Dinesh Karthik: ಎಸ್‌ಎ 20ಯಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಕಾರ್ತಿಕ್
2024ರ ಐಪಿಎಲ್ ಸೀಸನ್ ಬಳಿಕ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದರು. ಸದ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕವಾಗಿದ್ದಾರೆ.

Dinesh Karthik

ಜೊಹಾನ್ಸ್‌ಬರ್ಗ್: ಭಾರತ ತಂಡದ ಹಾಗೂ ಆರ್‌ಸಿಬಿಯ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್(Dinesh Karthik) ಅವರು SA20 ಟೂರ್ನಿಯಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಗುರುವಾರ ರಾತ್ರಿ ನಡೆದ ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಪರ ಕಣಕ್ಕಿಳಿದ ಕಾರ್ತಿಕ್ 39 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿದರು.
ವಾಂಡರರ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾರ್ಲ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಜೋಬರ್ಗ್ ಸೂಪರ್ ಕಿಂಗ್ಸ್ ಫಾಫ್ ಡು ಪ್ಲೆಸಿಸ್(87) ಬ್ಯಾಟಿಂಗ್ ನೆರವಿನಿಂದ 17.5 ಓವರ್‌ಗಳಲ್ಲಿ 3 ವಿಕೆಟ್‌ಗೆ 151 ರನ್ ಬಾರಿಸಿ ಗೆಲುವು ಸಾಧಿಸಿತು. ಜೋಬರ್ಗ್ ಸೂಪರ್ ಕಿಂಗ್ಸ್ ಪರ ಡೊನೊವನ್ ಫೆರೆರಾ ಮತ್ತು ಸಿಪಾಮ್ಲಾ ತಲಾ 3 ವಿಕೆಟ್ ಕಿತ್ತರು. ಪಂದ್ಯ ಸೋತ ಕಾರಣ ದಿನೇಶ್ ಕಾರ್ತಿಕ್ ಅರ್ಧಶತಕ ವ್ಯರ್ಥವಾಯಿತು.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನ ಸಮಾರಂಭ ರದ್ದು
2024ರ ಐಪಿಎಲ್ ಸೀಸನ್ ಬಳಿಕ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದರು. ಸದ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕವಾಗಿದ್ದಾರೆ.
Dinesh Karthik goes boom 💥#BetwaySA20 #JSKvPR #WelcomeToIncredible | @DineshKarthik pic.twitter.com/OrdBdo4pp2
— Betway SA20 (@SA20_League) January 30, 2025
MI ಕೇಪ್ ಟೌನ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ದಯಾನ್ ಗಲಿಯಂ ಬೌಲಿಂಗ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಅವರ ಕ್ಯಾಚ್ ಅನ್ನು ಒಂದೇ ಕೈಯಿಂದ ಹಿಡಿದಿದ್ದರು. ಈ ಕ್ಯಾಚ್ ಕಂಡು ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಒಂದು ಕ್ಷಣ ದಂದಾಗದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ಮೆಚ್ಚುಗೆ ಸೂಚಿಸಿದ್ದರು.