#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್‌ರೆಡ್ಡಿ ಹೆಸರು ಘೋಷಣೆ : ಬಂಡೆದ್ದ ಸುಧಾಕರ್ ಬೆಂಗಲಿಗರು

ಚಿಕ್ಕಬಳ್ಳಾಪುರ ಬಿಜೆಪಿ ಕಛೇರಿ ಬುಧವಾರ ಮಧ್ಯಾಹ್ನ ೨.೩೦ರ ವೇಳೆಗೆ ಅಕ್ಷರಶಃ ರಣರಂಗವಾಗಿ ಮಾರ್ಪಾಟಾಗಿತ್ತು. ಒಂದೆಡೆ ನೂತನ ಅಧ್ಯಕ್ಷ ಸಂದೀಪ್‌ರೆಡ್ಡಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮದವರಿಗೆ ಸಂದೇಶ ನೀಡುತ್ತಿದ್ದರೆ, ದಿಢೀರನೆಂದು ಬಂದ ಸುಧಾಕರ್ ಬೆಂಬಲಿ ಗರಿಂದ ಧಿಕ್ಕಾ ರದ ಘೋಷಣೆಗಳು ಮೊಳಗಿದವು

ಯೆಸ್‌ಬಾಸ್ ಸಂಸ್ಕೃತಿಯ ವಿರುದ್ಧ ತಿರುಗಿಬಿದ್ದ ಸಂಸದ ಡಾ.ಕೆ.ಸುಧಾಕರ್ ವಿಜಯೇಂದ್ರ ವಿರುದ್ಧ ಕಿಡಿಕಿಡಿ

Profile Ashok Nayak Jan 29, 2025 11:00 PM

ಪಾರ್ಟಿ ಕಚೇರಿಗೆ ನುಗ್ಗಿ ಧಿಕ್ಕಾರ ಕೂಗಿದ ಮರಳುಕುಂಟೆ : ಬಿಜೆಪಿ ಶೂನ್ಯವಾಗಲಿದೆ ಎಂದ ಎಸ್‌ಆರ್‌ಎಸ್

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ಬಿಜೆಪಿನೂತನ ಜಿಲ್ಲಾಧ್ಯಕ್ಷರಾಗಿ ಸಂದೀಪ್‌ರೆಡ್ಡಿ ಹೆಸರು ಘೋಷಣೆ ಮಾಡಿ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ್, ಮಾಜಿ ಆಧ್ಯಕ್ಷ ರಾಮಲಿಂಗಪ್ಪ ತೆರಳುತ್ತಿದ್ದಂತೆ,ಪಕ್ಷದ ಕಛೇರಿಗೆ ನುಗ್ಗಿಬಂದ ಅಧ್ಯಕ್ಷಗಾದಿಯ ಪ್ರಬಲ ಆಕಾಂಕ್ಷಿ ಮರಳುಕುಂಟೆ ಕೃಷ್ಣಮೂರ್ತಿ ಮತ್ತು ಬೆಂಬಲಿಗರು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿ ದರು.

maralukunte

ಹೌದು. ಚಿಕ್ಕಬಳ್ಳಾಪುರ ಬಿಜೆಪಿ ಕಛೇರಿ ಬುಧವಾರ ಮಧ್ಯಾಹ್ನ ೨.೩೦ರ ವೇಳೆಗೆ ಅಕ್ಷರಶಃ ರಣರಂಗ ವಾಗಿ ಮಾರ್ಪಾಟಾಗಿತ್ತು.ಒಂದೆಡೆ ನೂತನ ಅಧ್ಯಕ್ಷ ಸಂದೀಪ್‌ರೆಡ್ಡಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮದವರಿಗೆ ಸಂದೇಶ ನೀಡುತ್ತಿದ್ದರೆ,ದಿಢೀರನೆಂದು ಬಂದ ಸುಧಾಕರ್ ಬೆಂಬಲಿ ಗರಿಂದ ಧಿಕ್ಕಾರದ ಘೋಷಣೆಗಳು ಮೊಳಗಿದವು. ಪ್ರತಿಯಾಗಿ ಸಂದೀಪ್‌ರೆಡ್ಡಿ ಬೆಂಬಲಿಗರೂ ಕೂಡ ಸಂದೀಪ್‌ರೆಡ್ಡಿಗೆ ಜೈ, ವಿಜಯೇಂದ್ರಗೆ ಜೈ ಎನ್ನುತ್ತಾ ಪರಸ್ಪರ ಮುಖಾಮುಖಿ ಆಗಬೇಕು ಎನ್ನುವಷ್ಟ ರಲ್ಲಿಯೇ ಸಂದೀಪ್‌ರೆಡ್ಡಿ ಬಿಜೆಪಿ ಕಚೇರಿಯಿಂದ ಹೊರನಡೆದು ಸಂಭ್ರಮಾಚರಣೆಯಲ್ಲಿ ಭಾಗಿ ಯಾಗುವ ಮೂಲಕ ಆಗಬಹುದಾಗಿದ್ದ ದೊಡ್ಡ ಅನಾಹುತಗಳಿಗೆ ಬ್ರೇಕ್ ಹಾಕಿದರು.

