Friday, 27th May 2022

ಸಂಘ ಪರಿವಾರ, ಕುಟುಂಬ ಪರಿವಾರವಲ್ಲ ಕುಮಾರಸ್ವಾಮಿಯವರೇ

ವೀಕೆಂಡ್ ವಿಥ್ ಮೋಹನ್

ಮೋಹನ್‌ ವಿಶ್ವ

camanoharbn@gmail.com

ಕಳೆದ ಕೆಲ ವರ್ಷಗಳಿಂದ ಕುಮಾರಸ್ವಾಮಿಯವರಿಗೆ ಆಗಾಗ ಏನಾಗುತ್ತದೆಯೋ ತಿಳಿಯುತ್ತಿಲ್ಲ, ತಮ್ಮ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡುತ್ತಾರೋ
ಅಥವಾ ಬೇಕಂತಲೇ ಏನೇನೋ ಮಾತನಾಡುತ್ತಾರೋ ನಾನರಿಯೆ, ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತ ಮಹಿಳೆಯೊಬ್ಬಳನ್ನು ಎಲ್ಲಿ ಮಲಗಿದ್ದೀಯಮ್ಮಾ? ಎಂದಿದ್ದರು, ಮಂಡ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಲತಾ ಅಂಬರೀಶ್‌ರನ್ನು ಟಾರ್ಗೆಟ್ ಮಾಡಿ ಬಾಯಿಗೆ ಬಂದಂತೆ ಮಾತನಾಡಿದ್ದರು.

ಕನ್ನಡದ ಖ್ಯಾತ ನಟರಾಗಿರುವ ದರ್ಶನ್ ತೂಗುದೀಪ ಹಾಗೂ ಯಶ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ದ್ದರು, ‘ಮಿಣಿ ಮಿಣಿ ಪೌಡರ್’ ಎನ್ನುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳ ಕೈಗೆ ಸಿಕ್ಕು ನಗೆಪಾಟಲಿಗೆ ಗುರಿಯಾಗಿದ್ದರು. ತನ್ನ ಸುತ್ತಲೂ ಹೊಗಳು ಭಟ್ಟರನ್ನು ಕೂರಿಸಿಕೊಂಡು ಅವರು
ಹೇಳಿದಂತೆ ಸಮಾಜದ ಮುಂದೆ ಬಂದು ನಾಲಗೆಯ ಮೇಲೆ ನಿಯಂತ್ರಣವಿಲ್ಲದೆ ಕುಮಾರಸ್ವಾಮಿ ಮಾತನಾಡುತ್ತಿರುತ್ತಾರೆ. ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟಾರ್ಗೆಟ್ ಮಾಡಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮಾಜಸೇವೆಯ ಮೂಲಭೂತಗಳ
ಬಗೆಗಿನ ಸಾಮಾನ್ಯ eನವಿಲ್ಲದ ಕುಮಾರಸ್ವಾಮಿಯವರು ಸಂಘ ಪರಿವಾರವನ್ನು ತಮ್ಮ ಕುಟುಂಬ ಪರಿವಾರದ ರೀತಿಯೆಂದುಕೊಂಡಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಕೇವಲ ಕುಟುಂಬ ರಾಜಕಾರಣ ಮಾಡಿಕೊಂಡು ಅಧಿಕಾರ ನಡೆಸಿದಂತಹ ಜಾತ್ಯತೀತ ಜನತಾದಳದ ಕುಮಾರಸ್ವಾಮಿಯವರಿಗೆ ಸಮಾಜದ ಜನರ ಕಷ್ಟದ ಅರಿವಿಲ್ಲ. ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ತನ್ನ ಅಸ್ತಿತ್ವವನ್ನಿಟ್ಟುಕೊಂಡಿರುವ ಪಕ್ಷದ ನಾಯಕ ಕುಮಾರಸ್ವಾಮಿ, ತನ್ನ ಸಮಾಜ ಸೇವೆಯಿಂದಲೇ ರಾಷ್ಟ್ರವ್ಯಾಪಿ ಹರಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸಾಮಾಜಿಕ ವಲಯದಲ್ಲಿ ನಗೆಪಾಟಲಿಗೆ ಗುರಿಯಾಗಿದೆ. ದೇಶಾದ್ಯಂತ ಕೇವಲ ಒಂದೇ ಒಂದು ಸೀಟನ್ನು ಗೆದ್ದಿರುವ ಜಾತ್ಯತೀತ ಜನತಾದಳದ ಸಂಸದ ಪ್ರಜ್ವಲ್ ರೇವಣ್ಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕರ್ನಾಟಕದಿಂದ ದೆಹಲಿಗೆ ಓಡಿಸುತ್ತೇವೆಂದು ಭಾಷಣ ಮಾಡಿದಾಗ ಉರುಳಾಡುವಷ್ಟು ನಗು ಬಂದಿತ್ತು.

