ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

AFG vs ENG: ಆಫ್ಘಾನ್‌ ಅಭೂತಪೂರ್ವ ಗೆಲುವಿಗೆ ಸಚಿನ್‌ ಮೆಚ್ಚುಗೆ

ಗಡಾಫಿ ಮೈದಾನದಲ್ಲಿ ಬುಧವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಅಫಘಾನಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ 7 ವಿಕೆಟ್‌ಗೆ 325 ರನ್‌ ಪೇರಿಸಿತು. ಪ್ರತಿಯಾಗಿ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ಸರ್ಪಪತನ ಕಂಡಿತು. ಚೇಸಿಂಗ್‌ ವೇಳೆ ಜೋ ರೂಟ್‌ ಶತಕ ಬಾರಿಸಿ ಮಿಂಚಿದರೂ ಪಂದ್ಯ ಸೋತ ಕಾರಣ ಅವರ ಶತಕ ವ್ಯರ್ಥವಾಯಿತು.

ಆಫ್ಘಾನ್‌ ಅಭೂತಪೂರ್ವ ಗೆಲುವಿಗೆ ಸಚಿನ್‌ ಮೆಚ್ಚುಗೆ

Profile Abhilash BC Feb 27, 2025 10:49 AM

ಮುಂಬಯಿ: ಬುಧವಾರ ರಾತ್ರಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯ(champions trophy) ಅತ್ಯಂತ ರೋಚಕ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಇಂಗ್ಲೆಂಡ್‌(Afghanistan vs England) ವಿರುದ್ಧ 8 ರನ್‌ಗಳ ಗೆಲುವು ಸಾಧಿಸಿ ಸೆಮೀಸ್‌ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಸೋತ ಇಂಗ್ಲೆಂಡ್‌ ಲೀಗ್‌ ಹಂತದಲ್ಲೇ ಹೊರಬಿದ್ದಿತು. ಆಫ್ಘಾನ್‌ನ ಅಭೂತಪೂರ್ವ ಗೆಲುವಿಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌(Sachin Tendulkar) ಸೇರಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ ಮೂಲಕ ಮೆಚ್ಚುಗೆ ಸೂಚಿಸಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ಸ್ಥಿರ ಮತ್ತು ಕ್ಷಿಪ್ರ ಪ್ರಗತಿ ನಿಜ್ಜೂ ಸ್ಪೂರ್ತಿದಾಯಕವಾಗಿದೆ!. ಇನ್ನು ಮುಂದೆ ಆಫ್ಘಾನ್‌ ಗೆಲುವುಗಳನ್ನು ಐತಿಹಾಸಿಕ ಗೆಲುವೆಂದು ಕರೆಯಬೇಕಿಲ್ಲ. ಏಕೆಂದರೆ ಅವರು ಈಗ ವಿಶ್ವದ ಬಲಿಷ್ಠ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೆಲುವನ್ನು ಅವರು ಕೂಡ ಕರಗತ ಮಾಡಿಕೊಂಡಿದ್ದಾರೆ. ನಿಮ್ಮ ಈ ಗೆಲುವು ಮತ್ತು ಅದ್ಭುತ ಪ್ರದರ್ಶನ ಹೀಗೆ ಮುಂದುವರಿಯಲಿ. ಶತಕ ವೀರ ಇಬ್ರಾಹಿಂ ಜದ್ರಾನ್‌ ಮತ್ತು 5 ವಿಕೆಟ್‌ ಕಿತ್ತ ಒಮರ್ಜಾಯಿಗೆ ಅಭಿನಂದನೆಗಳು' ಎಂದು ಸಚಿನ್‌ ಬರೆದುಕೊಂಡಿದ್ದಾರೆ.



ಗಡಾಫಿ ಮೈದಾನದಲ್ಲಿ ಬುಧವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಅಫಘಾನಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ 7 ವಿಕೆಟ್‌ಗೆ 325 ರನ್‌ ಪೇರಿಸಿತು. ಪ್ರತಿಯಾಗಿ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ಸರ್ಪಪತನ ಕಂಡಿತು. ಚೇಸಿಂಗ್‌ ವೇಳೆ ಜೋ ರೂಟ್‌ ಶತಕ ಬಾರಿಸಿ ಮಿಂಚಿದರೂ ಪಂದ್ಯ ಸೋತ ಕಾರಣ ಅವರ ಶತಕ ವ್ಯರ್ಥವಾಯಿತು.

146 ಎಸೆತ ಎದುರಿಸಿದ ಅವರು 177 ರನ್‌ ಗಳಿಸಿ ಔಟಾದರು. 12 ಬೌಂಡರಿ ಮತ್ತು 6 ಸಿಕ್ಸರ್‌ ಸಿಡಿಸಿ ರಂಜಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ನಬಿ 24 ಎಸೆತಗಳಿಂದ 40 ರನ್‌ ಗಳಿಸಿದರು. ಒಮರ್‌ಜಾಯ್‌ 31 ಎಸೆತಗಳಿಂದ 41 ರನ್‌ ಹೊಡೆದರು. ಇಂಗ್ಲೆಂಡ್‌ ಪರ ಜೋ ರೂಟ್ 111 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ 120 ರನ್​ಗಳಿಸಿದರು.

ಇದನ್ನೂ ಓದಿ ENG vs AFG: ಅಫ್ಘಾನಿಸ್ತಾನದ ಬ್ಯಾಟಿಂಗ್‌ ಅಬ್ಬರದ ಎದುರು ಸೋತು ಶರಣಾದ ಇಂಗ್ಲೆಂಡ್‌

ಸಂಕ್ಷಿಪ್ತ ಸ್ಕೋರ್

ಅಫ್ಘಾನಿಸ್ತಾನ: 7 ವಿಕೆಟಿಗೆ 325; (ಇಬ್ರಾಹಿಂ ಜದ್ರಾನ್‌ 177, ಹಶ್ಮತುಲ್ಲ ಶಾಹಿದಿ 40, ಅಜ್ಮತುಲ್ಲ ಒಮರ್‌ಜಾಯ್‌ 41, ಮೊಹಮ್ಮದ್‌ ನಬಿ 40,‌ ಆರ್ಚರ್‌ 64ಕ್ಕೆ 3 ವಿಕೆಟ್‌, ಲಿಯಮ್‌ ಲಿವಿಂಗ್‌ಸ್ಟೋನ್‌ 28ಕ್ಕೆ 2). ಇಂಗ್ಲೆಂಡ್‌: 317ಕ್ಕೆ ಆಲೌಟ್‌ (49.5 ಓವರ್‌) (ಜೋ ರೂಟ್‌ 120, ಜೋಸ್‌ ಬಟ್ಲರ್‌ 38, ಅಜ್ಮತುಲ್ಲ ಒಮರ್‌ಜಾಯ್‌ 58ಕ್ಕೆ 5ವಿಕೆಟ್‌, ಮೊಹಮ್ಮದ್‌ ನಬಿ 57ಕ್ಕೆ 2 ಪಂದ್ಯಶ್ರೇಷ್ಠ: ಇಬ್ರಾಹಿಂ ಜದ್ರಾನ್‌.