Wednesday, 8th February 2023

ಬಿಜೆಪಿ ಕೋಲಾರ ಜಿಲ್ಲಾಧ್ಯಕ್ಷರ ಕಾರು ಅಪಘಾತ

ಕೋಲಾರ: ಶ್ರೀನಿವಾಸಪುರ ಮತ್ತು ಚಿಂತಾಮಣಿ ಮುಖ್ಯರಸ್ತೆಯ ಪಾತಪಲ್ಲಿ ಗ್ರಾಮದ ಬಳಿ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್​ ಸವಾರ ಮೃತಪಟ್ಟಿದ್ದಾರೆ.

ಪಾತಪಲ್ಲಿ ಗ್ರಾಮದ ರಾಜಣ್ಣ (50) ಮೃತ ದುರ್ದೈವಿ. ಜಿಲ್ಲೆಯ ಬಿಜೆಪಿ ವೇಣುಗೋಪಾಲ್ ಪ್ರಯಾಣಿಸುತ್ತಿದ್ದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಕಾರು ಅತಿವೇಗವಾಗಿ ಬಂದದ್ದೇ ಕಾರಣ ಸ್ಥಳೀಯರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

error: Content is protected !!