ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

MS Dhoni: ಕುತೂಹಲ ಕೆರಳಿಸಿದ ಧೋನಿಯ ಟಿ-ಶರ್ಟ್‌ ಕೋಡ್‌ ವರ್ಡ್‌ ಸಂದೇಶ!

ಧೋನಿ ಧರಿಸಿದ್ದ ಕಪ್ಪು ಬಣ್ಣದ ಟಿ-ಶರ್ಟ್‌ನಲ್ಲಿ ಮೋರ್ಸ್ ಕೋಡ್‌ಗಳಿರುವ ಗ್ರಾಫಿಕ್ ಕಂಡು, ಈ ಮೋರ್ಸ್ ಕೋಡ್‌ ಹಿಂದೆ ಅಡಗಿರುವ ಅರ್ಥವನ್ನು ನೆಟ್ಟಿಗರು ತ್ವರಿತವಾಗಿ ಡಿಕೋಡ್ ಮಾಡಿದ್ದಾರೆ. ಈ ವೇಳೆ ಇದರ ಅರ್ಥ 'ಒನ್ ಲಾಸ್ಟ್ ಟೈಮ್'(ಒಂದು ಕೊನೆಯ ಅವಕಾಶ) ಎಂದು ತಿಳಿದುಬಂದಿದೆ. ಹೀಗಾಗಿ ಧೋನಿಗೆ ಈ ಬಾರಿಯ ಐಪಿಎಲ್‌ ಕೊನೆಯದ್ದು ಎಂದು ಕೆಲವರು ಕಮೆಂಟ್‌ ಮಾಡಲಾರಂಭಿಸಿದ್ದಾರೆ.

ಐಪಿಎಲ್‌ಗೂ ಮುನ್ನ ಕುತೂಹಲ ಕೆರಳಿಸಿದ ಧೋನಿಯ ಟಿ-ಶರ್ಟ್‌

Profile Abhilash BC Feb 27, 2025 12:19 PM

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಅವರು ಮೈದಾನಲ್ಲಿ ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಎಷ್ಟು ಅಚ್ಚರಿಯೋ ಹಾಗೆ ಅವರು ತಮ್ಮ ಟೆಸ್ಟ್‌ ಕ್ರಿಕೆಟ್‌ ನಾಯಕತ್ವಕ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಕೂಡ ದಿಢೀರ್‌ ನಿರ್ಧಾರಗಳೇ. ಸದ್ಯ ಅವರು ಐಪಿಎಲ್‌ ಮಾತ್ರ ಆಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಧೋನಿ ಇಂದು, ನಾಳೆ ಐಪಿಎಲ್‌ಗೆ ನಿವೃತ್ತಿ ಹೇಳುತ್ತಾರೆ ಎಂಬ ವರದಿಗಳು ಬರುತ್ತಲೇ ಇದೆ. ಆದರೆ ಧೋನಿ ತಮ್ಮ ಐಪಿಎಲ್‌ ನಿವೃತ್ತಿ ಕುರಿತು ಇದುವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದೀಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೀತಿಯಲ್ಲೇ ಐಪಿಎಲ್‌ಗೂ ದಿಢೀರ್‌ ವಿದಾಯ ಹೇಳುವ ರಹಸ್ಯ ಸೂಚನೆಯೊಂದನ್ನು ನೀಡಿದಂತಿದೆ.

ಹೌದು, 43 ವರ್ಷದ ಧೋನಿ, ಮಾರ್ಚ್‌ 22 ರಿಂದ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬುಧವಾರ ಚೆನ್ನೈಗೆ ಬಂದಿಳಿದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಿಂದ ಹೊರನಡೆಯುತ್ತಿದ್ದಂತೆ ಧೋನಿಯ ಟಿ-ಶರ್ಟ್‌ನಲ್ಲಿನ ಕೋಡ್ ವರ್ಡ್‌ ಒಂದು ಗೋಚರಿಸಿತು.

