ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Street Light Facility: ರಾತ್ರಿ ವೇಳೆ ಕಾಡುತ್ತಿದ್ದ ಕತ್ತಲಿಗೆ ದಾನಿಗಳ ನೆರವಿನಿಂದ ಮುಕ್ತಿ

ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯ ಬಲಭಾಗದಲ್ಲಿ ಕೆರೆಕಟ್ಟೆ, ಎಡ ಭಾಗದಲ್ಲಿ ಖಾಲಿಯಾದ ಜನಸಂದಣಿಯಿಲ್ಲದ ಲೇಔಟ್ ಇದೆ. ಇಲ್ಲಿನ ರಸ್ತೆಯಲ್ಲಿ ಬಿಜಿಎಸ್ ಶಾಲೆಗೆ ಹೋಗುವ ವಿದ್ಯಾರ್ಥಿಗಳು ವಾರ್ಡಿನ ನಾಗರೀಕರು ಸಂಚರಿಸುತ್ತಾರೆ. ಆದರೆ ಸದರಿ ರಸ್ತೆಗೆ ಇದುವರೆಗೂ ಬೀದಿ ದೀಪಗಳನ್ನು ನಗರಸಭೆಯವರು ಅಳವಡಿಸದ ಕಾರಣ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಜನರು ಸಂಚರಿಸಲು ಭಯದಿಂದ ಹಿಂದೇಟು ಹಾಕುತ್ತಿದ್ದರು.

ರಾತ್ರಿ ವೇಳೆ ಕಾಡುತ್ತಿದ್ದ ಕತ್ತಲಿಗೆ ದಾನಿಗಳ ನೆರವಿನಿಂದ ಮುಕ್ತಿ

Profile Ashok Nayak Jul 20, 2025 11:23 PM

ಗೌರಿಬಿದನೂರು: ನಗರದ 11 ನೇ ವಾರ್ಡಿನ ಮಹಾವೀರ ಜೈನ ದೇವಾಲಯದಿಂದ ಮಧುಗಿರಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಾತ್ರಿ ವೇಳೆ ಕಾಡುತ್ತಿದ್ದ ಕತ್ತಲಿಗೆ ದಾನಿಗಳ ನೆರವಿನಿಂದ ಮುಕ್ತಿ ಕೊಡಲಾಗಿದೆ ಎಂದು ನಗರಸಭೆ ಸದಸ್ಯೆ ಪುಣ್ಯವತಿ ಜಯಣ್ಣ ತಿಳಿಸಿದ್ದಾರೆ.

ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯ ಬಲಭಾಗದಲ್ಲಿ ಕೆರೆಕಟ್ಟೆ, ಎಡ ಭಾಗದಲ್ಲಿ ಖಾಲಿಯಾದ ಜನಸಂದಣಿಯಿಲ್ಲದ ಲೇಔಟ್ ಇದೆ. ಇಲ್ಲಿನ ರಸ್ತೆಯಲ್ಲಿ ಬಿಜಿಎಸ್ ಶಾಲೆಗೆ ಹೋಗುವ ವಿದ್ಯಾರ್ಥಿಗಳು ವಾರ್ಡಿನ ನಾಗರೀಕರು ಸಂಚರಿಸುತ್ತಾರೆ. ಆದರೆ ಸದರಿ ರಸ್ತೆಗೆ ಇದುವರೆಗೂ ಬೀದಿ ದೀಪಗಳನ್ನು ನಗರಸಭೆಯವರು ಅಳವಡಿಸದ ಕಾರಣ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಜನರು ಸಂಚರಿಸಲು ಭಯದಿಂದ ಹಿಂದೇಟು ಹಾಕುತ್ತಿದ್ದರು.

ಇದನ್ನೂ ಓದಿ: Chikkaballapur News: ಅದ್ಧೂರಿಯಾಗಿ ನಡೆದ ಶ್ರೀಶರಭಯೋಗೀಂದ್ರರ 307ನೇ ಆರಾಧನಾ ಮಹೋತ್ಸವ

ಸದರಿ ರಸ್ತೆಗೆ ಬೀದಿ ದೀಪಗಳನ್ನು ಅಳವಡಿಸು ವಂತೆ ಖುದ್ದು ನಗರಸಭೆ ಸದಸ್ಯೆ ಪುಣ್ಯವತಿ ಜಯಣ್ಣ ಹಾಗೂ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರು, ಇತ್ತೀಚಿಗೆ ನಗರಸಭೆ ಸದರಿ ರಸ್ತೆಗೆ ವಿದ್ಯುತ್ ಕಂಬಗಳನ್ನು ಅಳವಡಿಸಿ ವೈರಿಂಗ್ ಕೂಡ ಮಾಡಿದ್ದರು,ಆದರೆ ವಿದ್ಯುತ್ ದೀಪಗಳನ್ನು ಅಳವಡಿಸಲು ಟೆಂಡರ್ ಕರೆದಿದ್ದು, ದೀಪಗಳನ್ನು ಅಳವಡಿಸಲು ನಾಲ್ಕೈದು ತಿಂಗಳಾಗಬಹುದು ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

street light 2

ಇದರಿಂದ ವಿಚಲಿತರಾದ ಬಿಜೆಪಿ ಪಕ್ಷದ ಮುಖಂಡ ಜಯಣ್ಣ ನಗರದ ಸುಪ್ರಸಿದ್ಧ ವಾಣಿಜ್ಯೋದ್ಯಮಿಗಳಾದ ಇಸ್ತೂರಿ ಸುಬ್ಬಯ್ಯಶೆಟ್ಟಿ ಅವರ ಮಕ್ಕಳಾದ ಇಸ್ತೂರಿ ರಮೇಶ್ ಅವರನ್ನು ಸಂಪರ್ಕಿಸಿ ರಸ್ತೆಗೆ ಎಲ್ಇಡಿ ದೀಪಗಳನ್ನು ಕಲ್ಪಿಸಿಕೊಡಬೇಕೆಂದು ವಾರ್ಡಿನ ಪರವಾಗಿ ಮನವಿ ಮಾಡಿದರು. 

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಇಸ್ತೂರಿ ರಮೇಶ್ ಅವರು ರಸ್ತೆಗೆ ಬೇಕಾದ ಹದಿನೈದು ಎಲ್ಇಡಿ ಲೈಟುಗಳನ್ನು ಕೊಡಿಸಿ,ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ರಸ್ತೆಗೆ ಎಲ್ಇಡಿ ದೀಪಗಳನ್ನು ಅಳವಡಿಸಿದ ನಂತರ ವಾರ್ಡಿನ ಮಹಿಳೆಯರ ಕೈಯಲ್ಲಿಯೇ ದೀಪಗಳನ್ನು ಬೆಳಗಿಸಿ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಾರ್ಡಿನ ನಾಗರಿಕರಾದ ಸರಸ್ವತಮ್ಮ, ಸರೋಜಮ್ಮ, ಭಾರತಿ, ಜ್ಯೋತಿ, ಸುನಿತಾ, ಭಾಗ್ಯಮ್ಮ ಶಾಂತಮ್ಮ, ಉಮಾ, ಮಂಜುಳಾ, ಲಕ್ಷ್ಮಮ್ಮ,ಕೃಷ್ಣಪ್ಪ,ಬ್ರಹ್ಮರಾಜು, ಪರಮೇಶ್ವ ರಪ್ಪ, ಸಿದ್ದಯ್ಯ, ಗಿರೀಶ್, ಬಾಲಾಜಿ ಚಂದು, ಸೇರಿದಂತೆ ಇನ್ನಿತರರು ಹಾಜರಿದ್ದರು.