Monday, 8th March 2021

ಕುದಿ ಕಾಶ್ಮೀರಕ್ಕೆ ನೆಮ್ಮದಿಯ ಸಿಂಚನ!

ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿಯನ್ನು ಅಸಿಂಧುಗೊಳಿಸಿರುವ ಕೇಂದ್ರ ಸರಕಾರದ ನಡೆ, ಕಾಶ್ಮೀರಿ ಜನತೆಗೆ ವಿಶ್ವಾಸದ್ರೋಹವೆಸಗಿದಂತಾಗಿದೆ. ಕಾಶ್ಮೀರ ರಾಜ್ಯವನ್ನು ವಿಭಜಿಸಿರುವುದು ತಮ್ಮ ದೇಹದ ಭಾಗಗಳನ್ನು ತುಂಡರಿಸಿ ಇರಿಸಿದಂತಾಗಿದೆ. ಇಷ್ಟು ಮಾತ್ರವಲ್ಲ, ತಮ್ಮನ್ನು ಕೇಂದ್ರ ಸರಕಾರ ಗ್ರಹಬಂಧನದಲ್ಲಿರಿಸಿರುವದಾಗಿ ಆರೋಪಿಸಿ, ಕಂಬನಿ ಮಿಡಿಯುತ್ತಾಾ, ಕಾಶ್ಮೀರಿ ಜನತೆಗಾಗಿ ತಮ್ಮ ಹೋರಾಟವನ್ನು ತಾವು ಜೀವಿಸಿರುವವರೆಗೆ ಮುಂದುವರಿಸುವದಾಗಿ ಘೋಷಿಸಿದ್ದಾಾರೆ. ಕಣಿವೆ ರಾಜ್ಯದ ಹಿತಚಿಂತಕರು ತಾವೆಂದು ಬಿಂಬಿಸಿಕೊಳ್ಳುತ್ತಿಿರುವ ಇಂಥ ರಾಜಕೀಯ ನಾಯಕರ ಚಿಂತನೆಗಳು-ಘೋಷಣೆಗಳು ಹಾಸ್ಯಾಾಸ್ಪದವೆನಿಸಬಲ್ಲವೇ ಹೊರತು ಚಿಂತನಾರ್ಹವೆನಿಸದು.

ಇಲ್ಲಿಯವರೆಗೆ 370 ವಿಧಿ ತಾತ್ಕಾಾಲಿಕ ವ್ಯವಸ್ಥೆೆಯೆಂದು ಹೆಚ್ಚಿಿನಂಶ ಭಾರತೀಯರಿಗೆ ತಿಳಿಯದ ವಿಷಯವಾಗಿತ್ತು. ಈ ವಿಧಿಯನ್ನು ರದ್ದುಗೊಳಿಸುವುದು ಅಸಾಧ್ಯವೆಂದೇ ದೇಶದ ಜನಸಾಮಾನ್ಯರ ಗ್ರಹಿಕೆಯಾಗಿತ್ತು. ಸ್ವಾಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಸಂವಿಧಾನದ 370 ಹಾಗೂ 35ಎ ವಿಧಿಗಳನ್ವಯ ಯಾವ ಅಭಿವೃಧ್ಧಿಿಯನ್ನೂ ಕಾಣದ ಕಾಶ್ಮೀರದ ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ನಿರಾಶೆಯ ಕಾರ್ಮೋಡವೊಂದು ಮುಸುಕಿತ್ತು. ಭೂಲೋಕದ ಸ್ವರ್ಗವೆಂದೇ ಹೆಸರಾಗಿದ್ದ ಕಾಶ್ಮೀರ, ಉಗ್ರರ ಉರಿಯಿಂದ ಅಕ್ಷರಶಃ ಅಗ್ನಿಿ ಕುಂಡವೆನಿಸಿದೆ.