ತಮ್ಮ ಕುಟುಂಬ ಕೇಂದ್ರಿತ ಸ್ವಾರ್ಥ ರಾಜಕೀಯದಿಂದ ಹಲವಾರು ನಾಯಕರುಗಳನ್ನು ಕಳೆದುಕೊಂಡಿರುವ ಪಕ್ಷ ಜಾತ್ಯತೀತ ಜನತಾದಳ. ಕಾರ್ಯಕರ್ತರು ಮೈಗಳ್ಳರು ಕೆಲಸ ಮಾಡುವುದಿಲ್ಲವೆಂದು ಸ್ವತಃ ರೇವಣ್ಣನವರೇ ಹೇಳುವ ಮೂಲಕ ತಮ್ಮ ಪಕ್ಷದ ಕಾರ್ಯಕರ್ತರಿಗೆ ಅವಮಾನ ಮಾಡಿದ್ದರು. ಇವರ ಮಾತು ಗಳಿಗೆ ಮನನೊಂದ ಕಾರ್ಯಕರ್ತರು ಎಂದೋ ಇವರ ಸಹವಾಸ ಬೇಡವೆಂದು ಜಾತ್ಯತೀತ ಜನತಾದಳ ಪಕ್ಷವನ್ನು ಬಿಟ್ಟು ಇತರ ಪಕ್ಷಗಳಿಗೆ ಸೇರಿದ್ದಾರೆ. ಇವರ
ಕುಟುಂಬ ಪರಿವಾರ ಕೇಂದ್ರಿತ ರಾಜಕಾರಣಕ್ಕೆ ಬಲಿಯಾಗಿ ಇತರ ಪಕ್ಷ ಸೇರಿದಂತಹ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ, ಹಲವು ನಾಯಕರುಗಳು ಇತರ
ಪಕ್ಷಗಳಲ್ಲಿ ಮಂತ್ರಿಗಳಾಗಿದ್ದಾರೆ, ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ.

ದಶಕಗಳಿಂದ ಕೇವಲ ಕುಟುಂಬ ಪರಿವಾರ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಜಾತ್ಯತೀತ ಜನತಾದಳ, ಪಕ್ಷ ಕಟ್ಟಲು ಬೆನ್ನೆಲುಬಾಗಿ ನಿಂತಂತಹ ನಾಯಕರುಗಳನ್ನು ಬೆಳೆಸುವುದಿಲ್ಲ, ಬದಲಾಗಿ ತುಳಿಯುತ್ತದೆ. ತೀರಾ ಇತ್ತೀಚಿಗೆ,ಮೈಸೂರಿನ ಚಾಮುಂಡೇಶ್ವರಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನು ಸೋಲಿಸಿದ್ದಂತಹ ಜಿ.ಟಿ. ದೇವೇಗೌಡರು ಇವರ ಕುಟುಂಬ ಪರಿವಾರ ರಾಜಕೀಯಕ್ಕೆ ಬೇಸತ್ತು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಾಲನ್ನಿಟ್ಟಿದ್ದಾರೆ.
ಮುಸಲ್ಮಾನರ ಮತಬ್ಯಾಂಕಿನ ಓಲೈಕೆಯ ಸಲುವಾಗಿ ಸಿದ್ದರಾಮಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟಾರ್ಗೆಟ್ ಮಾಡಿ ತಾಲಿಬಾನಿಗೆ ಹೋಲಿಸಲು ಶುರುಮಾಡಿದ ಮೇಲೆ, ಕುಮಾರಸ್ವಾಮಿ ತಾನೂ ಸಹ ಮುಸಲ್ಮಾನರ ಮತಬ್ಯಾಂಕನ್ನು ಓಲೈಸುವ ಸಲುವಾಗಿ ಸಂಘ ಪರಿವಾರವನ್ನು ಟಾರ್ಗೆಟ್ ಮಾಡಿ ಇಲ್ಲಸಲ್ಲದ ಸುಳ್ಳುಗಳನ್ನಾಡುತ್ತಿದ್ದಾರೆ.

೨೦೧೭ರವರೆಗೂ ಜಾತ್ಯತೀತ ಜನತಾದಳ ಮುಸಲ್ಮಾನರ ಮತಬ್ಯಾಂಕನ್ನು ತನ್ನ ಬಳಿಯಲ್ಲಿಟ್ಟುಕೊಂಡಿತ್ತು, ಆದರೆ ಪಕ್ಷದ ಕುಟುಂಬ ಪರಿವಾರ ರಾಜಕೀಯಕ್ಕೆ ಬೇಸತ್ತು ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯರ ಅನುಮತಿ ಮೇರೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಜಮೀರ್ ಕಾಂಗ್ರೆಸ್ಸಿಗೆ ಬರುವಾಗ ಜಾತ್ಯತೀತ ಜನತಾದಳದ ಬಹುಪಾಲು ಮುಸಲ್ಮಾನ್ ಮತಗಳನ್ನು ತಮ್ಮೊಡನೆ ಕಾಂಗ್ರೆಸ್ಸಿಗೆ ತಂದುಬಿಟ್ಟರು. ತನ್ನ ತವರುಜಿಯಲ್ಲಿ ೨೦೧೮ರಲ್ಲಿ ರಾಮನಗರದಿಂದ ಸ್ಪರ್ಧಿಸಿದ್ದಂತಹ ಕುಮಾರಸ್ವಾಮಿ ವಿರುದ್ಧ ನಿಂತಿದ್ದ ಕಾಂಗ್ರೆಸ್ಸಿನ ಅಭ್ಯರ್ಥಿ ಸುಮಾರು ೭೦,೦೦೦ ಮತಗಳನ್ನು ಪಡೆಯುವ ಮೂಲಕ, ಮುಸಲ್ಮಾನರು
ಜಮೀರ್ ಜತೆ ಕಾಂಗ್ರೆಸ್ಸಿಗೆ ಹೋಗಿದ್ದರೆಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದ.

ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ತಮ್ಮದೇ ಶಿಷ್ಯನನ್ನು ನಿಲ್ಲಿಸಿದರೂ ಸಹ ಏನೂ ಪ್ರಯೋಜನವಾಗಲಿಲ್ಲ, ಇದರಿಂದ ವಿಚಲಿತರಾಗಿದ್ದಂತಹ ಕುಮಾರ ಸ್ವಾಮಿ ಮುಸಲ್ಮಾನ್ ಮತಗಳನ್ನು ತಮ್ಮೆಡೆಗೆ ಪುನಃ ಸೆಳೆಯಲು ಅಂದಿನಿಂದ ಇಂದಿನವರೆಗೂ ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. ವಿಪರ್ಯಾಸವೆಂದರೆ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತೇನೆಂದು ಹೇಳಿದರೂ ಸಹ ಮುಸಲ್ಮಾನರು ಅವರ ಪಕ್ಷದ ಕೈ ಹಿಡಿಯಲಿಲ್ಲ, ಇದೇ ನನ್ನ ಕೊನೆಯ ಚುನಾವಣೆಯೆಂದು ಸುಳ್ಳು ಹೇಳಿದರೂ ಸಹ ಮುಸಲ್ಮಾನರ ಮತ ಬೀಳಲಿಲ್ಲ, ಕುಮಾರಸ್ವಾಮಿ ಕಣ್ಣೇರುಹಾಕಿ ಮತ ಕೇಳಿದರೂ ಸಹ ಮುಸಲ್ಮಾನರು ಜಾತ್ಯತೀತ ಜನತಾದಳದ ಪರವಾಗಿ ನಿಲ್ಲಲಿಲ್ಲ. ಕುಮಾರಸ್ವಾಮಿಯವರ ಕಣ್ಣೀರಿನ ಹಿಂದಿನ ವಿP ಕತೆಯನ್ನು ಜಮೀರ್ ಮುಸಲ್ಮಾನರ ಮುಂದೆ ಹೇಳಿ ಸರಿಯಾದಂತಹ ಹೊಡೆತವನ್ನೇ ಕೊಟ್ಟಿದ್ದರು.

ದೇವೇಗೌಡರು ಪ್ರಧಾನಿಗಳಾದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅಸ್ತಿತ್ವಕ್ಕೆ ಬಂದು ಸುಮಾರು ೭೦ ವರ್ಷಗಳು ಕಳೆದಿದ್ದವು, ಸಮಾಜ ಸೇವೆಯನ್ನೇ ಪ್ರಮುಖ ಉದ್ದೇಶವನ್ನಾಗಿಸಿಕೊಂಡು ಸ್ಥಾಪನೆಯಾದಂತಹ ಸಂಘದ ಬಗ್ಗೆ ಕುಮಾರಸ್ವಾಮಿ ಮಾತನಾಡುವಾಗ ಅವರ ಬೌದ್ಧಿಕ ದಿವಾಳಿತನದ ಅನಾವರಣ ವಾಗಿದ್ದು ಎದ್ದು ಕಾಣುತ್ತಿತ್ತು. ಬ್ರಿಟಿಷರು ಸೃಷ್ಟಿಸಿ ಹೋಗಿದ್ದಂತಹ ಹಿಂದೂ ಸಮಾಜದಲ್ಲಿನ ಜಾತಿಗಳ ನಡುವಿನ ಕಂದಕವನ್ನು ನಿರ್ಮೂಲನೆ ಮಾಡಿ ಒಂದೇ ಧರ್ಮ ಹಾಗೂ ರಾಷ್ಟ್ರೀಯವಾದವೆಂಬ ಸಿzಂತದೊಂದಿಗೆ ಶುರುವಾದಂತಹ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ.

