ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IND vs NZ: ಕಿವೀಸ್‌ ಎದುರು ರೋಹಿತ್‌ ಶರ್ಮಾ ಆಡಿಲ್ಲವಾದರೆ, ಇನಿಂಗ್ಸ್‌ ಆರಂಭಿಸುವುದು ಯಾರು?

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಆದರೆ ಈಗ ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ನೆಟ್ ಸೆಷನ್‌ನಲ್ಲಿ ಭಾಗವಹಿಸಿಲ್ಲ. ರೋಹಿತ್ ಶರ್ಮಾ ಗಾಯಗೊಂಡಿದ್ದು, ನ್ಯೂಜಿಲೆಂಡ್ ವಿರುದ್ಧ ಆಡದೇ ಇರಬಹುದು ಎಂಬ ಊಹಾಪೋಹಗಳಿವೆ.

ರೋಹಿತ್‌ ಶರ್ಮಾ ವಿಶ್ರಾಂತಿ ಪಡೆದರೆ ಕನ್ನಡಿಗ ಕೆಎಲ್‌ ರಾಹುಲ್‌ಗೆ ಅದೃಷ್ಟ!

ರೋಹಿತ್‌ ಶರ್ಮಾ

Profile Ramesh Kote Feb 27, 2025 9:37 PM

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ರೋಹಿತ್‌ ಶರ್ಮಾ ಪಡೆ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಜಯಗಳಿಸಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮತ್ತು ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಇದರೊಂದಿಗೆ ಭಾರತ ತಂಡ ಇದೀಗ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.

ಆದರೆ, ಇದಕ್ಕೂ ಮುನ್ ಟೀಮ್‌ ಇಂಡಿಯಾ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಒಂದು ಕಳವಳಕಾರಿ ವಿಷಯ ಹೊರಹೊಮ್ಮಿದೆ. ಬುಧವಾರ ಕಿವೀಸ್ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನೆಟ್ ಸೆಷನ್‌ನಲ್ಲಿ ಭಾಗವಹಿಸಲಿಲ್ಲ ಎಂಬುದು ವರದಿಯಾಗಿದೆ.

ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಅವರು (ರೋಹಿತ್‌ ಶರ್ಮಾ) ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಆದರೆ ಪಂದ್ಯದ ನಂತರ ಮಾತನಾಡಿದ್ದ ರೋಹಿತ್‌, ತಾನು ಚೆನ್ನಾಗಿದ್ದೇನೆ ಮತ್ತು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದರು. ಆದರೆ ರೋಹಿತ್‌ ಶರ್ಮಾ ಗುರುವಾರ ನೆಟ್ಸ್‌ನಲ್ಲಿ ಕಾಣಿಸಿಕೊಂಡಿಲ್ಲವೆಂಬುದು ಟೀಮ್‌ ಇಂಡಿಯಾ ಪಾಲಿಗೆ ಒಳ್ಳೆಯ ಸೂಚನೆಯಲ್ಲ.

IND vs NZ: ಕಿವೀಸ್‌ ಪಂದ್ಯಕ್ಕೆ ರೋಹಿತ್‌, ಶಮಿಗೆ ರೆಸ್ಟ್‌; ರಾಹುಲ್‌ ಆರಂಭಿಕ!

ಇದೀಗ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ. ಒಂದು ವೇಳೆ ಅವರು ಆಡದಿದ್ದರೆ ಅವರ ಸ್ಥಾನದಲ್ಲಿ ಯಾರು ಇನಿಂಗ್ಸ್‌ ಆರಂಭಿಸಲಿದ್ದಾರೆ? ಅಂದ ಹಾಗೆ ರೋಹಿತ್ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಅವರೊಂದಿಗೆ ಓಪನಿಂಗ್‌ ಮಾಡಬಲ್ಲ ಇಬ್ಬರು ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ.

ರೋಹಿತ್‌ ಶರ್ಮಾ ಸ್ಥಾನದಲ್ಲಿ ಇನಿಂಗ್ಸ್‌ ಆರಂಭಿಸುವವರು ಯಾರು?

ಭಾನುವಾರದ ವೇಳೆಗೆ ರೋಹಿತ್ ಶರ್ಮಾ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ ಮತ್ತು ನ್ಯೂಜಿಲೆಂಡ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡದಿದ್ದರೆ, ಅವರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅಥವಾ ಕೆಎಲ್ ರಾಹುಲ್ ಆರಂಭಿಕರಾಗಿ ಆಡಬಹುದು. ಕೆಎಲ್ ರಾಹುಲ್‌ಗೆ ಹೆಚ್ಚಿನ ಅವಕಾಶಗಳಿವೆ ಎಂದು ತೋರುತ್ತದೆ. ಏಕೆಂದರೆ ರಾಹುಲ್ ಏಕದಿನ ಪಂದ್ಯಗಳಲ್ಲಿ ಹಲವು ಬಾರಿ ಭಾರತ ಪರ ಇನಿಂಗ್ಸ್‌ ಆರಂಭಿಸಿದ ಅನುಭವ ಇದೆ.

IND vs NZ: ರೋಹಿತ್‌ ಶರ್ಮಾ ಔಟ್‌? ಕಿವೀಸ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ನಿರೀಕ್ಷೆ!

ಕೊಹ್ಲಿ ಮತ್ತು ರಾಹುಲ್‌ರ ಆರಂಭಿಕ ಸ್ಥಾನದ ಅಂಕಿಅಂಶಗಳು

ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ ಇದುವರೆಗೆ 7 ಬಾರಿ ಇನಿಂಗ್ಸ್‌ ಆರಂಭಿಸಿದ್ದು, 166 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಒಂದು ಅರ್ಧಶತಕವೂ ದಾಖಲಾಗಿತ್ತು. ಕೆಎಲ್ ರಾಹುಲ್ ಆರಂಭಿಕನಾಗಿ 23 ಏಕದಿನ ಪಂದ್ಯಗಳನ್ನು ಆಡಿದ್ದು, 3 ಶತಕ ಮತ್ತು 6 ಅರ್ಧಶತಕಗಳೊಂದಿಗೆ 915 ರನ್ ಗಳಿಸಿದ್ದಾರೆ.