ಏನಿದು ಗದ್ದಲ ಗಲಾಟೆ!!
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 5 ಮಂದಿ ನಾಮಪತ್ರ ಸಲ್ಲಿಸಿದರೆ ಹೈಮಕಮಾಂಡ್ ಅಂಗಳಕ್ಕೆ ತಲುಪಿದ್ದು ೪ ಮಾತ್ರ.ಈನಾಲ್ಕುಮಂದಿಯೂ ಕೂಡ ಪ್ರಬಲ ಸಮುದಾಯವಾದ ಒಕ್ಕಲಿಗರೇ ಎಂಬುದು ವಿಶೇಷ.ಇದರ ನಡುವೆ ಅಹಿಂದ ಅಭ್ಯರ್ಥಿಯಾಗಿದ್ದ ಎಸ್‌ಆರ್‌ಎಸ್ ದೇವರಾಜ್ ಸೋಮವಾರವೇ ಮಾಧ್ಯಮದ ಮುಂದೆ ಬಂದು ಬಿಜೆಪಿಯಲ್ಲಿ ಅಹಿಂದ ವರ್ಗವನ್ನು ಕಡೆಗಣಿಸು ತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Chikkaballapur News: ಬೆದರಿಕೆಗಳಿಗೆ ಭಯಪಡುವ ಶಾಸಕ ನಾನಲ್ಲ ಎಂದ ಶಾಸಕರ ಕ್ಷಮೆಯಾಚನೆಗೆ ದಸಂಸ ಒತ್ತಾಯ

ಆದರೆ ಉಳಿದ ನಾಲ್ವರು ಒಂದೇ ಸಮುದಾಯಕ್ಕೆ ಸೇರಿದ ಕಾರಣ ಸಂಸದ ಡಾ.ಕೆ.ಸುಧಾಕರ್ ಅವರ ಅಭಿಪ್ರಾಯಕ್ಕೆ ಪಕ್ಷದ ಹೈಕಮಾಂಡ್ ಮನ್ನಣೆ ನೀಡಲಿದೆ.ಇದೇ ನಿಜವಾದಲ್ಲಿ ಸೀಕಲ್ ರಾಮಚಂದ್ರ ಗೌಡ ಅಥವಾ ಮರಳುಕುಂಟೆ ಕೃಷ್ಣಮೂರ್ತಿ ಅಧ್ಯಕ್ಷರಾಗುವುದು ಖಚಿತ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡಿದ್ದವು.ಕಳೆದೆರಡು ದಿನಗಳಿಂದ ಸಂಸದ ಸುಧಾಕರ್ ಆಪ್ತ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಹೆಸರು ಅಂತಿಮವಾಗಿದೆ ಘೋಷಣೆ ಅಷ್ಟೇ ಬಾಕಿಯಿದೆ ಎನ್ನುವ ಸುದ್ದಿಯೂ ಮೈಲೇಜ್ ಪಡೆದಿತ್ತು.ಇದೇ ಅದಲ್ಲಿ ವಿಜೃಂಭಣೆಯಿAದ ವಿಜಯೋತ್ಸವ ಮಾಡಬೇಕು ಎಂಬ ತಯಾರಿಗಳೂ ನಡೆದಿದ್ದವು.