ಮಹಾತ್ಮ ಗಾಂಽಯವರೇ ಸಂಘದ ಸಭೆಯೊಂದರಲ್ಲಿ ನೆರೆದಿದ್ದಂತಹ ಕಾರ್ಯಕರ್ತರ ಜಾತಿಗಳ ಬಗ್ಗೆ ಪ್ರಶ್ನಿಸಿದಾಗ, ಸಂಘದ ಕಾರ್ಯಕರ್ತರ್ಯಾರು ಸಹ
ತಮ್ಮ ತಮ್ಮ ಜಾತಿಯ ಬಗ್ಗೆ ಹೇಳಿಕೊಳ್ಳಲಿಲ್ಲ. ದಲಿತರ ವಿಚಾರವಾಗಿ ಹರಿಜನರೆಂಬ ಪದವನ್ನು ಬಳಸುತ್ತಿದಂತಹ ಮಹಾತ್ಮಾ ಗಾಂಽಯವರ ಹೇಳಿಕೆಯನ್ನು ಅಂಬೇಡ್ಕರ್ ವಿರೋಧಿಸಿದ್ದರು, ಅದೇ ರೀತಿಯ ವಿರೋಧವನ್ನು ಸಂಘದ ಮೊದಲ ಸರಸಂಘಚಾಲಕರಾಗಿದ್ದಂತಹ ಹೆಡ್ಗೆವಾರ್ ಸಹ ವ್ಯಕ್ತಪಡಿಸಿದ್ದರು. ಸಂಘ ಹಾಗೂ ಅಂಬೇಡ್ಕರರಿಗೆ ಮುಂದೊಂದು ದಿನ ಇದೇ ಪದವನ್ನು ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕಿಗಾಗಿ ಬಳಸಿಕೊಳ್ಳುತ್ತಾರೆಂಬ ಸ್ಪಷ್ಟತೆ ಇತ್ತು.

ಅವರ ಸ್ಪಷ್ಟತೆ ನಿಜವಾಗಿ ಇಂದಿಗೂ ಸಹ ದಲಿತರನ್ನು ಬಳಸಿಕೊಂಡು ರಾಜಕೀಯ ಮಾಡಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುತ್ತವೆ. ಜಾತಿಯ ಕಲ್ಪನೆಯೇ ತಿಳಿಯದ ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಲ್ಲಿ, ಧರ್ಮ ಹಾಗು ಜಾತಿಯನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುವ ಕುಮಾರ ಸ್ವಾಮಿ ಎಲ್ಲಿ ? ಚುನಾವಣೆ ಬಂತೆಂದರೆ ಸಾಕು ಜಾತಿ ಹಾಗು ಧರ್ಮವನ್ನು ಎಳೆತರುವ ಕುಮಾರಸ್ವಾಮಿಯವರಿಗೆ ಬಾವಿಯೊಳಗಿನ ಕಪ್ಪೆಯ ಕಥೆ ತಿಳಿದಿಲ್ಲ. ಒಂದು ಧರ್ಮದವರನ್ನು ಸಂತುಷ್ಟಿ ಪಡಿಸಲು ತನ್ನ ಸುತ್ತಲಿನವರು ಹಾಕಿದ ತಾಳಕ್ಕೆ ಕುಣಿಯುವ ಮಿಣಿ ಮಿಣಿ ಸ್ವಾಮಿಯವರು ಸಂಘದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ತನ್ನ ಪಕ್ಷದ ಅಳಿದುಳಿದ ಬೆರಳೆಣಿಕೆಯ ನಾಯಕರು ಹಾಗೂ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಬೇರೆ ದಾರಿಯನ್ನು ಕಾಣದೆ ಸಂಘದ ವಿರುದ್ಧ ಕಿಡಿಕಾರಲಾರಂಭಿಸಿದ್ದಾರೆ.

೧೯೭೭ರಲ್ಲಿ ಇಂದಿರಾಗಾಂಽ ಹೇರಿದ ತುರ್ತು ಪರಿಸ್ಥಿಯ ಸಮಯದಲ್ಲಿ ಇಡೀ ದೇಶವೇ ಕಗ್ಗತ್ತಲಲ್ಲಿ ಮುಳುಗಿತ್ತು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹುಟ್ಟುವು ದಕ್ಕಿಂತ ಮೊದಲೇ ಭಾರತದಲ್ಲಿ ತಾಲಿಬಾನ್ ಸರಕಾರ ಹೇರಿದ್ದ ಇಂದಿರಾ ಗಾಂಽ ವಿರುದ್ಧ ಧ್ವನಿಯೆತ್ತಿ ಭಾರತದಲ್ಲಿ ಪ್ರಜಾಪ್ರಭುತ್ವ ಪುನರ್‌ ಸ್ಥಾಪನೆಯಾಗಲು ಪ್ರಮುಖ ಪಾತ್ರ ವಹಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಕುಮಾರಸ್ವಾಮಿಯವರೇ ಅಽಕಾರದಲ್ಲಿದ್ದಾಗ ಉಂಟಾದಂತಹ ಹಲವು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅವರದ್ದೇ ಸರಕಾರದ ಅಽಕಾರಿಗಳು ಹಾಗೂ ಶಾಸಕರು ಜನರ ಬಳಿ ತೆರಳುವುದಕ್ಕಿಂತಲೂ ಮುಂಚಿತವಾಗಿ ಜನರ ಬಳಿ ತೆರಳಿ, ನೆರವಿಗೆ ಧಾವಿಸಿದ್ದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ನಿಸ್ವಾರ್ಥ ಕಾರ್ಯಕರ್ತರು.