370ನೆಯ ವಿಧಿಯನ್ನು ಉಗ್ರವಾಗಿ ವಿರೋಧಿಸಿದ್ದ ಜನಸಂಘದ ಸಂಸ್ಥಾಾಪಕರಾದ ಶ್ಯಾಾಮ ಪ್ರಸಾದ ಮುಖರ್ಜಿಯವರ ಕನಸು ಇಂದು ಸಾಕಾರಗೊಂಡಿದೆ. ದೇಶವೊಂದರಲ್ಲಿ ರಾಜಕೀಯ ಆಳಿತವೆರಡು, ಪ್ರತ್ಯೇಕ ಧ್ವಜ, ಇಬ್ಬರು ಪ್ರಧಾನಿಗಳನ್ನೊೊಳಗೊಂಡ ಕಾರ್ಯಶೈಲಿ ಎಂದಿಗೂ ಸಮ್ಮತವಲ್ಲವೆನ್ನುತ್ತಲೇ 1953ರಲ್ಲಿ ಪೂರ್ವಾನುಮತಿಯಿಲ್ಲದೇ ಕಾಶ್ಮೀರ ರಾಜ್ಯವನ್ನು ಪ್ರವೇಶಿಸಿ ಬಂಧನಕ್ಕೊೊಳಗಾಗಿದ್ದರು. 370ನೇ ವಿಧಿಯನ್ವಯ ದೇಶದ ಇತರ ರಾಜ್ಯದ ನಾಗರಿಕರು ಕಾಶ್ಮೀರ ರಾಜ್ಯದಲ್ಲಿ ಕಾಯಂ ಆಗಿ ವಾಸಿಸುವಂತಿರಲಿಲ್ಲ. ಕಾಶ್ಮೀರ ರಾಜ್ಯದಲ್ಲಿ ಆಸ್ತಿಿಯನ್ನು ಹೊಂದುವಂತಿರಲಿಲ್ಲ. ಜಮ್ಮು ಕಾಶ್ಮೀರದ ಹೊರಗಿನ ವ್ಯಕ್ತಿಿಯನ್ನು ಮದುವೆಯಾಗುವ ಮಹಿಳೆಯರು ರಾಜ್ಯದ ಸದಸ್ಯತ್ವ ಕಳೆದುಕೊಳ್ಳುವುದರ ಜತೆ ಜತೆಗೆ ಚಿರಾಸ್ತಿಿಗಳಿಂದಲೂ ವಂಚಿತರಾಗಬೇಕಿತ್ತು. ಕಾಶ್ಮೀರದಲ್ಲಿ ಹಲವಾರು ದಶಕಗಳಿಂದ ನೆಲೆಸಿರುವ ದಲಿತರಿಗೆ ರಾಜ್ಯದ ಕಾಯಂ ಸದಸ್ಯತ್ವ ದೊರೆತಿರಲಿಲ್ಲ. ಜಮ್ಮು-ಕಾಶ್ಮೀರದ ನಿವಾಸಿಗಳಿಗೆ ದೊರೆಯಲಾಗಿದ್ದ ಎಲ್ಲಾಾ ಸೌಲಭ್ಯಗಳಿಂದಲೂ ದಲಿತರು ವಂಚಿತರಾಗಿದ್ದರು.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಜೋಡಿ ಕಳೆದ ವಾರ ‘ತ್ರಿಿವಳಿ ತಲಾಖ್ ನಿಷೇಧ’ ಮಸೂದೆ ಜಾರಿಗೊಳಿಸಿ ಇತಿಹಾಸವೊಂದರ ಸೃಷ್ಟಿಿಗೆ ಕಾರಣವಾದರೆ, ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ, ಸಂಸದೀಯ ನಿರ್ವಹಣಾ ಕೌಶಲವನ್ನು ಪ್ರಚುರಪಡಿಸಿದ್ದಾಾರೆ. ವಿಧಾನಸಭೆಯನ್ನೊೊಳಗೊಂಡ ಜಮ್ಮು-ಕಾಶ್ಮೀರ ಹಾಗೂ ವಿಧಾನಸಭೆ ರಹಿತ ಲಡಾಖ್‌ಗಳನ್ನು ಕೇಂದ್ರಾಾಡಳಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಸಂವಿಧಾನ ರಚನಾ ಸಭೆಯನ್ನು ಈಗ ವಿಧಾನಸಭೆಯೆಂದೇ ಗುರುತಿಸಲಾಗುತ್ತದೆ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿಿರುವಂತೆ, ತಾವು ಕೈಗೊಳ್ಳುವ ಜನಪರ ಕಾರ್ಯಗಳ ಗುಟ್ಟು ಬಿಟ್ಟುಕೊಡದೆ, ಅಸಾಧ್ಯವನ್ನು ಸಾಧ್ಯವಾಗಿಸಿ, ರಾಜಕೀಯ ಇಚ್ಛಾಾಶಕ್ತಿಿಯನ್ನು ತೋರ್ಪಡಿಸುವ ಭಲೇಜೋಡಿ ಇವರದು. ಮೋದಿ-ಶಾ ಜೋಡಿ ಮಾತ್ರವಲ್ಲ, ಇಂದಿನ ದಿನಗಳಲ್ಲಿ ನಮ್ಮ ದೇಶದ ವ್ಯಾಾಪ್ತಿಿ ಕಾಶ್ಮೀರದಿಂದ ಕನ್ಯಾಾಕುಮಾರಿಯವರಿಗೆ ಎಂದು ಪ್ರತಿಯೊಬ್ಬ ಭಾರತೀಯನೂ ನಿಸ್ಸಂಕೋಚ, ನಿರ್ಭಿಡೆಯಿಂದ ಹೇಳಬಹುದು. ಭಾರತೀಯ ನಾಗರಿಕರೆಲ್ಲರೂ ಸಂಭ್ರಮ, ಉತ್ಸಾಾಹಗಳಿಂದ ಸ್ವಾಾತಂತ್ರ್ಯ ದಿನಾಚರಣೆಯನ್ನು ಎದುರು ನೋಡುತ್ತಿಿರುವುದು ಸಹ ಇಲ್ಲಿ ಗಮನಾರ್ಹ.

ಕಾಶ್ಮೀರಕ್ಕೆೆ ನೀಡಿದ ವಿಶೇಷ ಅಧಿಕಾರವನ್ನು ಹಿಂದಕ್ಕೆೆ ಪಡೆದಿರುವುದರಿಂದ ಈಗ ಇತರ ರಾಜ್ಯಗಳಿಗೆ ಅನ್ವಯಿಸುವ ಎಲ್ಲಾಾ ಕಾಯಿದೆ-ಕಾನೂನುಗಳು ಕಾಶ್ಮೀರಕ್ಕೂ ಅನ್ವಯಿಸುತ್ತವೆ. ವಿಶೇಷ ಅಧಿಕಾರವನ್ನು ಹಿಂದಕ್ಕೆೆ ಪಡೆದಿರುವುದು ಕೆಲವೊಂದು ರಾಜಕೀಯ ಶಕ್ತಿಿಗಳು ಹಾಗೂ ಪರಿವಾರವಾದಿಗಳಿಗೆ ನುಂಗಲಾರದ ಬಿಸಿತುಪ್ಪವೆನಿಸಿದೆ. ಭಾರತದಿಂದ ಸಿಗುವ ಸಕಲ ಸೌಭಾಗ್ಯಗಳನ್ನು ಸ್ವೀಕರಿಸುವುದರಲ್ಲಿ ಲೇಶಮಾತ್ರವೂ ಹಿಂಜರಿಕೆಯಿಲ್ಲ. ಆದರೆ ಭಾರತೀಯರ ಸಹವಾಸ ಬೇಡವೆನ್ನುವ ರಾಜಕೀಯ ನಾಯಕರು, ದಶಕಗಳಿಂದ ಮೊಸಳೆ ಕಣ್ಣೀರನ್ನು ಸುರಿಸುತ್ತಲೇ ಇದ್ದಾಾರೆ. ಇತರ ರಾಜ್ಯಗಳಲ್ಲಿ ಕಾಶ್ಮೀರಿಗಳು ಆಸ್ತಿಿ-ಪಾಸ್ತಿಿಗಳನ್ನು ಹೊಂದಿದರೆ ಚಿಂತೆಯಿಲ್ಲ, ಇವರ ರಕ್ಷಣೆಗಾಗಿ ಸದಾ ಸಿದ್ಧರಾಗಿರುವ ಯೋಧರಿಗೆ ಕಾಶ್ಮೀರಿ ಯುವಕರು ಗುಂಪುಗೂಡಿ ಕಾರ್ಯನಿರತ ಸೇನೆಯತ್ತ ಕಲ್ಲೆೆಸೆದರೆ ಇವರ ಕಣ್ಣಿಿನಲ್ಲಿ ಕಂಬನಿ ಒಸರುವುದಿಲ್ಲ.

ಕಾಶ್ಮೀರಿ ಪಂಡಿತರನ್ನು ರಾಜ್ಯದಿಂದ ಹೊಡೆದೋಡಿಸಿದರೂ ಚಿಂತೆಯಿಲ್ಲ, ಕಾಶ್ಮೀರದಲ್ಲಿ ಭಯೋತ್ಪಾಾದನೆ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸಕ್ರಿಿಯವಾಗಿದೆ. ಸಾವಿರಾರು ಅಮಾಯಕ ಕಾಶ್ಮೀರಿಗಳು ಗುಂಡೇಟಿಗೆ ಬಲಿಯಾದರೂ, ಇಲ್ಲಿಯ ದಶಕಗಳಿಂದ ಆಡಳಿತ ಚುಕ್ಕಾಾಣಿಯನ್ನು ಹಿಡಿದಿರುವ ರಾಜಕೀಯ ಪರಿವಾರಗಳು ಅರಮನೆಗಳಲ್ಲಿ ಆರಾಮವಾಗಿದ್ದಾಾರೆ. ಪಾಕಿಸ್ತಾಾನ ಪ್ರೇರಿತ ಉಗ್ರರು, ಸ್ಥಳೀಯ ಉಗ್ರರೊಡನೆ ಸೇರಿ ತಮ್ಮ ಅಟ್ಟಹಾಸ ಮೆರೆಯುತ್ತಿಿರುವಾಗ, ರಾಜಕೀಯ ನಾಯಕರು ಕಂಬನಿ ಸುರಿಸುವುದಿಲ್ಲವೇಕೇ? ಚಿಂತಕರು ಹಾಗೂ ಬುದ್ಧಿಿಜೀವಿಗಳೆಂದು ಹೆಸರಾಗಿರುವುದು ಮಾತ್ರವಲ್ಲ, ಕಾಶ್ಮೀರದಲ್ಲಿ ಉನ್ನತ ಹುದ್ದೆೆಗಳನ್ನು ಅಲಂಕರಿಸಿದ ಕಾಶ್ಮೀರಿ ಪಂಡಿತರು, ಪ್ರತ್ಯೇಕತಾವಾದದ ದಳ್ಳುರಿಗೆ ಸಿಲುಕಿ, ಹಾಡುಹಗಲೇ ಆಸ್ತಿಿ-ಪಾಸ್ತಿಿ ಕಬಳಿಕೆ, ಕಗ್ಗೊೊಲೆ, ಅನಾಚಾರ, ಹೆಂಗೆಳೆಯರ ಮೇಲೆ ಅತ್ಯಾಾಚಾರಗಳಂಥ ಕೃತ್ಯಗಳಿಂದ ಕಂಗೆಟ್ಟು, ಕಣಿವೆ ರಾಜ್ಯದಿಂದ ಪಲಾಯನ ಮಾಡಿ ಎರಡು ದಶಕಗಳಿಂದ ನಿರ್ಗತಿಕರಾಗಿ ಬದುಕುತ್ತಿಿರುವುದು ತೀರ ದುರದೃಷ್ಟಕರ.

ಇದುವರೆಗೂ ಸುಮಾರು 56,246 ಪಂಡಿತರ ಕುಟುಂಬಗಳು ದಿಲ್ಲಿ ಹಾಗೂ ದೇಶದ ಇತರ ಭಾಗಗಳ ನಿರಾಶ್ರಿಿತರ ಶಿಬಿರಗಳಲ್ಲಿ ನೆಲೆಸಿವೆ. ಕೇಂದ್ರ ಹಾಗೂ ರಾಜ್ಯಸರಕಾರಗಳೆರಡೂ, ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಿಸುವ ನಿಟ್ಟಿಿನಲ್ಲಿ ದಿಟ್ಟ ಹೆಜ್ಜೆೆಯಿರಿಸಬೇಕಾಗಿದೆ. ತಮ್ಮ ಮನೆ, ಜಮೀನು, ದೇವಸ್ಥಾಾನಗಳನ್ನು ಕಳೆದುಕೊಂಡು, ಅನಾಥರಂತೆ ಜೀವಿಸುತ್ತಿಿರುವ ಪಂಡಿತರಿಗೆ ಸುರಕ್ಷಿತ ‘ಘರ್ ವಾಪಸಿ’ ಅವರ ಜನ್ಮಸಿದ್ಧ ಹಕ್ಕೇ ವಿನಃ ಔದಾರ್ಯವೇನಲ್ಲ. ಇವರನ್ನು ಮರಳಿ ಕರೆದು ತರುವ ಸಣ್ಣ ಪ್ರಯತ್ನವನ್ನೂ ಮಾಡದ ರಾಜ್ಯ ರಾಜಕೀಯ ನಾಯಕರ ಕಂಬನಿಗೆ ದೇಶದ ಇತರ ಭಾಗಗಳ ನಾಗರಿಕರು ಮರುಗಲು ಸಾಧ್ಯವಿಲ್ಲ.

ಪಾಕಿಸ್ತಾಾನ ಕೃಪಾಪೋಷಿತ ಹಾಗೂ ಕಾಶ್ಮೀರದ ಸ್ಥಳೀಯ ಕೆಲ ನಾಗರಿಕರ ಸಹಕಾರದಿಂದ ದೇಶಾದ್ಯಂತ ಪಸರಿಸಿರುವ ಉಗ್ರರ ನಿಗ್ರಹಕ್ಕೆೆ ಸರಕಾರ ಕಠಿಣ ಕ್ರಮಕ್ಕೆೆ ಮುಂದಾಗಬೇಕೆಂದು ದೇಶದ ಜನತೆ ಬಯಸುತ್ತಿಿದ್ದಾಾರೆ. ಗಡಿ ನುಸುಳಿ ಬರುವ ಉಗ್ರರನ್ನು ಸದೆಬಡಿದರೆ ಮಾತ್ರ ಸಾಲದು, ಅವರಿಗೆ ಬೆಂಬಲ ನೀಡುತ್ತಿಿರುವ ಹಾಗೂ ಕಾಶ್ಮೀರಿ ಯುವಕರನ್ನು ಉಗ್ರವಾದಕ್ಕೆೆ ಪ್ರಚೋದಿಸುತ್ತಿಿರುವವರಿಗೂ ಶಿಕ್ಷೆಗೆ ಗುರಿಪಡಿಸುವುದು ಅಗತ್ಯ.

ಮಧ್ಯಮ ವರ್ಗದ ಸುಶಿಕ್ಷಿತ ಯುವಕರನ್ನು ಇವರು ತಮ್ಮ ಸೂತ್ರದ ಗೊಂಬೆಗಳನ್ನಾಾಗಿಸಿಕೊಂಡಿರುವುದು ನಿಜಕ್ಕೂ ಕಳವಳಕಾರಿ. ಯುವಜನತೆ, ತಮ್ಮ ಶಕ್ತಿಿ ಸಾಮರ್ಥ್ಯಗಳನ್ನು ಅಪವ್ಯಯ ಮಾಡಿಕೊಳ್ಳದೆ, ರಚನಾತ್ಮಕ ಚಟುವಟಿಕೆಗಳಿಗೆ ಬಳಸಿದರೆ, ಅವರ ಕುಟುಂಬವೂ ಸಕಾರಾತ್ಮಕ ಸಹಕಾರ, ಬೆಂಬಲ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. ಕಾಶ್ಮೀರ ಈಗ ಮುಕ್ತವಾಗಿದೆ. 35ಎ ವಿಧಿಯನ್ನು ತೆರವುಗೊಳಿಸಿರುವುದು, ಅನ್ಯರಾಜ್ಯಗಳ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಿದೆ. ಕೇಂದ್ರ ಸರಕಾರದ ಈ ನಡೆಯಿಂದ ಕಾಶ್ಮೀರದಲ್ಲಿ ಉತ್ಪಾಾದಕತೆ ಹೆಚ್ಚಾಾಗಿ ಇಲ್ಲಿಯ ಯುವಜನಾಂಗಕ್ಕೆೆ ಉದ್ಯೋೋಗಾವಕಾಶಗಳು ಹೆಚ್ಚಾಾಗುವುದರಲ್ಲಿ ಸಂಶಯವಿಲ್ಲ.

ಭುವಿಯಲ್ಲಿ ಸ್ವರ್ಗವೇನಾದರೂ ಇರುವುದಾದರೆ, ಅದು ಕಾಶ್ಮೀರದಲ್ಲಿಯೇ ಎಂದು ಕವಿ ಒಮರ್ ಖಯ್ಯಾಾಮ್ ಹೇಳಿದ್ದಾಾನೆ. ಚಳಿಗಾಲದ ಆರಾಮಧಾಮವಾಗಿರುವ ಜಮ್ಮು, ಬೇಸಿಗೆಯ ಬಳಲಿಕೆಗೆ ತಂಪೆರೆಯುವ ಶ್ರೀನಗರ ಪ್ರವಾಸಿಗರನ್ನು ಹಾಗೂ ಚಿತ್ರ ನಿರ್ಮಾಪಕರನ್ನು ಸದಾ ತನ್ನೆೆಡೆಗೆ ಸೆಳೆಯುವ ಕಾಲವೊಂದಿತ್ತು. ಆದರೆ ಇಂದು ಪಾಕಿಸ್ತಾಾನ ಕೃಪಾಪೋಷಿತ ಭಯೋತ್ಪಾಾದನೆಯ ದಳ್ಳುರಿಗೆ ಸಿಲುಕಿದ ಜಮ್ಮು-ಕಾಶ್ಮೀರ ರಾಜ್ಯ, ಇಲ್ಲಿ ಕೇವಲ ಬಂದೂಕುಗಳು ಮಾತನಾಡುತ್ತವೆ ಎಂಬ ಅಪಖ್ಯಾಾತಿಗೆ ಸಿಲುಕಿದೆ. ಮೋದಿಯವರು ದೇಶಕ್ಕೆೆ ನೀಡಿರುವ ಸಂದೇಶದಲ್ಲಿ, ಚಲನಚಿತ್ರ ನಿರ್ಮಾಪಕರು, ತಂತ್ರಜ್ಞರಲ್ಲಿ ಜನ್ನತ್ ಎನಿಸಿದ ಕಾಶ್ಮೀದಲ್ಲಿ ಚಿತ್ರ ನಿರ್ಮಿಸಲು ಮನವಿ ಮಾಡುವುದಾಗಿ ಕಾಶ್ಮೀರದ ಜನತೆಗೆ ಆಶ್ವಾಾಸನೆ ಇತ್ತಿಿದ್ದಾಾರೆ.

ಜಮ್ಮು-ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರಕಾರ ಇರಿಸಿದ ದಿಟ್ಟ ಹಾಗೂ ಅಸಾಮಾನ್ಯ ನಡೆಯನ್ನು ಕಾಶ್ಮೀರದ ಜನತೆಯ ಹಿತಚಿಂತನೆಗಾಗಿಯೇ ಎಂದು ಇಲ್ಲಿನ ಜನತೆ ಮನಗಾಣಬೇಕು. ಇಲ್ಲಿಯವರೆಗೆ ಜಮ್ಮು-ಕಾಶ್ಮೀರಕ್ಕೆೆ ಕೇಂದ್ರ ಸರಕಾರ ನೀಡುತ್ತಾಾ ಬಂದಿರುವ ಅನುದಾನವೂ ಸಮರ್ಪಕವಾಗಿ ಬಳಕೆಯಾಗಿಲ್ಲವೆಂಬ ಮಾತಿನಲ್ಲಿ ಸತ್ಯಂಶವಿಲ್ಲದಿಲ್ಲ. ಸಮಸ್ಯೆೆಗಳ ಮೂಟೆಯನ್ನು ಸರಕಾರದ ಹೆಗಲಿಗೇರಿಸಿ ನಿರಾಳತೆಯ ಭಾವವನ್ನು ಅನುಭವಿಸುವಂತಿಲ್ಲ. ಕಾಶ್ಮೀರದಲ್ಲಿ ಕೇಂ ಸರಕಾರ ಇರಿಸಿದ ಈ ದಿಟ್ಟ ಹೆಜ್ಜೆೆಯಿಂದ ಅಭಿವೃದ್ಧಿಿಯ ಆಶಾಕಿರಣವೊಂದು ಗೋಚರಿಸುತ್ತಲಿದೆ. ಅಭಿವೃದ್ಧಿಿಯ ಪಥ ಮುನ್ನೆೆಡೆದಂತೆಲ್ಲ ಭಯೋತ್ಪಾಾದನೆಯ ದಳ್ಳುರಿ ಶಮನವಾಗಲಿದೆ.

ಕೇಂದ್ರ ಸರಕಾರ ಮಾತ್ರವಲ್ಲ, ದೇಶಾದ್ಯಂತ ನಾಗರಿಕರು ನಿಮ್ಮೊೊಡನೆ ಕೈಜೋಡಿಸಿ ಕಾಶ್ಮೀರವನ್ನು ಮತ್ತೆೆ ಸ್ವರ್ಗವಾಗಿಸಲು ಕಟಿಬದ್ಧರಾಗಿದ್ದಾಾರೆ. ಭಯೋತ್ಪಾಾದನೆಗೆ ಸಿಲುಕಿ ಕಾಶ್ಮೀರವನ್ನು ತೊರೆದ ಪಂಡಿತರು ತಾಯ್ನಾಾಡಿಗೆ ಮರಳಿ ಸುರಕ್ಷಿತ ಬದುಕು ಕಟ್ಟಿಿಕೊಳ್ಳಲು ಅನುವು ಮಾಡಿಕೊಡಬೇಕಾಗಿದೆ. ಕಾಶ್ಮೀರಿ ಬಂಧುಗಳು ಯಾರು ಹಿತವರು ತಮಗೆ ಎಂದು ಯೋಚಿಸುವ ಸಮಯವಿದು. ಮೊಸಳೆ ಕಣ್ಣೀರು ಸುರಿಸುತ್ತಿಿರುವ ಪರಿವಾರವಾದಿ ರಾಜಕಾರಣಿಗಳೇ, ಮೊಸರಿನಲ್ಲಿಯೂ ಕಲ್ಲು ಹುಡುಕುತ್ತ ವಿರೋಧಕ್ಕಾಾಗಿ ವಿರೋಧಿಸುತ್ತಿಿರುವ ವಿರೋಧ ಪಕ್ಷಗಳ ನಾಯಕರೇ ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕಾಗಿದೆ.

ಪ್ರವಾಹದ ದುರಂತಕ್ಕೆೆ ನೀವು ಸಿಲುಕಿದಾಗ ನಿಮ್ಮ ನೆರವಿಗೆ ಧಾವಿಸಿದ ಕೇಂದ್ರ ಸರಕಾರ ಹಾಗೂ ಧರ್ಮ, ವಿರೋಧಾಭಾಸಗಳನ್ನು ಬದಿಗಿರಿಸಿ ಸಹಾಯ ಹಸ್ತ ನೀಡಿದ ಭಾರತೀಯರು. ನಿಮ್ಮ ಕಲ್ಲು ಎಸೆತಗಳಿಗೆ ಬದಲಾಗಿ ಜೀವದ ಹಂಗು ತೊರೆದು ನಿಮ್ಮನ್ನು ಭಾರತೀಯ ಸೇನೆ ರಕ್ಷಿಸುತ್ತಿಿದೆ. ಸ್ವಹಿತಸಾಧಕ ಪ್ರತ್ಯೇಕತಾವಾದಿಗಳಾಗಲಿ, ಕಾಶ್ಮೀರವನ್ನು ತಮ್ಮ ಸ್ವಂತ ಆಸ್ತಿಿಯೆಂದೇ ಪರಿಗಣಿಸಿ ಆಡಳಿತ ನಡೆಸಿದ ಪರಿವಾರವಾದಿಗಳಾಗಲಿ ಅಥವಾ ರಕ್ತದೋಕುಳಿ ಹರಿಸುತ್ತಿಿರುವ ನರೆರಾಷ್ಟ್ರವಾಗಲಿ ನಿಮ್ಮ ಹಿತ ಕಾಯುವವರಲ್ಲವೆಂಬುದನ್ನು ನೀವು ಮನಗಾಣಬೇಕು. ನಿರ್ಮಲ ಮನಸ್ಸಿಿನಿಂದ ಯೋಚಿಸಿದಾಗ ಮಾತ್ರ ಸತ್ಯಾಾಸತ್ಯತೆಯ ಅರಿವು ಮೂಡಲು ಸಾಧ್ಯ. ಈ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಕಾಶ್ಮೀರ ರಾಜ್ಯದ ಜನಸಾಮಾನ್ಯರೊಡನೆ ಬೆರೆತು. ಅವರ ಸಂಕಷ್ಟಗಳಿಗೆ ದನಿಯಾಗಿ ಭದ್ರತೆಯ ಭಾವವನ್ನು ಮೂಡಿಸುತ್ತಿಿದ್ದಾಾರೆ.

ಜಮ್ಮು-ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದು ಪಡಿಸಿದ ಕೇಂದ್ರದ ಕ್ರಮ ನೆರೆರಾಷ್ಟ್ರವಾದ ಪಾಕಿಸ್ತಾಾನದಲ್ಲಿ ಕೋಲಾಹಲವೊಂದನ್ನು ಹುಟ್ಟು ಹಾಕಿದೆ. ಭಾರತದ ರಾಯಭಾರಿಯನ್ನು ವಾಪಸು ಕಳುಹಿಸಿ, ಭಾರತದೊಂದಿಗೆ ವ್ಯಾಾಪಾರ-ವಹಿವಾಟುಗಳನ್ನು ಸ್ಥಗಿತಗೊಳಿಸುವಂಥ ವಿಪರೀತ ಕ್ರಮಗಳನ್ನು ಕೈಗೊಂಡಿದೆ. ‘ಸಂಜೋತಾ ಎಕ್‌ಸ್‌‌ಪ್ರೆೆಸ್’ ಹಾಗೂ ‘ಥಾರ್ ಎಕ್‌ಸ್‌‌ಪ್ರೆೆಸ್’ ಗಳನ್ನು ಸ್ಥಗಿತಗೊಳಿಸಿದೆ. ಇಷ್ಟು ಮಾತ್ರವಲ್ಲ, ಭಾರತ ಸರಕಾರ 370ವಿಧಿಯನ್ನು ರದ್ದುಗೊಳಿಸಿರುವ ವಿಚಾರವನ್ನು ವಿಶ್ವಸಂಸ್ಥೆೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಾಪಿಸುವುದಾಗಿ ಬೆದರಿಕೆ ಒಡ್ಡಿಿದೆ.

ಕಾಶ್ಮೀರ ವಿಚಾರದಲ್ಲಿ ಮಧ್ಯವರ್ತಿಯ ಸ್ಥಾಾನವನ್ನು ನಿರ್ವಹಿಸಲಾಗದೆಂದು ಈಗಾಗಲೇ ವಿಶ್ವಸಂಸ್ಥೆೆ ಸ್ಪಷ್ಟಪಡಿಸಿದೆ. ಭಾರತದ ವಿರುದ್ಧ ಯುದ್ಧಕ್ಕೆೆ ತಯಾರು ಎಂಬ ಸೂಚನೆಯನ್ನು ಪಾಕಿಸ್ತಾಾನ ಹೇಳಿಕೆ ನೀಡುತ್ತಲೇ ಇದೆ. ಆದರೆ ಇದು ಹತಾಶೆಗೊಂಡಿರುವ ಪಾಕಿಸ್ತಾಾನದ ವಿವೇಕರಹಿತ ನಡೆಯೇ ಸರಿ. ಜಮ್ಮು-ಕಾಶ್ಮೀರಗಳೆಂದಿಗೂ ಭಾರತದ ಅವಿಭಾಜ್ಯ ಅಂಗಗಳೆಂದು ಭಾರತ ಪದೇಪದೆ ಸ್ಪಷ್ಟ ಪಡಿಸುತ್ತಲಿದೆ. ಲಡಾಖ್ ಪ್ರದೇಶವನ್ನು ಸಹ ಕೇಂದ್ರಾಾಡಳಿತಕ್ಕೆೆ ಒಳಪಡಿಸಿರುವುದರಿಂದ ಆ ಪ್ರದೇಶದಲ್ಲಿ ಸಹ ಅಭಿವೃದ್ಧಿಿಯ ಪಥ ತೆರದುಕೊಳ್ಳಲಿದೆ. ‘ಅಡ್ವೆೆಂಚರ್ ಟೂರಿಸಮ್’ ಹಾಗೂ ಆಧ್ಯಾಾತ್ಮಿಿಕತೆಗೆ ಪೂರಕ ವಾತಾವರಣ ಇಲ್ಲಿದೆ. ಕಾಶ್ಮೀರವಿಲ್ಲದ ಭಾರತ ಅಪೂರ್ಣವೆನಿಸುವಂತೆ, ಪಾಕ್ ಆಕ್ರಮಿತ ಕಾಶ್ಮೀರವಿಲ್ಲದೆ ಕಾಶ್ಮೀರ ಅಪೂರ್ಣವೆನಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದತ್ತ ಸರಕಾರದ ಚಿತ್ತವೆಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾಾರೆ. ಇಷ್ಟು ಮಾತ್ರವಲ್ಲದೇ, ಪ್ರಾಾಣ ಹೋದರೂ ಸರಿಯೇ ಆ ಪ್ರದೇಶವನ್ನು ಬಿಟ್ಟಕೊಡುವುದು ಸಾಧ್ಯವೇ ಇಲ್ಲವೆಂದು ಲೋಕಸಭೆಯಲ್ಲಿ ಗುಡುಗಿದ್ದಾಾರೆ. ಆಡದೆ ಮಾಡುವವರು ಇನ್ನು ಆಡಿದ ಮಾತನ್ನು ಉಳಿಸಿಕೊಳ್ಳದಿರಲು ಸಾಧ್ಯವೇ ಇಲ್ಲ.
ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

Leave a Reply

Your email address will not be published. Required fields are marked *