ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿ ಇದೀಗ ಮುಕ್ತಾಯದ ಹಂತದಲ್ಲಿರುವಂತೆ ಗೋಚರಿಸುತ್ತಿದೆ. ಇದಕ್ಕೆ ಕಾರಣ ಧಾರಾವಾಹಿ ಪಡೆದುಕೊಳ್ಳುತ್ತಿರುವ ವೇಗ ಹಾಗೂ ಕಥೆಯಲ್ಲಿ ದೊಡ್ಡ ತಿರುವು ಪಡೆದುಕೊಂಡಿರುವುದು.
ಸದ್ಯ ಲಕ್ಷ್ಮೀಯನ್ನು ಕೊಲೆ ಮಾಡಲು ಯತ್ನಿಸಿ ಕಾವೇರಿ ಈಗ ಜೈಲಿಗೆ ಹೋಗಿದ್ದಾಳೆ. ಕೋರ್ಟ್ನಲ್ಲಿ ಕಾವೇರಿ ವಿರುದ್ಧ ವೈಷ್ಣವ್ ತಿರುಗಿಬಿದ್ದಿದ್ದಾನೆ. ಅಮ್ಮನ ವಿರುದ್ಧ ಕೆಂಡಾಮಂಡಲನಾಗಿ ಕೂಗಾಡುತ್ತಿದ್ದಾನೆ. ಕೋರ್ಟ್ನಿಂದ ನೇರವಾಗಿ ಮನೆಗೆ ಬಂದ ವೈಷ್ಣವ್ಗೆ ನೆಮ್ಮದಿಯೇ ಇಲ್ಲ. ಇಷ್ಟು ದಿನ ನಾನು ನಂಬಿದ್ದ ನನ್ನ ತಾಯಿಯೇ ಕೊಲೆಗಾರ್ತಿ ಎಂದು ಅವನಿಗೆ ತುಂಬಾ ನೋವಾಗುತ್ತಿದೆ.
ತನ್ನ ಮನೆಯಲ್ಲಿ ಅಮ್ಮನ ನೆನಪು ಕೂಡ ಇರಬಾರದು ಎಂಬ ತೀರ್ಮಾನಕ್ಕೆ ವೈಷ್ಣವ್ ಬಂದಿದ್ದಾರೆ. ಇದಕ್ಕಾಗಿ ತನ್ನ ಕೋಣೆಯಲ್ಲೇ ವೈಷ್ಣವ್ ಅಮ್ಮನ ಸೀರೆ ಒಂದಷ್ಟು ಮೆಡಲ್ ಎಲ್ಲವನ್ನೂ ತಂದು ಸುಟ್ಟು ಹಾಕಿದ್ದಾನೆ. ಇದನ್ನು ನೋಡಿ ಅಜ್ಜಿ, ವಿಧಿ ಎಲ್ಲರೂ ಕೊರಗುತ್ತಾರೆ. ಅದೆಲ್ಲವೂ ಸುಟ್ಟು ಭಸ್ಮವಾಗುವವರೆಗೂ ಅವನು ಮಾತ್ರ ಅಲ್ಲೇ ಕುಳಿತುಕೊಂಡಿರುತ್ತಾನೆ.
ಅತ್ತ ಲಕ್ಷ್ಮೀ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಗಂಡನ ವರ್ತನೆ, ಅವನ ಬೇಸರ ನೋಡಿ ಅವಳಿಗೂ ಅಳು ಬರುತ್ತಿದೆ. ಇನ್ನು ಮನೆಯವರೆಲ್ಲ ವೈಷ್ಣವ್ ಕಷ್ಟವನ್ನು ನೋಡಲಾಗದೇ ಬೇಸರ ಮಾಡಿಕೊಂಡಿದ್ದಾರೆ. ಸಾಕಷ್ಟು ನೋವುಂಡಿರುವ ವೈಷ್ಣವ್, ಲಕ್ಷ್ಮೀ ಹತ್ತಿರ ನಾನು ನಿಮ್ಮ ಮಡಿಲಲ್ಲಿ ಮಲಗಿಕೊಳ್ಳಲಾ? ಎಂದು ಪ್ರಶ್ನೆ ಮಾಡುತ್ತಾನೆ. ನಂತರ ಅವಳು ಒಪ್ಪಿಗೆ ಕೊಟ್ಟಮೇಲೆ ಅವಳ ಕಾಲಮೇಲೆ ಮಲಗುತ್ತಾನೆ.
ಸದ್ಯ ರಾಕೆಟ್ ಸ್ಪೀಡ್ನಲ್ಲಿ ಕಥೆ ಸಾಗುತ್ತಿರುವ ಕಾರಣ ಮತ್ತು ಇಷ್ಟು ಬೇಗ ಸತ್ಯಗಳು ಹೊರ ಬರ್ತಿರೋದನ್ನು ನೋಡಿ ಸೀರಿಯಲ್ ಮುಕ್ತಾಯದ ಹಂತ ತಲುಪಿದೆ ಎಂಬ ಚರ್ಚೆಗಳು ಉದ್ಭವವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ನೂರು ಜನ್ಮಕ್ಕೂ.. ಸದ್ಯದಲ್ಲೇ ಶುರುವಾಗಲಿದೆ. ಲಕ್ಷ್ಮೀ ಬಾರಮ್ಮ ಮುಗಿದ ಬಳಿಕ ಇದು ಶುರುವಾಗಲಿದೆ ಎಂಬ ಟಾಕ್ ಕೂಡ ಇದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ನಿಜಕ್ಕೂ ಮುಗಿಯುತ್ತಾ ಅಥವಾ ಕಥೆಯಲ್ಲಿ ಇನ್ನೊಂದು ಟ್ವಿಸ್ಟ್ ಕೊಡ್ತಾರ ಎಂಬುದು ನೋಡಬೇಕಿದೆ.
BBK 11: ಬಿಗ್ ಬಾಸ್ನಲ್ಲಿ ಡಬಲ್ ಎಲಿಮಿನೇಷನ್?: ಕುತೂಹಲ ಕೆರಳಿಸಿದ ವಾರದ ಕತೆ ಎಪಿಸೋಡ್