನೊಬ್ಬ ಚಿಕನ್ ಅಂಗಡಿ ಯಲ್ಲಿ ಕೆಲಸ ಮಾಡುವವನಾಗಿದ್ದಾನೆ. ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.

ಸದ್ಯ ಮಾಲೂರು ಪೊಲೀಸ್ ಠಾಣೆ ಬಳಿ ಆರ್​ಎಸ್​ಎಸ್​ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.