Tuesday, 17th May 2022

ಹಲ್ಲೆಗೆ ಒಳಗಾಗುತ್ತಿದ್ದ ವೈದ್ಯರ ರಕ್ಷಣೆಗೆ ಬರಲಿದೆ ಶಾಸನ…

ದಯಾನಂದ ಲಿಂಗೇಗೌಡ, 
ಅಸ್ಸಾಂನಲ್ಲಿ ಒಂದು ಟೀ ಎಸ್ಟೇಟಿನ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಹುದ್ದೆ ಖಾಲಿ ಇದೆ. ಆ ಹುದ್ದೆಗೆ ಸೂಕ್ತ ವೈದ್ಯರು ಬೇಕಾಗಿದ್ದು ಕೈತುಂಬಾ ಸಂಬಳ ಕೊಡಲು ಆಡಳಿತ ಮಂಡಳಿ ತಯಾರಿದೆ. ಅಷ್ಟೇ ಅಲ್ಲ ಉತ್ತಮ ಸೌಕರ್ಯವಿರುವ ಮನೆ, ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತದೆ. ಮನೆ ಕೆಲಸಕ್ಕೆೆ ಪ್ರತ್ಯೇಕ ಆಳು ಕಾಳುಗಳನ್ನು ಒದಗಿಸಲಾಗುತ್ತದೆ. ಆದರೆ, ಆ ಹುದ್ದೆಯಲ್ಲಿ ಒಂದೇ ಒಂದು ತೊಂದರೆ ಅದೇನಪ್ಪಾಾ ಎಂದರೆ ಈ ಹಿಂದೆ ಆ ಹುದ್ದೆಯಲ್ಲಿದ್ದ ಹಿರಿಯ ವೈದ್ಯರೊಬ್ಬರನ್ನು ಅಲ್ಲಿಯ ರೋಗಿಗಳು ಹೊಡೆಡಿದ್ದಾರೆ. ಗುಂಪಿನ ಜನರ ಹೊಡೆತಕ್ಕೆೆ ವೈದ್ಯರ ಪ್ರಾಾಣ ಪಕ್ಷಿ ಹಾರಿಹೋಗಿದೆ. ಅಷ್ಟೇ ಅದು ಬಿಟ್ಟರೆ ಬೇರೆ ಎಲ್ಲವೂ ಚನ್ನಾಾಗಿದೆ. ಈ ಉದ್ಯೋೋಗದ ಬಗ್ಗೆೆ ಆಸಕ್ತಿಿ ಇದ್ದವರು ಸಂಪರ್ಕಿಸಬಹುದು.

ಅಂದ ಹಾಗೆ, ಈ ಹುತಾತ್ಮ ಹಿರಿಯ ವೈದ್ಯರಿಗೆ ಕೇವಲ ಎಪ್ಪತ್ತು ಮೂರು ವರ್ಷ ವಯಸ್ಸಾಾಗಿತ್ತು. ನಿವೃತ್ತಿಿ ಹೊಂದಿದ ನಂತರ ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಯದೆ, ದೂರದ ಟೀ ಎಸ್ಟೇಟ್‌ನಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ತಪ್ಪುು ವೈದ್ಯರದೇ ಬಿಡಿ. ನಿವೃತ್ತಿಿ ಹೊಂದಿದ ಮೇಲೂ ದೂರದ ಊರಿನಲ್ಲಿ ಕೆಲಸ ಮಾಡುವ ಉಸಾಬರಿ ಯಾಕೆ ಬೇಕಾಗಿದ್ದು ಹೇಳಿ. ಅದೇ ಮಾಡಿದ ಅವರ ದೊಡ್ಡ ತಪ್ಪುು ನಡೆದುದಿಷ್ಟೆೆ.

ಗಂಭೀರವಾಗಿ ಗಾಯಗೊಂಡಿದ್ದ ರೋಗಿಯೊಬ್ಬರನ್ನು ಆಸ್ಪತ್ರೆೆಗೆ ಕರೆದುಕೊಂಡು ಬರಲಾಗಿದೆ. ಶನಿವಾರವಾದ್ದರಿಂದ ವೈದ್ಯರು ಆಸ್ಪತ್ರೆೆಯಲ್ಲಿ ಇರಲಿಲ್ಲ. ಸುದ್ದಿ ತಿಳಿದ ಮೇಲೆ ಮನೆಯಿಂದ ಬರಲು ತಡವಾಗಿದೆ. ಅಷ್ಟರಲ್ಲಿ ರೋಗಿಯ ಪ್ರಾಾಣ ಹೋಗಿದೆ. ಕೋಪಗೊಂಡ ರೋಗಿಯ ಸಂಬಂಧಿಕರು, ಗುಂಪು ಗುಂಪಾಗಿ ಚೆನ್ನಾಾಗಿ ವೈದ್ಯರ ಮೇಲೆ ಎರಗಿದ್ದಾರೆ. ಯಾವ ಪರಿ ಅವರ ಮೇಲೆ ದಾಳಿ ಎಂದರೆ, ವೈದ್ಯರ ಪ್ರಾಾಣ ಸ್ಥಳದಲ್ಲೆ ಹೋಗಿದೆ.