ಒರಿಸ್ಸಾದಲ್ಲಿ ಪ್ರವಾಹವುಂಟಾದರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಸಂಘದ ಕಾರ್ಯಕರ್ತರು, ಚೆನ್ನೆ ನಗರದಲ್ಲಿ ಮಳೆಯಿಂದ ಪ್ರವಾಹ ಉಂಟಾದಾಗ ಸಂತ್ರಸ್ತರ ಬಳಿ ಮೊದಲು ಧಾವಿಸಿದ್ದು ಸಂಘದ ಕಾರ್ಯಕರ್ತರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಸಂತ್ರಸ್ತರ ಬಳಿ ಮೊದಲು ಧಾವಿಸಿದ್ದು ಸಂಘದ ಕಾರ್ಯ ಕರ್ತರು, ಉತ್ತರ ಭಾರತದಲ್ಲಿ ಪ್ರವಾಹ ಉಂಟಾದಾಗ ಸಂತ್ರಸ್ತರ ಬಳಿ ಮೊದಲು ಧಾವಿಸಿದ್ದು ಸಂಘದ ಕಾರ್ಯಕರ್ತರು. ದೇಶಸೇವೆಯೆಂದರೆ ಸದಾ ಮುಂದಿರುವ ನಿಸ್ವಾರ್ಥ ಕಾರ್ಯಕರ್ತರನ್ನು ಹೊಂದಿರುವ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ. ಸಂಘದಲ್ಲಿ ಕಲಿತ ಲಕ್ಷಾಂತರ ಯೋಧರು ಭಾರತೀಯ ಸೈನ್ಯದಲ್ಲಿ ಸೈನಿಕರಾಗಿzರೆ ಅವರ್ಯಾರೂ ಸಹ ಕುಮಾರಸ್ವಾಮಿಯವರು ಮಾಡುವ ಧರ್ಮ ಹಾಗು ಜಾತಿ ಆಧಾರಿತ ಕೆಲಸ ಮಾಡುವುದಿಲ್ಲ, ಸಂಘದಲ್ಲಿ ಕಲಿತ ಲಕ್ಷಾಂತರ ವೈದ್ಯರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಸಂಘದಲ್ಲಿ ಕಲಿತವರು ಪೊಲೀಸ್ ಇಲಾಖೆಯಲ್ಲಿದ್ದಾರೆ, ಸಂಘದವರು ಮುಖ್ಯಮಂತ್ರಿಗಳಾಗಿದ್ದಾರೆ, ಪ್ರಧಾನಮಂತ್ರಿಗಳಾಗಿದ್ದಾರೆ, ಮಂತ್ರಿಗಳಾಗಿದ್ದಾರೆ, ರಾಷ್ಟ್ರಪತಿಗಳಾಗಿದ್ದಾರೆ.

ಕೋಟ್ಯಂತರ ಜನರು ಸಂಘದ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆಂದರೆ, ಅದು ಸಂಘದಲ್ಲಿರುವ ನಿಸ್ವಾರ್ಥ ದೇಶ ಸೇವೆಯಿಂದ ಮಾತ್ರ. ಕುಮಾರಸ್ವಾಮಿಯವರ ಅಣ್ಣರೇವಣ್ಣ ಅವರದ್ದೇ ಪಕ್ಷದ ಕಾರ್ಯಕರ್ತರನ್ನು ಸೋಂಬೇರಿಗಳೆಂದು ಕರೆಯುವಾಗ ಜಾತ್ಯತೀತ ಜನತಾದಳದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಿತ್ತು. ಚುನಾವಣೆ ಬಂತೆಂದರೆ ಮಾತ್ರ ಕಾರ್ಯಕರ್ತರು ನೆನಪಾಗುವ ಕುಮಾರಸ್ವಾಮಿಯವರಿಗೆ, ಚುನಾವಣೆ ಮುಗಿದ ನಂತರ ಕಾರ್ಯಕರ್ತರ ಪಾಡೆನೆಂಬು ದರ ಬಗ್ಗೆ ಚಿಂತೆಯೇ ಇರುವುದಿಲ್ಲ. ದೇಶಾತ್ಯಂತ ಸಾವಿರಾರು ಶಾಲೆಗಳನ್ನು ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದೆ ರಾಷ್ಟ್ರೀಯ
ಸ್ವಯಂ ಸೇವಕ ಸಂಘ, ಸಾವಿರಾರು ಆಸ್ಪತ್ರೆಗಳನ್ನು ನಿರ್ಮಿಸಿ ಜನ ಸೇವೆ ಮಾಡುತ್ತಿದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕುಟುಂಬ ಪರಿವಾರವನ್ನು ನಂಬಿಕೊಂಡಿರುವ ಕುಮಾರಸ್ವಾಮಿ ನಡೆಸುವ ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಬಂದಂತಹ ಆದಾಯ ಅವರದ್ದೇ ಕುಟುಂಬವನ್ನು ಸೇರುತ್ತದೆಯೇ ಹೊರತು ಜನಸೇವೆಗೆ ಸೇರುವುದಿಲ್ಲ.

ಸಂಘದ ಪ್ರಮುಖರು ಇಂದಿಗೂ ಸಹ ಕೆಳ ಮಧ್ಯಮವರ್ಗದ ಸಾಮಾನ್ಯ ಜನರು ಜೀವನ ನಡೆಸುವ ಶೈಲಿಯಲ್ಲಿಯೇ ತಮ್ಮ ಜೀವನ ನಡೆಸುತ್ತಾರೆ. ಸಂಘದ ಕಚೇರಿಗಳಲ್ಲಿ ಉಳಿದುಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ನಿಮ್ಮ ರೀತಿಯಲ್ಲಿ ತಾಜ್ ವೆ
ಎಂಡ್ ಪಂಚತಾರಾ ಹೋಟೆಲಿನಲ್ಲಿ ಕುಳಿತು ಕೆಲಸ ಮಾಡುವುದಿಲ್ಲ. ಇನ್ನು ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ೧೦೦ ವರ್ಷ
ತುಂಬುತ್ತದೆ, ೧೦೦ ವರ್ಷಗಳ ಕಾಲ ಸಮಾಜದ ನಿಸ್ವಾರ್ಥ ಸೇವೆಯಲ್ಲಿಯೇ ತೊಡಗಿಸಿಕೊಂಡಿರುವ ಬೃಹತ್ ಸಂಘಟನೆ. ವರ್ಷದಿಂದ ವರ್ಷಕ್ಕೆ ತನ್ನ ಸಂಘಟನೆ ಹಾಗೂ ಸೇವೆಯನ್ನು ವಿಸ್ತರಿಸಿಕೊಂಡು ಬಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯಶಸ್ಸಿನ ಗುಟ್ಟು ನಿಸ್ವಾರ್ಥ ಸಮಾಜ ಸೇವೆ.

ಜಾತಿ, ಧರ್ಮ,ಕುಟುಂಬಗಳಿಗೆ ಮಣೆಹಾಕದೆ ಸೇವೆಯನ್ನೇ ಗುರಿಯಾಗಿಸಿಕೊಂಡು ಬಂದಿರುವ ಸಂಘಟನೆ ಸಂಘ ಪರಿವಾರ. ಸ್ವಾರ್ಥ ರಾಜಕೀಯ ತಂತ್ರಗಳಿಂದ ಅನುಕೂಲ ಸಿಂಧು ರಾಜಕೀಯ ಮಾಡುವ ಕುಮಾರಸ್ವಾಮಿಯವರೇ, ಬಹುಷಃ ನಿಸ್ವಾರ್ಥ ಪದದ ಅರ್ಥವೇ ನಿಮಗೆ ತಿಳಿದಿಲ್ಲವೆನಿಸುತ್ತದೆ. ಮೂರು ಜಿಲ್ಲೆಗಳ ಚುನಾವಣೆ ಬಂತೆಂದರೆ ಸಾಕು ರೈತರ ಹೆಸರಿನಲ್ಲಿ ರಾಜಕೀಯ  ಮಾಡುತ್ತೀರಿ, ಉಪಚುನಾವಣೆಗಳು ಬಂತೆಂದರೆ ಸಾಕು ಮುಸ್ಲಿಂ ಮತದಾರರನ್ನು ಕಂಡಾಕ್ಷಣ ಅವರ ಓಲೈಕೆ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿರಿ, ಅಂಬೇಡ್ಕರರು ಹೇಳಿದ ರೀತಿಯಲ್ಲಿ ದಲಿತರ ಹೆಸರಿನಲ್ಲಿ ಹರಿಜನ ರಾಜಕೀಯ, ಈಗಲೂ ಅಷ್ಟೇ ಉಪಚುನಾವಣೆಯ ಹೊಸ್ತಿಲಲ್ಲಿ ಮುಸಲ್ಮಾನರನ್ನು ಓಲೈಸಲು ಸಂಘದ ಮೇಲೆ ಇಲ್ಲಸಲ್ಲದ ಸುಳ್ಳಿನ ರಾಜಕೀಯ.

