ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ʻಇಂಗ್ಲೆಂಡ್‌ ನಾಯಕತ್ವದಿಂದ ಜೋಸ್‌ ಬಟ್ಲರ್‌ರನ್ನು ಕೆಳಗಿಳಿಸಿʼ: ದಿಗ್ಗಜರಿಂದ ಆಗ್ರಹ!

ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲುವ ಮೂಲಕ ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ತಂಡದ ಜೋಸ್‌ ಬಟ್ಲರ್‌ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್‌ ತಂಡದ ನಾಯಕತ್ವವನ್ನು ಬದಲಾಯಿಸಬೇಕೆಂದು ಮೈಕಲ್‌ ಅಥರ್ಟನ್‌ ಮತ್ತು ನಾಸರ್‌ ಹುಸೇನ್‌ ಆಗ್ರಹಿಸಿದ್ದಾರೆ.

ಜೋಸ್‌ ಬಟ್ಲರ್‌ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದ ದಿಗ್ಗಜರು!

ಜೋಸ್‌ ಬಟ್ಲರ್‌ ನಾಯಕತ್ವದ ಬಗ್ಗೆ ಟೀಕೆ.

Profile Ramesh Kote Feb 27, 2025 5:11 PM

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ತನ್ನ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ದಿಗ್ಗಜರಾದ ಮೈಕಲ್‌ ಅಥರ್ಟನ್‌ ಮತ್ತು ನಾಸರ್‌ ಹುಸೇನ್‌, ಇಂಗ್ಲೆಂಡ್‌ ತಂಡದ ನಾಯಕತ್ವವನ್ನು ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ. ಇದು ಇಂಗ್ಲೆಂಡ್‌ ತಂಡಕ್ಕೆ ಹಾಗೂ ಜೋಸ್‌ ಬಟ್ಲರ್‌ ಅವರ ಪಾಲಿಗೆ ಒಳ್ಳೆಯದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಅಫಘಾನಿಸ್ತಾನ ತಂಡ, ಇಬ್ರಾಹಿ ಝದ್ರಾನ್‌ (177 ರನ್‌ಗಳು) ಅವರ ಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 325 ರನ್‌ಗಳನ್ನು ಕಲೆ ಹಾಕಿತ್ತು. ಕಠಿಣ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ ಕೂಡ ಕಠಿಣ ಹೋರಾಟ ನಡೆಸಿತ್ತು. ಆ ಮೂಲಕ ಇಂಗ್ಲೆಂಡ್‌ ತಂಡ 49.5 ಓವರ್‌ಗಳಿಗೆ 317 ರನ್‌ಗಳಿಗೆ ಸೀಮಿತವಾಗಿತ್ತು. ಆ ಮೂಲಕ ಕೇವಲ 8 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ಇದರೊಂದಿಗೆ ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿತು.

ಅಫ್ಘಾನಿಸ್ತಾನ ವಿರುದ್ಧ ಸೋಲಿನ ಬಳಿಕ ಇಂಗ್ಲೆಂಡ್‌ ತಂಖಡ ಹಾಗೂ ಜೋಸ್‌ ಬಟ್ಲರ್‌ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತಿವೆ. ಸ್ಕೈಸ್ಪೋರ್ಟ್ಸ್‌ ಜೊತೆ ಮಾತನಾಡಿದ ಇಂಗ್ಲೆಂಡ್‌ ಮಾಜಿ ನಾಯಕರಾದ ಮೈಕಲ್‌ ಅಥರ್ಟನ್‌ ಮತ್ತು ನಾಸರ್‌ ಹುಸೇನ್‌, ನಾಯಕತ್ವದಿಂದ ಜೋಸ್‌ ಬಟ್ಲರ್‌ ಅವರನ್ನು ಕೆಳಗಿಳಿಸುವುದು ಉತ್ತಮ ನಿರ್ಧಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ENG vs AFG: ಅಫ್ಘಾನಿಸ್ತಾನದ ಬ್ಯಾಟಿಂಗ್‌ ಅಬ್ಬರದ ಎದುರು ಸೋತು ಶರಣಾದ ಇಂಗ್ಲೆಂಡ್‌