ಬೇರೆ ವೃತ್ತಿಿಯಲ್ಲಿರುವ ಹಿರಿಯ ನಾಗರಿಕರು ತಪ್ಪುು ಮಾಡಿದ್ದಾರೆ. ಹೋಗಲಿ ಬಿಡು ಎಂದು ಬಿಟ್ಟುಬಿಡುತ್ತಿಿದ್ದರು. ಆದರೆ, ಈ ವಿನಾಯತಿ ವೈದ್ಯರಾಗಿದ್ದಕ್ಕೆೆ ಈ ಹಿರಿಯ ನಾಗರಿಕರಿಗೆ ಸಿಕ್ಕಿಿಲ್ಲ. ವೃದ್ದರು ವೈದ್ಯರಾಗಿದ್ದರಿಂದ ಇದು ಅಕ್ಷಮ್ಯ ಅಪರಾಧವಾಗಿದೆ. ಹೋಗಲಿ ಬಿಡಿ ಏನು ಮಾಡುವುದಕ್ಕಾಾಗುತ್ತದೆ. ದಿನ ಸಾಯುವವರಿಗೆ ಆಳುವರು ಯಾರು ಎಂಬಂತೆ, ಈ ವೈದ್ಯರ ದಾಳಿಯ ಮೇಲೆ ಬರೆದು ಬರೆದು ನಮಗೂ ಸಾಕಾಗಿದೆ ಅದನ್ನು ಓದಿ ಓದಿ ನಿಮಗೂ ಸಾಕಾಗಬಹುದು.

ಈ ಹಿರಿಯ ವೈದ್ಯರಿಗೆ ಹೊಡೆಯುತ್ತಿಿರುವ ಅಮಾನುಷ ದೃಶ್ಯ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಈ ಘಟನೆಯ ಬಗ್ಗೆೆ ಚರ್ಚೆ, ವಾದ-ಪ್ರತಿವಾದಗಳು ಸಾಮಾಜಿಕ ಜಾಲ ತಾಣದಲ್ಲಿ ಭರಾಟೆಯಾಗಿ ಸಾಗುತ್ತಿಿತ್ತು. ಅದರಲ್ಲಿ ಒಬ್ಬ ಮಹಿಳೆಯೊಬ್ಬರು ಈ ರೀತಿ ಬರೆದುಕೊಂಡಿದ್ದರು ‘ನಾವು ಕೂಡ ಕೋಲ್ಕತಾದ ಆಸ್ಪತ್ರೆೆಯಲ್ಲಿ ನಮ್ಮ ತಾಯಿಯನ್ನು ದಾಖಲು ಮಾಡಿದ್ದೆವು. ಅಲ್ಲಿನ ವೈದ್ಯರು ಚಿಕಿತ್ಸೆೆಯ ನೆಪದಲ್ಲಿ ನಮ್ಮ ತಾಯಿಯನ್ನು ಕೊಲ್ಲಲು ಪ್ರಯತ್ನಿಿಸಿದರು ಇಂತಹ ವೈದ್ಯರಿಗೆ ಇಂತಹ ವೈದ್ಯರನ್ನು ಒಡೆದು ಕೊಳ್ಳುವುದು ಅಪರಾಧವೇನಲ್ಲ’ ಎಂದು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದರು.

