Ranji Trophy Final: ವಿದರ್ಭ 379ಕ್ಕೆ ಆಲೌಟ್, ಕೇರಳಗೆ ಆದಿತ್ಯ ಸರ್ವಾಟೆ ಆಸರೆ!
Ranji Trophy Final Day 2 Highlights: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಕಾದಾಟ ನಡೆಸುತ್ತಿವೆ. ಆದಿತ್ಯ ಸರ್ವಾಟೆಯ ಅಜೇಯ ಅರ್ಧಶತಕದ ಬಲದಿಂದ ಕೇರಳ ಎರಡನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 131 ರನ್‌ಗಳನ್ನು ಗಳಿಸಿದೆ. ಆ ಮೂಲಕ ಇನ್ನೂ 248 ರನ್‌ಗಳ ಹಿನ್ನಡೆಯಲ್ಲಿದೆ.

ಕೇರಳ ಪರ ಆದಿತ್ಯ ಸರ್ವಾಟೆ ಅರ್ಧಶತಕವನ್ನು ಗಳಿಸಿದ್ದಾರೆ.

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024-25ರ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನ ಕೇರಳ ಹಾಗೂ ವಿದರ್ಭ ಎರಡೂ ತಂಡಗಳು ಸಮಬಲದ ಹೋರಾಟವನ್ನು ನಡೆಸಿವೆ. ವಿದರ್ಭ ತಂಡ 379 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಕೇರಳ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ಗಳ ನಷ್ಟಕ್ಕೆ 131 ರನ್‌ಗಳನ್ನು ಕಲೆ ಹಾಕಿದೆ. ಕೇರಳ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಆದಿತ್ಯ ಸರ್ವಾಟೆ ಅವರು ಅಜೇಯ 66 ರನ್‌ಗಳನ್ನು ಕಲೆ ಹಾಕಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂದ ಹಾಗೆ ಕೇರಳ ತಂಡ ಇನ್ನೂ 248 ರನ್‌ಗಳ ಹಿನ್ನಡೆಯಲ್ಲಿದೆ.
ಎರಡನೇ ದಿನ ಬೆಳಗ್ಗೆ ನಾಲ್ಕು ವಿಕೆಟ್ ಕಳೆದುಕೊಂಡು 254 ರನ್ ಗಳಿಂದ ಬ್ಯಾಟಿಂಗ್ ಮುಂದುವರಿಸಿದ ವಿದರ್ಭ, ಸುಮಾರು 450 ರನ್‌ಗಳ ಮೊತ್ತವನ್ನು ಕಲೆ ಹಾಕಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಕೇರಳ ಬೌಲರ್‌ಗಳು ಇದಕ್ಕೆ ಅವಕಾಶವನ್ನು ನೀಡಲಿಲ್ಲ. ವಿದರ್ಭ 400 ರನ್‌ಗಳಿಗೂ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಯಿತು. ವಿದರ್ಭ ಪರ ಡ್ಯಾನಿಶ್ ಮಾಲೆವಾರ್ 153 ಮತ್ತು ಕರುಣ್ ನಾಯರ್ 86 ರನ್ ಗಳಿಸಿದರು. ಎರಡನೇ ದಿನದ ಮೊದಲ ಅವಧಿಯಲ್ಲಿ ಕೇರಳ ಬೌಲರ್‌ಗಳು ತಮ್ಮ ಲಯವನ್ನು ಕಾಯ್ದುಕೊಂಡರು. ವೇಗಿ ಎಂ.ಡಿ ನಿಧೀಶ್ 61 ರನ್‌ಗಳಿಗೆ ಮೂರು ವಿಕೆಟ್ ಮತ್ತು ಎಡೆನ್ ಆಪಲ್ಟನ್ 102 ರನ್ ಗಳಿಗೆ ಮೂರು ವಿಕೆಟ್ ಪಡೆದರು. ಎನ್ ಎಂ ಬಾಸಿಲ್ ಎರಡು ವಿಕೆಟ್ ಪಡೆದರು.
Ranji Trophy: ಸೌರಾಷ್ಟ್ರ ಸೋಲಿನ ಬೆನ್ನಲ್ಲೆ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಶೆಲ್ಡನ್ ಜಾಕ್ಸನ್!