ಅವರು ಧರಿಸಿದ್ದ ಕಪ್ಪು ಬಣ್ಣದ ಟಿ-ಶರ್ಟ್‌ನಲ್ಲಿ ಮೋರ್ಸ್ ಕೋಡ್‌ಗಳಿರುವ ಗ್ರಾಫಿಕ್ ಕಂಡು, ಈ ಮೋರ್ಸ್ ಕೋಡ್‌ ಹಿಂದೆ ಅಡಗಿರುವ ಅರ್ಥವನ್ನು ನೆಟ್ಟಿಗರು ತ್ವರಿತವಾಗಿ ಡಿಕೋಡ್ ಮಾಡಿದ್ದಾರೆ. ಈ ವೇಳೆ ಇದರ ಅರ್ಥ 'ಒನ್ ಲಾಸ್ಟ್ ಟೈಮ್'(ಒಂದು ಕೊನೆಯ ಅವಕಾಶ) ಎಂದು ತಿಳಿದುಬಂದಿದೆ. ಹೀಗಾಗಿ ಧೋನಿಗೆ ಈ ಬಾರಿಯ ಐಪಿಎಲ್‌ ಕೊನೆಯದ್ದು ಎಂದು ಕೆಲವರು ಕಮೆಂಟ್‌ ಮಾಡಲಾರಂಭಿಸಿದ್ದಾರೆ.



ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶಿಬಿರವು ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುಂಚಿತವಾಗಿ ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಧೋನಿ ರಾಂಚಿ ಕ್ರಿಕೆಟ್‌ ಅಕಾಡೆಮಿಯಲ್ಲಿ ಕ್ರಿಕೆಟ್‌ ಅಭ್ಯಾಸ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳು ವೈರಲ್‌ ಆಗಿತ್ತು.

ಬಾರಿಯ ಟೂರ್ನಿಯಲ್ಲಿ ಧೋನಿ ತಮ್ಮ ಬ್ಯಾಟ್‌ನ ತೂಕವನ್ನು ಇಳಿಸಿ ಆಡಲಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಧೋನಿ 1250-1300 ಗ್ರಾಂ ತೂಕದ ಬ್ಯಾಟ್‌ನೊಂದಿಗೆ ಆಡುತ್ತಾರೆ. ಆದರೆ ಈ ಬಾರಿ ಕನಿಷ್ಠ 10-20 ಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್‌ ಕೀಪರ್‌ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.

ಇದನ್ನೂ ಓದಿ IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಬೌಲಿಂಗ್‌ ಕೋಚ್‌

ಚೆನ್ನೈ ತಂಡ

ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್​ ಅಹ್ಮದ್,​ ಆರ್​. ಅಶ್ವಿನ್​, ಡೆವೊನ್​ ಕಾನ್ವೇ, ರಚಿನ್​ ರವೀಂದ್ರ, ರಾಹುಲ್​ ತ್ರಿಪಾಠಿ, ಖಲೀಲ್​ ಅಹ್ಮದ್​, ವಿಜಯ್​ ಶಂಕರ್​, ಸ್ಯಾಮ್​ ಕರನ್​, ಅಂಶುಲ್​ ಕಂಬೋಜ್​, ಶೇಕ್​ ರಶೀದ್​, ಮುಕೇಶ್​ ಚೌಧರಿ, ದೀಪಕ್​ ಹೂಡಾ, ಗುರುಜಪ್​ನೀತ್​ ಸಿಂಗ್​ ,ನಾಥನ್​ ಎಲ್ಲಿಸ್​, ಜೇಮಿ ಓವರ್ಟನ್​, ಕಮಲೇಶ್​ ನಾಗರಕೋಟಿ, ರಾಮಕೃಷ್ಣ ಘೋಷ್​, ಶ್ರೇಯಸ್​ ಗೋಪಾಲ್​, ವಂಶ್​ ಬೇಡಿ, ಆಂಡ್ರೆ ಸಿದ್ಧಾರ್ಥ್​.