ಸ್ವತಃ ನಿಮ್ಮ ತಂದೆಯವರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ಕಾರ್ಯಗಳನ್ನು ಹೊಗಳಿದ್ದಾರೆ, ಅವರ ಬಳಿ ಸಂಘದ ಬಗ್ಗೆ ಚರ್ಚಿಸಿದರೆ ನಿಮ್ಮ
ಸುಳ್ಳುಗಳಿಗೆ ಉತ್ತರ ಸಿಗಬಹುದು. ಮುಸಲ್ಮಾನರ ಓಲೈಕೆಗಾಗಿ ಅತ್ತ ಸಿದ್ದರಾಮಯ್ಯ, ಇತ್ತ ನೀವು ಇಬ್ಬರೂ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತೀರಿ.ಎಷ್ಟೇ ಆದರೂ ಸಿದ್ದರಾಮಯ್ಯ ಕೂಡ ನಿಮ್ಮ ಪಕ್ಷದ ಗರಡಿಯಲ್ಲಿಯೇ ಪಳಗಿದ ರಾಜಕೀಯ ನಾಯಕನಲ್ಲವೇ, ಹಾಗಾಗಿ ಇಬ್ಬರ ಯೋಚನೆಗಳು ಸಾಮಾನ್ಯವಾಗಿ ಒಂದೇ ಇರುತ್ತದೆ ಬಿಡಿ.

ಕರ್ನಾಟಕ ಕಂಡಂಥ ಅತ್ಯಂತ ಗೊಂದಲಮಯ ರಾಜಕಾರಣಿಯೆಂದರೆ ನೀವೇ ಇರಬೇಕು, ಒಂದು ಹೇಳಿಕೆ ನೀಡುತ್ತೀರಿ, ನಂತರ ನಾನು ಹಾಗೆ ಹೇಳೇ ಇಲ್ಲವೆಂದು ಹೇಳುತ್ತೀರಿ ಅಥವಾ ನಾನು ಹೇಳಿದ್ದೊಂದು ನೀವು ಅರ್ಥ ಮಾಡಿಕೊಂಡಿದ್ದೊಂದು ಎಂದು ಹೇಳುತ್ತೀರಿ. ನಿಮ್ಮನ್ನು ನೀವು ಮಣ್ಣಿನ ಮಗನೆಂದು ಹೇಳಿಕೊಂಡು ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತ ಬಂದಿದ್ದೀರಿ, ಮೂರು ದಶಕಗಳಿಂದ ರೈತರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದಿರುವ ನೀವು ಇಂದಿಗೂ ರೈತರ ಸಾಲ ಮನ್ನಾಬಗ್ಗೆಯೇ ಮಾತನಾಡುತ್ತೀರಿ, ಹಾಗಾದರೆ ರೈತರು ಸಾಲ ತೀರಿಸುವಂತೆ ಸ್ವಾವಲಂಬಿಗಳನ್ನಾಗಿ ಮಾಡಲು ನಿಮ್ಮ
ಕೈಲಾಗಲಿಲ್ಲವೇ? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನಲೆಯಿಂದ ಬಂದಂತಹ ಪ್ರಧಾನಿ ನರೇಂದ್ರ ಮೋದಿ ಯವರ ರೈತಪರ ಯೋಜನೆಗಳ ಬಗ್ಗೆ ಸ್ವತಃ ಡಾ. ಸ್ವಾಮಿನಾಥನ್ ಹೊಗಳಿದ್ದೊಂರೆ, ಸಂಘದ ಹಿನ್ನಲೆಯಿಂದ ಬಂದಂತಹ ಮೋದಿಯವರಲ್ಲಿರುವ ರೈತರ ಪರ ಕಾಳಜಿ ನಿಮ್ಮಲಿಲ್ಲ, ನೀವೊಬ್ಬ ಬಡವನ ಪರವೆಂದು ಹೇಳಿಕೊಳ್ಳುತ್ತೀರಿ ನಿಮ್ಮ ಮನೆ ಯ ಬಾಗಿಲಲ್ಲಿ ಬಂದು ನಿಂತವರಿಗೆ ಧನ ಸಹಾಯಮಾಡಿದ ಮಾತ್ರಕ್ಕೆ ನೀವು ಬಡಜನರ ಪರವಲ್ಲ,ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಬಡವನ ಸಮಸ್ಯೆ ನಿರ್ಮೂಲನೆ ಮಾಡಲು ನಿಮ್ಮಿಂದಾಗಲಿಲ್ಲ.

