Tuesday, 27th July 2021

ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಚಿಕ್ಕಬಳ್ಳಾಪುರ: ಚಳಿ ಕಾಯಿಸಲು ಮನೆಯೊಳಗೆ ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದ ವೇಳೆ ಉಸಿರುಗಟ್ಟಿ ಯುವತಿ ಮೃತಪಟ್ಟು, ಮೂವರು ಅಸ್ವಸ್ಥರಾಗಿದ್ದಾರೆ. ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಗೌರಿ ಬಿದನೂರಿನ ತೊಂಡೆಬಾವಿಯ ಮರಾಠಿಪಾಳ್ಯದಲ್ಲಿ ತುಮಕೂರು ಮೂಲದ ರಾಮಾಂಜನೇಯಲು ಮರಾಠಿ ಪಾಳ್ಯದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಚಿಕ್ಕ ಕೊಠಡಿಯಲ್ಲಿ ಕುಟುಂಬ ವಾಸವಿತ್ತು. ಶುಕ್ರವಾರ ತೀವ್ರ ಚಳಿಯದ್ದ ಕಾರಣ ರಾತ್ರಿ ಬಾಗಿಲು ಮುಚ್ಚಿ ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದರು.

ಕುಟುಂಬದ ನಾಲ್ವರು ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ನಾಲ್ವರನ್ನೂ ಸ್ಥಳೀಯರು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಯುವತಿ ಅರ್ಚನಾ (16) ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಬೆಂಕಿ ಇದ್ದ ಕಾರಣ ಆಮ್ಲಜನಕದ ಕೊರತೆಯಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವ ಶಂಕೆ ವ್ಯಕ್ತಗೊಂಡಿದೆ.

ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *