Tuesday, 7th December 2021

ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ನಿವಾಸ ಸರ್ಕಾರದ ಸ್ವತ್ತಲ್ಲ: ಮದ್ರಾಸ್​ ಹೈಕೋರ್ಟ್

Madras High Court

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಪೋಯಸ್​ ಗಾರ್ಡನ್​ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಮದ್ರಾಸ್​ ಹೈಕೋರ್ಟ್ ಬುಧವಾರ ರದ್ದು ಗೊಳಿಸಿದೆ.

ಈ ಮೂಲಕ ಜಯಲಲಿತಾ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಿದ್ದ ಎಐಎಡಿಎಂಕೆ ಸರ್ಕಾರದ ಆದೇಶ ವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಸೊಸೆ ಹಾಗೂ ಸೋದರಳಿಯ ಜೆ.ದೀಪಾ ಹಾಗೂ ಜೆ.ದೀಪಕ್​​ ಅವರಿಗೆ ಮುನ್ನಡೆ ಸಿಕ್ಕಂತಾಗಿದೆ.

ಜಯಲಲಿತಾ ಮರಣದ ಬಳಿಕ 2017ರ ಆಗಸ್ಟ್​ 17ರಂದು ಅಂದಿನ ತಮಿಳುನಾಡು ಸಿಎಂ ಇ.ಪಳನಿಸ್ವಾಮಿ ಅಮ್ಮನ ಸಾಧನೆಯನ್ನು ತಮಿಳುನಾಡು ಜನತೆಯ ಎದುರು ತೆರೆದಿಡುವ ಸಲುವಾಗಿ ಜಯಲಲಿತಾ ನಿವಾಸ ವನ್ನು ಸ್ಮಾರಕವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು.

ಕಳೆದ ವರ್ಷ ಜುಲೈ ತಿಂಗಳಲ್ಲಿ ತಮಿಳುನಾಡು ಸರ್ಕಾರ 0.55 ಎಕರೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರ ನ್ಯಾಯಾಲಯದಲ್ಲಿ 67.9 ಕೋಟಿ ರೂಪಾಯಿ ಠೇವಣಿ ಹೂಡಿತ್ತು. ಆದರೆ ಕಾನೂನಿನ ಪ್ರಕಾರ ಈ ಮನೆಯ ವಾರಸುಧಾರರಾದ ದೀಪಕ್​ ಹಾಗೂ ದೀಪಾ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದರು.