Friday, 2nd December 2022

ಕೋಲಾರದಲ್ಲಿ ಮತ್ತೆ ನಾಲ್ಕು ದಿನ ಲಾಕ್’ಡೌನ್

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಇದೇ ಮೇ 27ರಿಂದ ಮೇ 31ರ ಲಾಕ್‌ಡೌನ್‌ ಕಠಿಣಗೊಳಿಸ ಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಕೋವಿಡ್‌ ನಿರ್ವಹಣೆ ಸಂಬಂಧ ಮಂಗಳವಾರ ಸಭೆ ನಡೆಸಿದ ಸಚಿವರು, ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಜಾರಿ ಯಲ್ಲಿರುತ್ತದೆ. ಜನರು ಮನೆಗಳಲ್ಲೇ ಇದ್ದು, ಲಾಕ್‌ಡೌನ್‌ಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಮೇ 21ರ ಸಂಜೆಯಿಂದ ಮೇ 25ರ ಬೆಳಿಗ್ಗೆವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಿದ್ದರಿಂದ ಕರೋನಾ ಸೋಂಕು ಹರಡುವಿಕೆ ಪ್ರಮಾಣ ಇಳಿಮುಖವಾಗಿದೆ. ಸೋಂಕು ಹರಡುವಿಕೆ ತಗ್ಗಿಸಲು ಮತ್ತೆ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡುವುದು ಅನಿವಾ ರ್ಯ’ ಎಂದು ವಿವರಿಸಿದರು.

ಔಷಧ ಮಾರಾಟ ಮಳಿಗೆಗಳು ಮತ್ತು ರಕ್ಷಣಾ ಪಡೆಗೆ ಸಂಬಂಧಪಟ್ಟ ಕಂಪನಿಗಳಿಗೆ ಸಂಪೂರ್ಣ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದ್ದು, ಅನುಮತಿಗೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ‘ಎಪಿಎಂಸಿಯಲ್ಲಿ ವಾಣಿಜ್ಯ ಚಟುವಟಿಕೆಗೆ ನಿರ್ಬಂಧವಿಲ್ಲ. ಆದರೆ, ರಾಜ್ಯ ಸರ್ಕಾರದ ಕೋವಿಡ್‌ ಮಾರ್ಗಸೂಚಿ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಪಿಎಂಸಿಗೆ ಬರುವ ಜನರು ಅಂತರ ಕಾಪಾಡಿಕೊಳ್ಳುವಂತೆ ಮಾಡುವುದು ಮತ್ತು ಮಾರುಕಟ್ಟೆಯನ್ನು ಸ್ಯಾನಿಟೈಸ್‌ ಮಾಡಿಸುವುದು ಆಡಳಿತ ಮಂಡಳಿಯ ಜವಾಬ್ದಾರಿ’ ಎಂದು ಸೂಚಿಸಿದರು.