ಚಿಂತಾಮಣಿ: ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಅಂಬಾನಿ ಫೈನಾನ್ಸ್ ಮತ್ತು ಅಂಬಾನಿ ಚಿಟ್ ಫಂಡ್ಸ್ ವ್ಯವಸ್ಥಾ ಪಕ ಅಂಬಾನಿ ಮಂಜುನಾಥ್ ಅವರ ಕುಟುಂಬ ಹಲವು ವರ್ಷಗಳಿಂದ ಸಮಾಜ ಸೇವೆ, ದಾನ ಧರ್ಮದ ದೇವತಾ ಕಾರ್ಯಗಳನ್ನು ಮಾಡುತ್ತಿದ್ದು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ.
ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿರುವ ಸಮುದಾಯ ಭವನದಲ್ಲಿ ಅಯ್ಯಪ್ಪ ಸ್ವಾಮಿ ಭಜನೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮವನ್ನು ಅಂಬಾನಿ ಫೈನಾನ್ಸ್ ಅಂಬಾನಿ ಚಿಟ್ ಫಂಡ್ಸ್ ವ್ಯವಸ್ಥಾಪಕರಾದ ಅಂಬಾನಿ ಮಂಜುನಾಥ್ ಇವರ ವತಿಯಿಂದ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗಳು ಭಾಗವಹಿಸಿ ಅಂಬಾನಿ ಮಂಜುನಾಥ್ ಅವರ ಉಸ್ತುವಾರಿಯಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪೂಜೆಯ ನಂತರ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನ್ನದಾನ ಕಾರ್ಯಕ್ರಮವು ಸಹ ಆಯೋಜಿಸಲಾಗಿದ್ದು, ಸ್ವಾಮಿಯೇ ಶರಣಂ ಅಯ್ಯಪ್ಪ”ಎಂಬ ಘೋಷಣೆಯೊಂದಿಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪೂಜೆಗಳು ಸಲ್ಲಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬಾನಿ ಮಂಜುನಾಥ್ ಚಿಂತಾಮಣಿಯೂ ಸೇರಿದಂತೆ ದೇಶದಲ್ಲಿ ಉತ್ತಮ ಮಳೆ,ಬೆಳೆಯಾಗಿ ಜನತೆ ಸದಾ ಸಮೃದ್ಧಿಯಾಗಿರಲಿ ಎಂದು ಪ್ರತಿವರ್ಷ ವಿಶೇಷ ಪೂಜೆ ಮಾಡುತ್ತಿದ್ದೇವೆ,ಅದರಂತೆ ಈ ವರ್ಷವೂ ಈ ದೇವತಾ ಕಾರ್ಯ ಮುಂದುವರಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಬಾನಿ ಮಂಜುನಾಥ್ ಅವರ ಧರ್ಮಪತ್ನಿ ಗಾಯತ್ರಿ,ಗೌತಮಿ,ಊಲವಾಡಿ ಗ್ರಾಮ ಪಂಚಾ ಯತಿ ಸದಸ್ಯರಾದ ಸೀನಪ್ಪ, ಹಾಗೂ ಅಂಬಾನಿ ಮಂಜುನಾಥ್ ರವರ ಮಕ್ಕಳು ಭಾಗವಹಿಸಿದ್ದರು.
ಇದನ್ನೂ ಓದಿ: Sabarimala Temple : ಅಯ್ಯಪ್ಪ ಭಕ್ತರೇ ಗಮನಿಸಿ; ವಿಮಾನ ಪ್ರಯಾಣದಲ್ಲಿ ಕ್ಯಾಬಿನ್‌ನಲ್ಲಿಯೇ ‘ಇರುಮುಡಿ’ ಇಟ್ಟುಕೊಳ್ಳಲು ಅವಕಾಶ