Saturday, 16th January 2021

ಒಲವೇ ಎನ್ನುತ ಬಂದ ಕೃತಿಕಾ

ಸುಕೃಶಿ ಕ್ರಿಯೇಷ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ. ಒಲವೇ ಎಂದು ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿರುವ ಈ ಹಾಡು ಸಿನಿಮೀಯ ರೂಪುರೇಷೆ ಗಳನ್ನು ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿರುವ ಕೃತಿಕಾ ರವೀಂದ್ರ ಈ ಹಾಡಿನಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದು, ವರುಣ್ ಹೆಗಡೆ  ನಾಯಕನಾಗಿ ನಟಿಸಿದ್ದಾರೆ. ಯುವ ನಿರ್ದೇಶಕಿ, ನಟಿ ಶಿವಾನಿ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಡಾ.ಸುಚೇತ ರಂಗಸ್ವಾಮಿ, ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದು, ಅವರ ಮಧುರ ಕಂಠದಲ್ಲೇ ಹಾಡು ಮೂಡಿಬಂದಿದೆ.

ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿ ದ್ದಾರೆ. ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನವಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ‘ಒಲವೇ.. ಹಾಡನ್ನು ಲಕ್ಷಾಂತರ ಸಂಗೀತ ಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *