ಮುಂಬೈ: ಮುಂಬೈ(Mumbai) ಮತ್ತು ಅಹಮದಾಬಾದ್‌ನಲ್ಲಿ(Ahmedabad) ಕೋಲ್ಡ್‌ಪ್ಲೇಯ(Cold Play) ಪ್ರದರ್ಶನಗಳಂತಹ ಇತ್ತೀಚೆಗಿನ ಉನ್ನತ ಮಟ್ಟದ ಸಂಗೀತ ಕಛೇರಿಗಳ ಯಶಸ್ಸನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಭಾರತದ ಕನ್ಸರ್ಟ್(Concert) ಆರ್ಥಿಕತೆಯ ಸಾಮರ್ಥ್ಯವನ್ನು ತಮ್ಮ ಮಾತಿನ ಮೂಲಕ ಎತ್ತಿ ತೋರಿಸಿದ್ದಾರೆ. ಉತ್ಕರ್ಷ್ ಒಡಿಶಾ – ಮೇಕ್ ಇನ್ ಒಡಿಶಾ ಕಾನ್ಕ್ಲೇವ್ 2025 ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರವಾಸೋದ್ಯಮವನ್ನು ಉತ್ತೇಜಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಭಾರತದ ಸೃಜನಶೀಲ ವಲಯದ ಜಾಗತಿಕ ಗುರುತನ್ನು ಹೆಚ್ಚಿಸಲು ಇಂತಹ ಸಂಗೀತ ಕಛೇರಿಗಳು ಸಹಕರಿಯಾಗುತ್ತವೆ ಎಂದರು.
ಸಂಗೀತ, ನೃತ್ಯ ಮತ್ತು ಕಥೆ ಹೇಳುವಿಕೆಯಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇಶ ನಮ್ಮದು. ಇಷ್ಟು ದೊಡ್ಡ ಯುವ ಸಮೂಹ ಮತ್ತು ಸಂಗೀತ ಕಛೇರಿಗಳಿಗೆ ಇರುವ ಬೇಡಿಕೆಯನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಕನ್ಸರ್ಟ್ ಆರ್ಥಿಕತೆಗೆ ನೂರಾರು ಅವಕಾಶಗಳಿವೆ ಎಂದು ಮೋದಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Amaravati Stadium: ಮೋದಿ ಕ್ರಿಕೆಟ್ ಸ್ಟೇಡಿಯಂ ಮೀರಿಸಲು ಮುಂದಾದ ಆಂಧ್ರ!
ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಕೋಲ್ಡ್‌ಪ್ಲೇ ಸಂಗೀತ ಕಛೇರಿಗಳು ಸಾಧಿಸಿದ ಅದ್ಭುತ ಯಶಸ್ಸಿನ ಬಗ್ಗೆ ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿದೆ. ಲೈವ್ ಕನ್ಸರ್ಟ್‌ಗಳಿಗೆ ಭಾರತದಲ್ಲಿ ಎಷ್ಟು ಬೇಡಿಕೆಯಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.
ಇದು ಭಾರತದಲ್ಲಿ ಟಿಕೇಟ್ ಖರೀದಿಸಿ ನೋಡಿದ ಅತಿ ದೊಡ್ಡ ಸಂಗೀತ ಕಛೇರಿಯಾಗಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಈ ಕಛೇರಿಗಳು ಮುರಿದಿವೆ. 60 ಸಾವಿರಕ್ಕಿಂತ ಹೆಚ್ಚು ಸಂಗೀತ ಪ್ರಿಯರು ಕನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದು ಅಚ್ಚರಿಯ ಸಂಗತಿಯಾಗಿದೆ ಎಂದರು. ಮುಂದಿನ ತಿಂಗಳು ಭಾರತವು ಮೊಟ್ಟಮೊದಲ ವಿಶ್ವ ಆಡಿಯೋ ವಿಷುಯಲ್ ಶೃಂಗಸಭೆ ಅಥವಾ ವೇವ್ಸ್ ಅನ್ನು ಆಯೋಜಿಸುತ್ತದೆ. ಇದು ಭಾರತದ ಸೃಜನಶೀಲ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುವ ಪ್ರಯತ್ನವಾಗಿದೆ. ಇದರಿಂದ ದೇಶದ ಆರ್ಥಿಕತೆ ವೃದ್ಧಿಯಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.