ನಾಯಕನಾಗಿ ಜೋಸ್‌ ಬಟ್ಲರ್‌ ಸಮಯ ಮುಕ್ತಾಯವಾಗಿದೆ: ಮೈಕಲ್‌ ಅಥರ್ಟನ್‌

"ನಾಯಕನಾಗಿ ಜೋಸ್‌ ಬಟ್ಲರ್‌ ಅವರ ಸಮಯ ಮುಗಿದಿದೆ. ನನಗೆ ಅನಿಸಿದ ಹಾಗೆ ಇದು ಸರಿಯಾದ ನಿರ್ಧಾರವಾಗಿದೆ. ಐಸಿಸಿ ಟೂರ್ನಿಗಳಲ್ಲಿ ಪ್ರದರ್ಶನವನ್ನು ಇಂಗ್ಲೆಂಡ್‌ ತಂಡ ಒಮ್ಮೆ ಅವಲೋಕನ ಮಾಡಿಕೊಳ್ಳಬೇಕಾಗಿದೆ. ಈ ವಿಷಯದಲ್ಲಿ ಇಂಗ್ಲೆಂಡ್‌ ತಂಡ ಸ್ಪಷ್ಟತೆಯಿಂದ ಇರಬೇಕಾದ ಅಗತ್ಯವಿದೆ. ಏಕೆಂದರೆ ಮುಂದಿನ ಐಸಿಸಿ ಟೂರ್ನಿಗಳಿಗೆ ನೀವು ಅತ್ಯುತ್ತಮ ತಂಡವನ್ನಯ ಕಟ್ಟಬೇಕಾಗುತ್ತದೆ," ಎಂದು ಮೈಕಲ್‌ ಅಥರ್ಟನ್‌ ಸ್ಕೈಟ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

"ನಿಮ್ಮ ನಾಯಕತ್ವದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳುಬವ ಸಮಯ ಬಂದಾಗಿದೆ. ಇದೀಗ ಇಂಗ್ಲೆಂಡ್‌ ತಂಡದ ನಾಯಕತ್ವವನ್ನು ಬೇರೆ ಆಟಗಾರರಿಗೆ ನೀಡುವ ಸಮಯ ಬಂದಾಗಿದೆ," ಎಂದು ಮಾಜಿ ಆಟಗಾಋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ENG vs AFG: ಜೋ ರೂಟ್‌ಗೆ 24 ರನ್‌, ಜೋಫ್ರಾ ಆರ್ಚರ್‌ಗೆ 20 ರನ್‌ ಬಾರಿಸಿದ ಆಫ್ಘನ್‌ ಬ್ಯಾಟರ್ಸ್‌!

ಜೋಸ್‌ ಬಟ್ಲರ್‌ ಅದ್ಭುತ ನಾಯಕನಲ್ಲ: ನಾಸರ್‌ ಹುಸೇನ್‌

"ಜೋಸ್‌ ಬಟ್ಲರ್‌ ಅದ್ಭುತ ನಾಯಕ ಎಂದು ನಾನು ಎಂದಿಗೂ ನೋಡಿಲ್ಲ. ಐಯಾನ್‌ ಮಾರ್ಗನ್‌ ಅವರ ರೀತಿ ಮೈದಾನದಲ್ಲಿ ಉಪಸ್ಥಿತಿಯನ್ನು ಬಟ್ಕರ್‌ ಹೊಂದಿಲ್ಲ. ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸಾಕಷ್ಟು ಮಂದಿ ಮುನ್ನಡೆಸಿದ್ದಾರೆ. ಆದರೆ, ಅವರನ್ನು ಹಿಂಬಾಲಿಸುವಲ್ಲಿ ಜೋಸ್‌ ಬಟ್ಲರ್‌ ಎಡವಿದ್ದಾರೆ," ಎಂದು ಮಾಜಿ ನಾಯಕ ನಾಸರ್‌ ಹುಸೇನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಜೋಸ್‌ ಬಟ್ಕರ್‌ ನಾಯಕನಾಗಿ ಇಂಗ್ಲೆಂಡ್‌ ತಂಡದಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ ಹಾಗೂ ಅವರು ತಮ್ಮ ನಾಯಕತ್ವದಲ್ಲಿ ವೈಯಕ್ತಿಕ ಪ್ರದರ್ಶನ ತೋರುವಲ್ಲಿಯೂ ವಿಫಲರಾಗಿದ್ದಾರೆ. ಹಾಗಾಗಿ, ಜೋಸ್‌ ಬಟ್ಲರ್‌ ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ನಾಯಕನನ್ನಾಗಿ ನೇಮಿಸುವುದು ಒಳ್ಳೆಯ ನಿರ್ಧಾರವಾಗಲಿದೆ," ಎಂದು ಮಾಜಿ ನಾಯಕ ತಿಳಿಸಿದ್ದಾರೆ.