ಆದರೆ ಬುಧವಾರ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಅಶ್ವತ್ಥನಾರಾಯಣ್ ಸಂದೀಪ್‌ರೆಡ್ಡಿ ಹೆಸರನ್ನು ನೂತನ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಅಮಾವಾಸ್ಯೆಯ ಕತ್ತಲೆಯಂತೆ ಸಂಸದ ಡಾ.ಕೆ. ಸುಧಾಕರ್ ಪಾಳೆಯದ ಎಲ್ಲಾ ಲೆಕ್ಕಾಚಾರಗಳಿಗೆ  ದಟ್ಟ ಕಾರ್ಮೋಡ ಕವಿಯಿತು ಎನ್ನಬಹುದು. ಇದಕ್ಕೆ ಪುಷ್ಟಿ ನೀಡುವಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮರಳು ಕುಂಟೆ ಕೃಷ್ಣಮೂರ್ತಿ, ಎಸ್,ಆರ್,ಎಸ್,ದೇವರಾಜ್, ನಗರಸಭೆ ಅಧ್ಯಕ್ಷ ಗಜೇಂದ್ರ, ನಾರಾಯಣ ಸ್ವಾಮಿ ಸೇರಿದಂತೆ ಸುಧಾಕರ್ ಅಭಿಮಾನಿ ಬಳಗ ಈ ಆಯ್ಕೆಯನ್ನು ಏಕಪಕ್ಷೀಯವಾಗಿ ಮಾಡಲಾ ಗಿದೆ, ಸೌಜನ್ಯಕ್ಕೂ ಸಂಸದ ಸುಧಾಕರ್ ಅವರ ಸಲಹೆ ಪಡೆದಿಲ್ಲ, ವಿಜಯೇಂದ್ರ ಬಿಜೆಪಿಗೆ ಹಿಡಿದ ಶನಿ ಎಂದೆಲ್ಲಾ ಧಿಕ್ಕಾರದ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಪಕ್ಷದ ಕಚೇರಿಯಲ್ಲಿಯೇ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಹಿರಿಯ ಮುಖಂಡರಾಗಲಿ, ಹಿತೈಷಿಗಳಾಗಲಿ ಯಾರೂ ಕೂಡ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಲಿಲ್ಲ.ದಿಢೀರೆಂದು ಉಂಟಾದ ಕ್ಷೆÆÃಭೆ ಕೆಲಹೊತ್ತಿನಲ್ಲಿಯೇ ಮಂಜಾಗಿ ಕರಗಿತು.

ಅತ್ತ ನೂತನ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ನಗರದ ಬಿಬಿ ರಸ್ತೆಯಲ್ಲಿ ಭರ್ಜರಿ ರೋಡ್‌ಷೋ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡು ವಿಜಯದ ನಗೆ ಬೀರುತ್ತಾ, ಕಾರ್ಯಕರ್ತರು ಮುಖಂಡರಿಂದ ಅಭಿನಂಧನೆ ಸ್ವೀಕರಿಸುತ್ತಾ ಸಾಗಿದ್ದು ವಿಶೇಷವಾಗಿತ್ತು.

ಬಿಜೆಪಿ ಪಕ್ಷವು ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿಸಿದೆ.ಪಕ್ಷ ನನ್ನ ತಾಯಿ ಇದ್ದಂತೆ.ಹಿರಿಯರ ಮಾರ್ಗದರ್ಶನದಲ್ಲಿ ಇದಕ್ಕೆ ಯಾವುದೇ ಚ್ಯುತಿ ಬರದಂತೆ  ನಡೆದುಕೊಳ್ಳುತ್ತೇನೆ. ಹಿರಿಯರು, ಮಾರ್ಗದರ್ಶಕರು, ನನ್ನ ಸಹೋದರ ಸಮಾನರಾದ ಡಾ.ಕೆ.ಸುಧಾಕರ್ ಅವರ ವಿಶ್ವಾಸದಲ್ಲಿ,ಯಾವುದೇ ಬೇಧಭಾವವಿಲ್ಲದೆಎಲ್ಲರನ್ನೂ ಒಳಗೊಳ್ಳುತ್ತಾ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಮುಂದಾಗುತ್ತೇನೆ.ನನ್ನ ಆಯ್ಕೆಗೆ ಶ್ರಮಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

*
ಜಿಲ್ಲೆಯಲ್ಲಿ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದ ಕಾಲದಲ್ಲಿ ಬಿಜೆಪಿ ಸೇರಿದ ಡಾ.ಕೆ.ಸುಧಾಕರ್ ಕಾರಣವಾಗಿ ಜಿಲ್ಲೆಯಷ್ಟೇ ಅಲ್ಲದೆ ಲೋಕಸಭಾ ಕ್ಷೇತ್ರದ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಿದೆ.ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷಕ್ಕಾಗಿ ಶ್ರಮಿಸದ, ಅವರ ವಿರುದ್ಧ ಕೆಲಸ ಮಾಡಿಕೊಂಡೇ ಬಂದಿರುವ ವ್ಯಕ್ತಿಯನ್ನು ನೇಮಕ ಮಾಡಿದರೆ ಪಕ್ಷ ಬೆಳೆಯುವುದಿಲ್ಲ.ಹೊಂದಾಣಿಕೆಯ ಕೊರತೆಯಿಂದ ತಳಕಚ್ಚಲಿದೆ.ಈ ಆಯ್ಕೆ ಮಾಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಧಿಕ್ಕಾರ.ಇದನ್ನು ರದ್ಧು ಮಾಡಲಿಲ್ಲ ಎಂದರೆ ನಮ್ಮ ನಾಯಕ ರು ಹೇಳಿದಂತೆ ಮುಂದಿನ ದಿನಗಳಲ್ಲಿ ನಮ್ಮ ನಡೆ ಬೇರೆಯೇ ಆಗಲಿದೆ.
-ಮರಳುಕುಂಟೆ ಕೃಷ್ಣಮೂರ್ತಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

