Thursday, 12th December 2024

Pankaj Advani: 28ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಬೆಂಗಳೂರಿನ ಪಂಕಜ್

ದೋಹಾ: ಭಾರತದ ದಿಗ್ಗಜ ಪಂಕಜ್ ಅಡ್ವಾಣಿ(Pankaj Advani) ಅವರು ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ(IBSF World Billiards Championship) ಇಂಗ್ಲೆಂಡ್‌ನ ರಾಬರ್ಟ್ ಹಾಲ್(Robert Hall) ಅವರನ್ನು 4-2 ರಿಂದ ಸೋಲಿಸುವ ಮೂಲಕ ಸತತ 28ನೇ ವಿಶ್ವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಕಜ್​ಗೆ ಬಿಲಿಯರ್ಡ್ಸ್​ನಲ್ಲಿ ಇದು ಒಟ್ಟಾರೆ 20ನೇ ವಿಶ್ವ ಕಿರೀಟವಾಗಿದೆ. ಅವರು ಸ್ನೂಕರ್​ನಲ್ಲೂ 8 ವಿಶ್ವ ಕಿರೀಟ ಗೆದ್ದುಕೊಂಡಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಬೆಂಗಳೂರಿನ ಪಂಕಜ್, ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಗಳ ಗೆಲುವಿನ ಸರಣಿಯಲ್ಲಿರುವುದು ಅದ್ಭುತವಾಗಿದೆ. ಈ ಗೆಲುವು ನನ್ನ ದೇಶ ಮತ್ತು ಕುಟುಂಬಕ್ಕೆ ಎಂದು ಹೇಳಿದರು. ಶನಿವಾರ ದೋಹಾದಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಪಂಕಜ್​ ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಆ ಬಳಿಕ ಮೇಲುಗೈ ಸಾಧಿಸಿ ಮೊದಲಿಗರಾಗಿ 150 ಅಂಕಗಳ ತಲುಪಿದರು. ನಂತರ 2 ಮತ್ತು 3ನೇ ಫ್ರೇಮ್​ನಲ್ಲೂ ಪಂಕಜ್​ ಗೆಲುವು ಸಾಧಿಸಿದರು. ಆದರೆ 4 ಮತ್ತು 5ನೇ ಫ್ರೇಮ್​ನಲ್ಲಿ ಹಾಲ್​ ತಿರುಗೇಟು ನೀಡಿದರು. 6ನೇ ಫ್ರೇಮ್​ನಲ್ಲಿ ಪಂಕಜ್​ ಮತ್ತೆ ಲಯ ಕಂಡುಕೊಂಡು ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಒಟ್ಟಾರೆಯಾಗಿ 151-94, 151-0, 150-84, 74-151, 6-154, 152-46 ಅಂತರದಿಂದ ಪಂಕಜ್​ ಗೆಲುವು ಸಾಧಿಸಿದರು.

ಪಂಕಜ್​ ಗೆದ್ದ ಪ್ರಶಸ್ತಿ ಪಟ್ಟಿ

ವಿಶ್ವ ಬಿಲಿಯರ್ಡ್ಸ್​: 10 (2005, 2008, 2014, 2016, 2017, 2018, 2019, 2022, 2023, 2024)

ವಿಶ್ವ ಬಿಲಿಯರ್ಡ್ಸ್: 9 (2005, 2007, 2008, 2009, 2012, 2014, 2015, 2018, 2023)

ವಿಶ್ವ ತಂಡ ಬಿಲಿಯರ್ಡ್ಸ್​ ಚಾಂಪಿಯನ್​ಶಿಪ್​: 1 (2014)

ವಿಶ್ವ ಸ್ನೂಕರ್​ ಚಾಂಪಿಯನ್​ಶಿಪ್​: 3 (2003, 2015, 2017)

ವಿಶ್ವ 6-ರೆಡ್​ ಸ್ನೂಕರ್​: 3 (2015, 2014, 2021)

ವಿಶ್ವ ಸ್ನೂಕರ್​ ತಂಡ ಚಾಂಪಿಯನ್​ಶಿಪ್​: 2 (2018, 2019)