Viral Video: ದಿಲ್ಲಿಯಲ್ಲಿ ಚಾಲಕನಿಲ್ಲದೆ ಚಲಿಸುವ ಆಟೋ ಪತ್ತೆ; ವೈರಲ್ ವಿಡಿಯೊ ಇಲ್ಲಿದೆ
Viral Video: ಚಾಲಕ ರಹಿತ ಆಟೋ ರಿಕ್ಷಾವೊಂದು ದೆಹಲಿಯ ಬೀದಿಗಳಲ್ಲಿ ಸಂಚರಿಸುತ್ತಿರುವ ವಿಡಿಯೊ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಡ್ರೈವರ್ ಇಲ್ಲದೆ ಚಲಿಸಿದ ಆಟೋ ರಿಕ್ಷಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.


ನವದೆಹಲಿ: ಇಲ್ಲೊಂದು ಕಡೆ ಡ್ರೈವರ್ ಇಲ್ಲದೆಯೇ ಆಟೋ ರಸ್ತೆಯಲ್ಲಿ ಚಲಿಸಿದೆ. ಇದನ್ನು ನೋಡಿದ ಅಲ್ಲಿದ್ದವರೂ ಕ್ಷಣಕಾಲ ಆಶ್ಚರ್ಯಪಟ್ಟಿದ್ದು ಸದ್ಯ ನೆಟ್ಟಿಗರಿಗೂ ಕುತೂಹಲ ಮೂಡಿಸಿದೆ. ಡ್ರೈವರ್ ಇಲ್ಲದೆ ಚಲಿಸಿದ ಆಟೋ ರಿಕ್ಷಾದ ವಿಡಿಯೊ ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ(Viral Video).
ಚಾಲಕ ರಹಿತ ಆಟೋ ರಿಕ್ಷಾವೊಂದು ದೆಹಲಿಯ ಬೀದಿಗಳಲ್ಲಿ ಸಂಚರಿಸುತ್ತಿರುವ ವಿಡಿಯೊ ಬಳಕೆ ದಾರರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಡ್ರೈವರ್ ಇಲ್ಲದೆ ಚಲಿಸಿದ ಆಟೋ ರಿಕ್ಷಾದ ವಿಡಿಯೊ ಸಾಮಾಜಿಕ ತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ.
'ಡೆಲ್ಲಿ ಸೆ ಸ್ಕೈ' ಹೆಸರಿನ ಪೇಜ್‌ನ ಈ ತುಣುಕನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದ ವರ್ಷ ಅಪ್‌ಲೋಡ್ ಮಾಡಲಾಗಿತ್ತು. ಇದೀಗ ಮತ್ತೆ ನೆಟ್ಟಿಗರ ಗಮನ ಸೆಳೆದಿದೆ. ಈ ಆಟೋ ಇತರ ವಾಹನಗಳಿಗೆ ಅಡಚಣೆ ಮಾಡದೇ ವೇಗವಾಗಿ ಚಲಿಸುತ್ತಿರುವುದು ಕಂಡು ಬಂದಿದೆ.
ಆರಂಭದಲ್ಲಿ ಆಟೋ ಚಾಲಕ ಇದ್ದಂತೆ ಕಂಡುಬಂದರೂ ಕ್ಯಾಮೆರಾ ಝೂಮ್ ಇನ್ ಆಗುತ್ತಿದ್ದಂತೆ ಡ್ರೈವರ್ ಇಲ್ಲದೆ ಚಲಿಸುತ್ತಿದೆ ಎಂದು ತಿಳಿಯುತ್ತದೆ. ರಾಷ್ಟ್ರ ರಾಜಧಾನಿಯ ಜನನಿಬಿಡ ರಸ್ತೆಯಲ್ಲಿ ರಾತ್ರಿ ಸಂದರ್ಭದಲ್ಲಿ ಈ ಆಟೋ ಕಂಡು ಬಂದಿದೆ. ಈ ತ್ರಿಚಕ್ರ ವಾಹನವು ತನ್ನದೇ ಆದ ರೀತಿಯಲ್ಲಿ ಚಲಿಸುತ್ತಿದ್ದು ನೋಡುಗರಿಗೆ ಕುತೂಹಲ ಮೂಡಿಸುವ ಜತೆಗೆ ಚಾಲಕನಿಲ್ಲದೆ ರಿಕ್ಷಾ ಹೇಗೆ ಚಲಿಸುತ್ತಿದೆ ಎಂದು ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಈ ವಿಡಿಯೊವನ್ನು ತಮಾಷೆಯಾಗಿ ತೆಗೆದುಕೊಂಡು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: BBK 11: ಇವತ್ತು ಒಂದು ಎಲಿಮಿನೇಷನ್, ಘೋಷಣೆ ಮಾಡಿದ ಸುದೀಪ್: ಸೂಟ್ ಕೇಸ್ನಲ್ಲಿದೆ ರಹಸ್ಯ
ಕೆಲ ಬಳಕೆದಾರರು ಇದನ್ನು ನಂಬೋದು ಕಷ್ಟ ಅಂದ್ರೆ ಮತ್ತೆ ಕೆಲವರು ಇದು ತಾಂತ್ರಿಕ ಸಮಸ್ಯೆ ಇರಬಹುದು ಎಂದು ಕಾಮೆಂಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಳಕೆದಾರರೊಬ್ಬರು ದಿ ವಂಡರ್ ಆಟೋ ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬರು ಹೊಸ ತಂತ್ರಜ್ಞಾನವುಳ್ಳ ಆಟೋ ಎಂದು ಹೇಳಿದ್ದಾರೆ.