Tuesday, 9th August 2022

ಗಡಿಭಾಗದಲ್ಲಿ ಕರ್ನಾಟಕ ಸಾರಿಗೆ ಬಸ್ ಸಂಚಾರ ಸ್ಥಗಿತ

Karnataka Sarige

ವಿಜಯಪುರ: ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆ ಗಡಿಭಾಗದಲ್ಲಿ ತಾತ್ಕಾಲಿಕವಾಗಿ ಕರ್ನಾಟಕ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕನ್ನಡ ಧ್ವಜ ಸುಟ್ಟು, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ವಿರುದ್ಧ ಕನ್ನಡಿಗರು ಹೋರಾಟದ ಕಹಳೆ ಮೊಳಗಿಸಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ಪುಂಡರ ಗಲಾಟೆ ಹೆಚ್ಚುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನ ಗಳಿಗೆ ಹಾನಿ ಮಾಡುತ್ತಲೇ ಇದ್ದಾರೆ.

ಎಂಇಎಸ್ ಹಾಗೂ ಶಿವಸೇನೆ ಪುಂಡಾಟ ಮೆರೆಯುತ್ತಿದ್ದು, ಕರ್ನಾಟಕದ ಬಸ್​ಗಳ ಮೇಲೆ ಕಲ್ಲು ತೂರುತ್ತಾ, ಬಸ್​ನ ಮೇಲೆ ಮರಾಠಿ ಲಿಪಿ ಬರೆಯು ತ್ತಿದ್ದಾರೆ. ಬಸ್​ ಚಾಲಕರಿಗೆ ಬೆದರಿಕೆ ಹಾಕಿ ಬಲವಂತ ವಾಗಿ ಮರಾಠ ಧ್ವಜ ಕೈಗಿಟ್ಟು ಘೋಷಣೆ ಕೂಗಿಸುತ್ತಿದ್ದಾರೆ.

‘ಮಹಾ’ ಪುಂಡರ ಗಲಾಟೆ ಹೆಚ್ಚಾದ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ವಿಜಯಪುರ ಜಿಲ್ಲೆಯಿಂದ ಮಹಾ ರಾಷ್ಟ್ರಕ್ಕೆ ಬಸ್​ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿದೆ.