Wednesday, 1st December 2021

ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ಇಂದಿನಿಂದ

ಸುಬ್ರಹ್ಮಣ್ಯ: ಶ್ರೀ ಕುಕ್ಕೆೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರ ಮಹಾ ಪ್ರಸಾದ ಮೂಲಮೃತ್ತಿಿಕೆಯನ್ನು (ಹುತ್ತದ ಮಣ್ಣು) ಕಾರ್ತಿಕ ಬಹುಳ ಏಕಾದಶಿಯ ಶನಿವಾರ ತೆಗೆಯಲಾಯಿತು.
ದೇಗುಲದ ಪ್ರಧಾನ ಅರ್ಚಕರು ಶನಿವಾರ ಬೆಳಗ್ಗೆೆ ಗರ್ಭಗುಡಿಯಿಂದ ಮೂಲಮೃತ್ತಿಿಕೆಯನ್ನು ತೆಗೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು. ಹಲವು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು. ಮೂಲಸ್ಥಾಾನವಾದ ಕುಕ್ಕೆೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿಯಿಂದ ತೆಗೆಯುವ ಈ ಮೃತ್ತಿಿಕೆ ಅತ್ಯಂತ ಪವಿತ್ರ ಮಹಾಪ್ರಸಾದ ಎಂಬ ನಂಬಿಕೆ ಕ್ಷೇತ್ರದ ಭಕ್ತರದು.
ಮೂಲಮೃತ್ತಿಿಕೆಯನ್ನು ವರ್ಷದಲ್ಲಿ ಒಂದು ಬಾರಿ ತೆಗೆಯಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮ ರೋಗಗಳ ಪರಿಹಾರಕ್ಕೆೆ ದಿವ್ಯ ಔಷಧವೆಂಬ ನಂಬಿಕೆಯಿದೆ. ಮೂಲಮೃತ್ತಿಿಕೆ ತೆಗೆಯುವ ಕಾರಣ ಶನಿವಾರ ಬೆಳಿಗ್ಗೆೆ ಭಕ್ತರಿಗೆ ತಡವಾಗಿ ದೇವರ ದರ್ಶನಕ್ಕೆೆ ಅವಕಾಶ ನೀಡಲಾಯಿತು.
ಹಸುರು ಕಾಣಿಕೆ ಸ್ವೀಕಾರ: ಚಂಪಾಷಷ್ಠಿಿ ಪ್ರಯುಕ್ತ ಹಸುರು ಕಾಣಿಕೆ ನ.24ರಿಂದ ನಡೆಯಲಿದೆ ಸಾರ್ವಜನಿಕರಿಂದ ಹಸುರು ಕಾಣಿಕೆ ಸ್ವೀಕಾರ ನ.24ರಿಂದ ಡಿ.9ರ ತನಕ ನಡೆಯಲಿದೆ. ಹೊರೆಕಾಣಿಕೆಯನ್ನು ದೇಗುಲ ಗೋಪುರ ಮುಂಭಾಗದಲ್ಲಿ ಬೆಳಗ್ಗೆೆ 9ರಿಂದ ಸಂಜೆ 5ರ ತನಕ ಸ್ವೀಕರಿಸಲಾಗುತ್ತದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಜಾತ್ರೆೆ ಆರಂಭ: ಕಾರ್ತಿಕ ಬಹುಳ ದ್ವಾಾದಶಿಯಂದು ದೇವಸ್ಥಾಾನದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೆೆ ಆರಂಭವಾಗುವುದು. ಅದರಂತೆ ಭಾನುವಾರ ಕೊಪ್ಪರಿಗೆ ಏರುವ ಕಾರ್ಯ ನಡೆಯಲಿದೆ. ಇದರೊಂದಿಗೆ ಜಾತ್ರೋೋತ್ಸವ ಆರಂಭವಾಗಲಿದೆ.