Wednesday, 1st December 2021

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕೆಎಸ್ಆರ್ ಟಿ ಸಿ ಬಸ್

ಶಿವಮೊಗ್ಗ : ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಕೆ ಎಸ್ ಆರ್ ಟಿ ಸಿ ಬಸ್ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿರುವ ಘಟನೆ ಸಾಗರದಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಜಿಲ್ಲೆಯ ಸಾಗರ ತಾಲೂಕಿನ ಹೊರವಲಯದ ಕಾಸ್ಪಾಡಿ ಬಳಿ ಘಟನೆ ಸಂಭವಿಸಿದೆ. ಸಾಗರದಿಂದ ಶಿವಮೊಗ್ಗ ಹೋಗುತ್ತಿದ್ದ ಬಸ್, ಎದುರಿನಿಂದ ಬಂದ ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿ ಬಿದ್ದಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನೂ ಶಿವಮೊಗ್ಗಕ್ಕೆ ಚಿಕಿತ್ಸೆ ಗಾಗಿ ಕರೆದೊಯ್ದು ದಾಖಲಿಸಲಾಗಿದೆ.

ಕೆರೆಗೆ ಬಿದ್ದಂ ಸಾರಿಗೆ ಬಸ್ ನಲ್ಲಿ 28 ಪ್ರಯಾಣಿಕರಿದ್ದರು ಎಂಬುದಾಗಿ ತಿಳಿದು ಬಂದಿದೆ. ಸಣ್ಣಪುಟ್ಟ ಗಾಯಗಳಾ ಗಿರುವ ಪ್ರಯಾಣಿಕರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಾಗರ ಡಿವೈಎಸ್‌ಪಿ ವಿನಾಯಕ್ ಶೇಟಗೇರಿ, ಎಎಸ್‌ಐ ಹನುಮಂತಪ್ಪ, ಶಿವಕುಮಾರ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾ ಚರಣೆ ನಡೆಸಿ, ಬಸ್ಸಿನಲ್ಲಿದ್ದಂತ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.