Wednesday, 5th October 2022

ಉದ್ಯಮಿಗಳಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭೂ ಬ್ಯಾಂಕ್ ಸ್ಥಾಪನೆ

ಬೆಂಗಳೂರು: ಮುಂಬರುವ 2022-23ರ ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿ ಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭೂ ಬ್ಯಾಂಕ್ ಸ್ಥಾಪಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ತೀರ್ಮಾನಿಸಿದೆ.

ರಾಜ್ಯಾದ್ಯಂತ ಇರುವ ಕೈಗಾರಿಕಾ ಪಾರ್ಕ್‍ಗಳನ್ನು ಅಭಿವೃದ್ಧಿ ಪಡಿಸಲು ಸಹಾ ಮುಂದಾಗಿ ರುವ ಇಲಾಖೆ, ಉದ್ಯಮಿಗಳು ಸುಲಭ ವಾಗಿ ವ್ಯಾಪಾರ – ವಹಿವಾಟು ನಡೆಸಲು ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಹೂಡಿಕೆದಾರರು ಭವಿಷ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸ ಬಹುದಾದ ಭೂಮಿ ಗುರುತಿಸಲು ಪ್ರಾರಂಭಿಸಿದೆ.

ಭೂ ಸ್ವಾಧೀನ ಪ್ರಕ್ರಿಯೆ ಕಷ್ಟದ ಕೆಲಸ ಆಗುತ್ತಿದೆ. ಹೀಗಾಗಿ, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ನಮ್ಮಲ್ಲಿ ಲಭ್ಯವಿದೆ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರು ಬಂದಾಗ 24 ಗಂಟೆಯಲ್ಲಿ ಭೂಮಿ ಸಿಗುವಂತೆ ಆಗಬೇಕು. ಯಶಸ್ವಿ ಉದ್ಯಮಿಗಳಿಗೆ ನೀರು, ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಎಲ್ಲ ಜಿಲ್ಲೆಗಳಲ್ಲಿ ಸಿಗುವಂತೆ ಮಾಡಲಿದ್ದೇವೆ. ಅನೇಕ ಕಡೆ ನಿವೇಶನ ಗಳು ಸಿಗುತ್ತಿಲ್ಲ. ಅಂತಹ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಕನಿಷ್ಠ 500 ಎಕರೆ ಭೂಸ್ವಾೀನ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದರು.

ಹಲವಾರು ಹೂಡಿಕೆದಾರರು ಮತ್ತು ಸಂಸ್ಥೆಗಳು ಹೂಡಿಕೆದಾರರ ಸಮಾವೇಶಕ್ಕೆ ಬಂದಾಗ, ಪ್ರತಿ ಜಿಲ್ಲೆಯಲ್ಲೂ ಸುಲಭವಾಗಿ ಲಭ್ಯವಿರುವ ಭೂಮಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಯೋಜನೆಗಳಿಗೆ ಸರ್ಕಾರ ಅನುಮೋದನೆ ಪಡೆದ ತಕ್ಷಣ, ಆ ಯೋಜನೆಯ ಹೂಡಿಕೆದಾರರನ್ನು ಬ್ಯಾಂಕುಗಳು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಇಲಾಖೆ ಶೀಘ್ರದಲ್ಲಿ ರೂಪಿಸಲಿದೆ. ಮಹತ್ವಾಕಾಂಕ್ಷಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022ರ ಮಾರ್ಚ್‍ನಲ್ಲಿ ಆಯೋಜಿಸುವ ಚಿಂತನೆ ಇದೆ. ಕೋವಿಡ್ ಕಾರಣದಿಂದ, ಈ ವರ್ಷ ಸಮಾವೇಶ ನಡೆಸಲು ಸಾಧ್ಯವಾಗಿಲ್ಲ.

2022ರ ಸಮಾವೇಶದ ವೇಳೆಗೆ ಭೂಮಿ, ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಮತ್ತು ಇತರ ಮೂಲಸೌಲಭ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕಿದೆ ಎಂದು ಹೇಳುತ್ತಾರೆ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾದ 5,000 ಎಕರೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಸ್ವಾೀನಪಡಿಸಿಕೊಂಡಿದ್ದು, ಹೂಡಿಕೆದಾರರು ಆಗಮಿಸಿದಾಗ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 30,000 ಎಕರೆ ಸಿದ್ಧವಾಗಬೇಕು. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಭೂಮಾಪಕರು ಮತ್ತು ಜಿಲ್ಲಾ ಉಪ ಆಯುಕ್ತರು ಸೂಕ್ತ ಭೂಮಿಯನ್ನು ಗುರುತಿಸಿ ಕೆಐಎಡಿಬಿಗೆ ಪರಿವರ್ತಿಸಲು ಅಕಾರಿಗಳಿಗೆ ನಿರಾಣಿ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸಲು ಧಾರವಾಡದಲ್ಲಿ 6,000 ಎಕರೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ 3,300 ಎಕರೆ ಸ್ವಾೀನಪಡಿಸಿಕೊಳ್ಳಲಾಗುವುದು.ವಿವಿಧ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಜಿಲ್ಲೆಯಲ್ಲಿ ಒಂದು ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಯೋಜಿಸುತ್ತಿದೆ.

ಕೃಷಿ ಜಮೀನು ಭೂಸ್ವಾಧೀನ: ಅಕಾರಿಗಳು ಕೈಗಾರಿಕೆಗಳ ಬಳಕೆಗೆ ಜಮೀನು ಭೂಸ್ವಾೀನ ಮಾಡುವ ಸಂದರ್ಭದಲ್ಲಿ ಅಪ್ಪಿ ತಪ್ಪಿಯೂ ರೈತರು ಬಳಕೆ ಮಾಡುವ ಕೃಷಿ ಜಮೀನನ್ನು ಭೂ ಸ್ವಾಧೀನ ಮಾಡದಂತೆ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಕೃಷಿಗೆ ಬಳಕೆ ಮಾಡದ, ಹಾಗೂ ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದೆ ಬಂದರೆ ಮಾತ್ರ ಸ್ವಾೀನ. ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಲವಂತದ ಭೂ ಸ್ವಾೀನ ಮಾಡಿಕೊಳ್ಳದಂತೆ ಸಂಬಂಧ ಪಟ್ಟವರಿಗೆ ಸೂಚಿಸಿದ್ದಾರೆ.