153 ರನ್ ಕಲೆ ಹಾಕಿದ ಡ್ಯಾನಿಶ್ ಮಾಳೆವರ್
ಮಾಳೆವರ್ ಅವರನ್ನು ಔಟ್ ಮಾಡುವ ಮೂಲಕ ಬಾಸಿಲ್ ಗುರುವಾರ ಬೆಳಗ್ಗೆ ಕೇರಳ ತಂಡಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ಮಾಳೆವರ್ 285 ಎಸೆತಗಳಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 153 ರನ್ ಗಳಿಸಿದರು. ಉತ್ತಮ ಫಾರ್ಮ್‌ನಲ್ಲಿರುವ ಯಶ್ ರಾಥೋಡ್ ವಿಕೆಟ್ ಉರುಳಿದ ಬಳಿಕ ವಿದರ್ಭ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಅವರು ಮೂರು ರನ್ ಗಳಿಸಿದ್ದಾಗ ಈಡನ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್ ಪಡೆದರು. ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್ ಅವರು ಈಡನ್ ಅವರ ಎಸೆತದಲ್ಲಿ 23 ರನ್ ಗಳಿಸಿ ವಿಕೆಟ್ ಕೀಪರ್ ಮೊಹಮ್ಮದ್ ಅಝರುದ್ದೀನ್ ಅವರಿಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
Stumps on Day 2!
— BCCI Domestic (@BCCIdomestic) February 27, 2025
An exciting day's play!
Vidarbha resumed from 254/4 & were all out for 379!
Kerala have moved to 131/3 in reply, with Aditya Sarwate (66*) & Sachin Baby (7*) at the crease. #RanjiTrophy | @IDFCFIRSTBank | #Final
Scorecard ▶️ https://t.co/up5GVaflpp pic.twitter.com/EziTggvZcR
ವಿದರ್ಭ ತಂಡಕ್ಕೆ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವುದು ಬಹಳ ಮುಖ್ಯವಾಗಿತ್ತು ಮತ್ತು ದರ್ಶನ್ ನಲ್ಕಂಡೆ ಆರಂಭಿಕ ಎರಡು ವಿಕೆಟ್‌ಗಳನ್ನು ಪಡೆದರು. ಕೇರಳ ಒಂದು ವಿಕೆಟ್‌ಗೆ 14 ರನ್‌ಗಳಾಗಿದ್ದಾಗ ಅವರು ಆರಂಭಿಕ ಆಟಗಾರರಾದ ಅಕ್ಷಯ್ ಚಂದ್ರನ್ (14) ಮತ್ತು ರೋಹನ್ ಕುನ್ನುಮಲ್ (0) ಅವರನ್ನು ಔಟ್ ಮಾಡಿದರು. ಇದಾದ ನಂತರ, 2017-18, 2018-19ರ ಸಾಲಿನಲ್ಲಿ ಪ್ರಶಸ್ತಿ ಗೆದ್ದಿದ್ದ ವಿದರ್ಭ ತಂಡದ ಸದಸ್ಯರಾಗಿದ್ದ ಸರ್ವಾಟೆ. ಬಹಳಾ ಎಚ್ಚರಿಕೆ ಆಟವನ್ನು ಆಡುವ ಮೂಲಕ ಅರ್ಧಶತಕ ಸಿಡಿಸಿ ಕೇರಳ ತಂಡಕ್ಕೆ ಆಸರೆಯಾದರು.
35ನೇ ವಯಸ್ಸಿನ ಆದಿತ್ಯ ಸರ್ವಾಟೆ ಕಳೆದ ರಣಜಿ ಋತುವಿನ ನಂತರ ವಿದರ್ಭ ತೊರೆದು ಕೇರಳಕ್ಕೆ ಬಂದಿದ್ದರು. ಅವರು ಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 120 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 10 ಬೌಂಡರಿಗಳನ್ನು ಬಾರಿಸಿದ್ದಾರೆ. ಸರ್ವಾಟೆ ಮತ್ತು ಅಹ್ಮದ್ ಇಮ್ರಾನ್ ಮೂರನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ಆಡಿದ್ದಾರೆ. ಇಮ್ರಾನ್ 83 ಎಸೆತಗಳಲ್ಲಿ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ನಾಯಕ ಸಚಿನ್ ಬೇಬಿ (7) ಕ್ರೀಸ್‌ನಲ್ಲಿದ್ದಾರೆ.