ಸಂಘದ ಹಿನ್ನಲೆಯಿಂದ ಬಂದಂತಹ ನರೇಂದ್ರ ಮೋದಿಯವರ ಬಡಪರ ಯೋಜನೆಗಳು ಹಳ್ಳಿ ಹಳ್ಳಿಗೂ ತಲುಪಿವೆ. ನಿಮ್ಮ ಕುಟುಂಬದ ಶಾಸಕರಾದಂತಹ
ಅನಿತಾ ಕುಮಾರಸ್ವಾಮಿ ಪ್ರತಿನಿಽಸುವ ರಾಮನಗರದಲ್ಲಿ ಸರಕಾರದ ಜಲ ಜೀವನ್ ಮಿಷನ್ ಅಡಿಯಲ್ಲಿ ೨೦೧೮ರ ಆಗ ತಿಂಗಳಲ್ಲಿ ೭೦,೧೧೮ ಮನೆಗಳಿಗೆ ಇದ್ದಂತಹ ಕುಡಿಯುವ ನೀರಿನ ವ್ಯವಸ್ಥೆ ೨೦೨೧ರ ಅಕ್ಟೋಬರ್ ತಿಂಗಳಲ್ಲಿ ೧,೦೨,೦೦೦ ಕ್ಕೇರಿಸಿದೆ, ಇದರ ಹಿಂದಿನ ಶಕ್ತಿ ಸಂಘ ಪರಿವಾರದ ಹಿನ್ನಲೆಯಿಂದ ಬಂದಂತಹ ನರೇಂದ್ರ ಮೋದಿ. ಇದು ಕೇವಲ ಒಂದೇ ಒಂದು ಉದಾಹರಣೆಯಷ್ಟೇ, ನಿಮ್ಮ ಕ್ಷೇತ್ರದಲ್ಲಿ ಮತ ನೀಡಿರುವ ಫಲಾನುಭವಿಗಳ ಬಳಿ ಒಮ್ಮೆ ಹೋಗಿ
ಮಾತನಾಡಿಸಿ, ಮೋದಿಯವರ ರೈತಪರ ಹಾಗೂ ಬಡಪರ ಕಾಳಜಿಯ ಅರಿವಾಗುತ್ತದೆ.

ಮಾಧ್ಯಮವೊಂದರಲ್ಲಿ ಮಾತನಾಡುವಾಗ ನಿಮ್ಮ ಕಣ್ಣಿಗೆ ಸಂಘದ ಯಾವ ಸೇವೆಯು ಬಿದ್ದಿಲ್ಲವೆಂದು ಹೇಳಿದ್ದನ್ನು ಕೇಳಿಸಿಕೊಂಡೆ, ಒಂದು ವಿಷಯ ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ, ಸಂಘಧ ಕಾರ್ಯಕರ್ತರು ಎಂದೂ ಸಹ ತಾವು ಮಾಡಿದ ಕೆಲಸವನ್ನು ನಿಮ್ಮ ಹಾಗೆ ಮಾಧ್ಯಮಗಳ ಮುಂದೆ ಬಂದು ಹೇಳಿಕೊಳ್ಳುವುದಿಲ್ಲ,
ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದೆಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಧ್ಯೇಯ. ಸಂಘದ ರಾಷ್ಟ್ರೀಯವಾದಿ ಚಿಂತನೆಗಳಿಗೆ ಬೆಂಬಲಿಸಿ ದೇಶದಲ್ಲಿ ಅಧಿಕಾರಿಗಳು ಹುಟ್ಟಿಕೊಂಡರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಐಸಿಸ್ ಭಯೋತ್ಪಾದನೆಗೆ ಸೇರುವ ಭಯೋತ್ಪಾದಕರನ್ನು ಸೃಷ್ಟಿಸುವ ಕೇರಳದ ಕಮ್ಯುನಿಸ್ಟರ ಪರವಾಗಿ ನಿಲ್ಲುವ ನಿಮಗೆ, ಅಽಕಾರಿಗಳ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಬಿಡಿ.

ರಾಕ್ಷಸಿಯಂತೆ ಹಿಂದೂ ಕಾರ್ಯಕರ್ತರ ಮೇಲೆ ಹ ಮಾಡಿಸಿದಂತಹ ಮಮತಾ ಬ್ಯಾನರ್ಜಿಯ ಜತೆಗೆ ನಿಲ್ಲುವ ನಿಮಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಮಾತನಾಡುವ ನೈತಿಕತೆಯೂ ಉಳಿದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹೊರಗಿನಿಂದ ಹಗುರವಾಗಿ ಮಾತನಾಡುವ ಬದಲು ಒಂದು ವಾರ ಸಂಘದ ಶಾಖೆಗೆ ಸೇರಿಕೊಳ್ಳಿ, ನಿಸ್ವಾರ್ಥ ಸೇವೆಯೆಂದರೆ ಏನೆಂದು ನಿಮಗೆ ಅರಿವಾಗುತ್ತದೆ. ಜಾತಿ ಆಧಾರಿತ ರಾಜಕೀಯ, ಮುಸಲ್ಮಾನರ ಓಲೈಕೆ ರಾಜಕೀಯ, ಕುಟುಂಬ ಪರಿವಾರ ರಾಜಕೀಯಕ್ಕೆ ಜೋತು ಬಿದ್ದಿರುವ ನೀವು ಬಾವಿಯೊಳಗಿನ ಕಪ್ಪೆಯಂತಾಡಬೇಡಿ.ದೇಶಕ್ಕಾಗಿ ನಿಮ್ಮ ಕೊಡುಗೆ ಕೇವಲ ಕುಟುಂಬ ಕೇಂದ್ರಿತ ಪರಿವಾರ ರಾಜಕೀಯ ಮಾತ್ರವೆಂಬುದನ್ನು ಮರೆಯಬೇಡಿ.