Friday, 30th September 2022

ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ: ಲಾಠಿ ಚಾರ್ಚ್

ಉಡುಪಿ: ಕೊರಗ ಕಾಲೋನಿಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ ಮಾಡಿದ ಕಾರಣಕ್ಕಾಗಿ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಲಾಠಿ ಚಾರ್ಚ್ ಮಾಡಿದ ಪೊಲೀಸರನ್ನು ಕೋಟ ಠಾಣೆಯಿಂದಲೇ ಅಮಾನತು ಮಾಡಲಾಗಿದೆ.

ಮದುವೆ ಮೊದಲು ನಡೆಯುವ ಮೆಹಂದಿ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಇದೆ. ಕೊರಗ ಕಾಲೋನಿಯ ಒಂದು ಮನೆಯಲ್ಲೂ ಡಿಜೆ ಸದ್ದಿನೊಂದಿಗೆ ಸೋಮವಾರ ರಾತ್ರಿ ಮೆಹಂದಿ ಸಂಭ್ರಮ ಮೇಳೈಸಿತ್ತು. ಆದರೆ ಈ ಸಂಭ್ರಮ ನಡೆದಿದ್ದು ಕೇವಲ 11 ಗಂಟೆವರೆಗೆ ಮಾತ್ರ.

ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕೊರಗ ಸಮುದಾಯಕ್ಕೆ ಸೇರಿದ ರಾಜೇಶ್ ಎಂಬುವವರ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಮೆಹಂದಿಗೆ ಬಂದವರು, ಡಿಜೆ ಹಾಕಿ ಕುಣಿಯುತ್ತಿದ್ದರು. ಈ ವೇಳೆ ಡಿಜೆ ಸದ್ದು ಜೋರಾಗಿ ಪ್ಲೇ ಮಾಡಿದನ್ನೇ ನೆಪವಾಗಿ ಇಟ್ಟುಕೊಂಡು, ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ ಕೋಟ ಪೊಲೀಸರು ಮದುಮಗ ರಾಜೇಶ್ ಸೇರಿದಂತೆ ಎಲ್ಲರಿಗೂ ಹಲ್ಲೆ ನಡೆಸಿದ್ದಾರೆ.

ಮಹಿಳೆಯರು ಬೊಬ್ಬೆ ಹಾಕಿದರೂ ಹಲ್ಲೆ ನಡೆಸಿದ ಪೊಲೀಸರ ನಡೆಯನ್ನು ಕೊರಗ ಸಮುದಾಯದವರು ಖಂಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ದಲಿತ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಕೊರಗ ಸಮುದಾಯದವರು ಸೇರಿದಂತೆ ನೂರಾರು ಮಂದಿ ಸೇರಿ, ಕೋಟ ಎಸ್‌ಐ ಸಂತೋಷ್ ನಡೆಯನ್ನು ಖಂಡಿಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಭೇಟಿ ಸೂಕ್ತ ತನಿಖೆ ಕ್ರಮ ಕೈಗೊಳುವ ಭರವಸೆ ನೀಡಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್, ಡಿಜೆ ಸದ್ದು ಜೋರಾಗಿ ಹಾಕಿದ ಹಿನ್ನಲೆಯಲ್ಲಿ ಸ್ಥಳೀಯರು ದೂರು ನೀಡಿದ್ದರು.

ವಿಚಾರಣೆ ಮುಗಿಯುವ ತನಕ ಕೋಟಾ ಇನ್ಸ್‌ಪೆಕ್ಟರ್ ಸಂತೋಷ್ ಮತ್ತು ಐವರು ಸಿಬ್ಬಂದಿಗೆ ಕೋಟಾ ಠಾಣೆಗೆ ಕರ್ತವ್ಯಕ್ಕೆ ತೆರಳದಂತೇ ಸೂಚಿಸಲಾಗಿದೆ. ವಿಚಾರಣೆ ಮುಗಿಯುವ ವರೆಗೆ ಎಸ್ಪಿ ಠಾಣೆಯಲ್ಲಿ ಇರುವಂತೆ ಆದೇಶ ಮಾಡಲಾಗಿದೆ.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಕೋಟ ಗ್ರಾಮದಲ್ಲಿ ಕೊರಗ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಘಟನಾ ಸ್ಥಳಕ್ಕೆ ಬುಧವಾರ ಸಚಿವರು ಭೇಟಿ ನೀಡಲಿದ್ದಾರೆ.