ಹೈಕಮಾಂಡ್ ನಮ್ಮಿಂದ ನಾಮಕಾವಸ್ತೆಗೆ ಅರ್ಜಿ ಪಡೆದು ಅವರು ಮಾಡುವ ಕೆಲಸವನ್ನೇ ಮಾಡಿದ್ದಾರೆ.ಈ ಆಯ್ಕೆ ಪಾರದರ್ಶಕವಾಗಿದ್ದರೆ ಇಷ್ಟು ಮಂದಿ ಅರ್ಜಿ ಹಾಕಿದ್ದಾರೆ, ಪಕ್ಷಕ್ಕಾಗಿ ಇವರ ಕೆಲಸ ಇಷ್ಟಿದೆ ಎಂದು ಹೇಳಬೇಕಿತ್ತು.ಇದನ್ನು ಬಿಟ್ಟು ಪಕ್ಷಸಂಘಟನೆ ಮಾಡದೆ, ಎಂ.ಪಿ ಎಲೆಕ್ಷನ್‌ ನಲ್ಲಿ, ಎಂಎಲ್‌ಎ ಚುನಾವಣೆಯಲ್ಲಿ ವಿರುದ್ಧ ಚಟವಟಿಕೆ ಮಾಡಿದವರನ್ನು ಆರಿಸಿದ್ದಾರೆ. ಇವರು ಎಂದಾದರೂ ಕೇಸರಿ ಶಾಲು ಹಾಕಿಕೊಂಡು ಕೆಲಸ ಮಾಡಿದ್ದಾರಾ?ಪಕ್ಷ ಸಂಘಟನೆಗೆ ಕೊಡುಗೆಯೇನು?ಒಳಗೊಳಗೇ ಗುಟ್ಟಾಗಿ ಕೆಲಸ ಮಾಡಿದವರಿಗೆ ಜವಾಬ್ದಾರಿ ನೀಡಿದರೆ ಪಾರ್ಟಿ ಹೇಗೆ ಬೆಳೆಯಲು ಸಾಧ್ಯ.ಎಂ.ಪಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರಿಗೆ ಅವಮಾನ ಮಾಡಿದ್ದು ಸರಿಯಲ್ಲ.ಇದರಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಶೂನ್ಯಕ್ಕಿಳಿಯಲಿದೆ
ಎಸ್.ಆರ್.ಎಸ್.ದೇವರಾಜ್ ಒಬಿಜಿ ಜಿಲ್ಲಾ ಉಪಾಧ್ಯಕ್ಷ

ಇನ್ನು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಸಂಸದ ಸುಧಾಕರ್ ಬಿಜೆಪಿಯಲ್ಲಿ ವಿಜಯೇಂದ್ರ ಬಂದ ಮೇಲೆ ಯೆಸ್‌ಬಸ್ ಸಂಸ್ಕೃತಿ ತಲೆಯೆತ್ತಿದೆ.ಹಿರಿಯ ನಾಯಕರನ್ನು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಾನು ನನ್ನ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಬೆಂಬಲಿಸಿದೆ.ಆಸAದರ್ಭದಲ್ಲಿ ವಿಜಯೇಂದ್ರ ನೀಡಿದ್ದ ಎಲ್ಲಾ ಭರವಸೆಗಳು ಸುಳ್ಳಾಗಿವೆ.ನಾನು ಇಷ್ಟಪಡುವ ಸಿದ್ಧರಾಮಯ್ಯ ಅವರು ಹೇಳಿದ ಮಾತು ಗಳನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈಗ ಪ್ರತಿಫಲವನ್ನು ಉಣ್ಣುತ್ತಿದ್ದೇನೆ. ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿರುವ ವಿಜಯೇಂದ್ರ ಅವರಿಗೆ, ಅವರ ಅಹಂಕಾರಕ್ಕೆ ಧಿಕ್ಕಾರವಿರಲಿ. ಇನ್ನೇನಿದ್ದರೂ ಯುದ್ಧ ನೋಡೋಣ ಯಾರು ಗೆಲ್ಲುತ್ತಾರೆ ಎಂದು ಕಿಡಿಕಾರಿದ್ದಾರೆ. ಈ ಎಲ್ಲಾ ಘಟನೆಗಳು ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲವರ್ಧನೆ ಮಾಡಲು ನೆರವಾಗುತ್ತವೋ, ಇಲ್ಲಾ ಸರ್ವನಾಶಕ್ಕೆ ಕಾರಣವಾಗುತ್ತಾ ಕಾದು ನೋಡಬೇಕಿದೆ.
ಸಂದೀಪ್.ಬಿ.ರೆಡ್ಡಿ ನೂತನ ಜಿಲ್ಲಾಧ್ಯಕ್ಷರು ಬಿಜೆಪಿ ಘಟಕ ಚಿಕ್ಕಬಳ್ಳಾಪುರ.