ಇದರಲ್ಲಿ ನಮ್ಮ ಆಸ್ಪತ್ರೆೆಯ ಹೆಸರು ಪ್ರಸ್ತಾಾಪವಾಗಿದ್ದರಿಂದ ಆ ಪ್ರತಿಕ್ರಿಿಯೆ ನನ್ನ ಗಮನ ಸೆಳೆಯಿತು. ಪ್ರತಿಕ್ರಿಿಯೆ ನೀಡಿದ್ದ ಮಹಿಳೆಯ ಫೋಟೋವನ್ನು ನೋಡಿದಾಗ, ರೋಗಿಯ ಚರಿತ್ರೆೆ ಸ್ಪಷ್ಟವಾಗಿ ನೆನಪಿಗೆ ಬಂದಿತ್ತು. ಆ ರೋಗಿಗೆ ಕೊನೆಯ ಹಂತದ ಕ್ಯಾಾನ್ಸರ್ ನಿಂದ ಬಳಲುತ್ತಿಿದ್ದರು. ಅವರಿಗೆ ಪದೇ ಪದೆ ಎದೆಯಲ್ಲಿ ನೀರು ತುಂಬಿಕೊಳ್ಳುತ್ತಿಿತ್ತು ಮತ್ತು ಅದನ್ನು ಆಸ್ಪತ್ರೆೆಯಲ್ಲಿ ದಾಖಲು ಮಾಡಿ, ನೀರು ತೆಗೆಯಲಾಗುತ್ತಿಿತ್ತು. ಪದೇ ಪದೆ ಎದೆಯಲ್ಲಿ ನೀರು ತುಂಬಿ ಕೊಳ್ಳುವುದನ್ನು ನಿಲ್ಲಿಸಲು, ಪ್ಲೆೆರೋಡೆಸಿಸ್ ಎಂಬ ಚಿಕಿತ್ಸೆೆಯನ್ನು ಮಾಡಲಾಗಿತ್ತು. ಆ ಚಿಕಿತ್ಸೆೆ ಬಗ್ಗೆೆ ರೋಗಿಯ ಸಂಬಂಧಿಕರಿಗೆ ಚಿಕಿತ್ಸೆೆಯ ಸಾಧಕ ಬಾಧಕಗಳನ್ನು ವಿವರಿಸಲಾಗಿತ್ತು. ದುರದೃಷ್ಟವಶಾತ್ ಚಿಕಿತ್ಸೆೆ ಮಾಡಿದ ನಂತರ ರೋಗಿಗೆ ಔಷಧ ಅಲರ್ಜಿಯಿಂದ ತಾತ್ಕಾಾಲಿಕವಾಗಿ ತೀವ್ರ ಸ್ವರೂಪದ ಶ್ವಾಾಸಕೋಶದ ತೊಂದರೆ ಉಂಟಾಗಿತ್ತು. ಈ ರೋಗಿಯ ಚಿಕಿತ್ಸೆೆಯ ಮೊದಲು ಮತ್ತು ಚಿಕಿತ್ಸೆೆಯ ದಿನ ಅವರ ಜತೆ ಇದ್ದವರು ಸಂಬಂಧಿಕರು ಮಾತ್ರ. ಚಿಕಿತ್ಸೆೆಯ ನಂತರ ಅಂದರೆ ರೋಗಿ ತೊಂದರೆಯಲ್ಲಿದ್ದಾಗ ಬಂದಿಳಿದ ಈ ಮಹಿಳೆ ತಮ್ಮನ್ನು ರೋಗಿಯ ಮಗಳೆಂದು ಪರಿಚಯ ಮಾಡಿಕೊಂಡಿದ್ದರು. ಉಸಿರಾಟದ ತೊಂದರೆಯಲ್ಲಿರುವ ರೋಗಿಯ ಸ್ಥಿಿತಿಯನ್ನು ನೋಡಿ, ಈ ಚಿಕಿತ್ಸೆೆಯ ಬಗ್ಗೆೆ ತಮ್ಮ ತೀವ್ರವಾದ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಮೊದಲೇ ಈ ಚಿಕಿತ್ಸೆೆಯ ಸಾಧಕ ಭಾದಕಗಳನ್ನು ವಿವರಿಸುವುದನ್ನು ಒಪ್ಪಲು ತಯಾರು ಇರಲಿಲ್ಲ. ರೋಗಿ ಗುಣ ಗುಣಮುಖವಾಗಿ ಡಿಸ್ಚಾಾರ್ಜ್ ಆದ ಬಳಿಕ ಮಹಿಳೆ ಸಿಕ್ಕಿಿದ್ದು ಫೇಸ್‌ಬುಕ್ ಕಾಮೆಂಟಿನಲ್ಲಿ ಮಾತ್ರ.

ಇಂತಹ ವ್ಯಕ್ತಿಿಗಳ ಗುಣ-ಸ್ವಭಾವವನ್ನು ಬಣ್ಣಿಿಸುವುದಕ್ಕೆೆ ಒಂದು ವಿಶೇಷವಾದ ಪದಗುಚ್ಛ ವೇ ಇದೆ. ಇಂಥವರನ್ನು ‘ಡಾಟರ್ ಆಫ್ ಕ್ಯಾಾಲಿಫೋರ್ನಿಯಾ ಸಿಂಡ್ರೋೋಮ್’ ಎನ್ನುತ್ತಾಾರೆ. ಕನ್ನಡದಲ್ಲಿ ‘ಸಾಗರದಾಚೆಯ ಮಕ್ಕಳ ಸ್ಥಿಿತಿ’ ಎನ್ನಬಹುದೇನೋ. ಈ ಮನಸ್ಥಿಿತಿಯ ವ್ಯಕ್ತಿಿಗಳು ತಮ್ಮ ತಂದೆ-ತಾಯಿಯಿಂದ ದೂರದಲ್ಲಿ ವಾಸವಾಗಿರುತ್ತಾಾರೆ. ತಂದೆ-ತಾಯಿಗಳಿಗೆ ತೀವ್ರವಾಗಿ ತೊಂದರೆಯಾದಾಗ ಮಾತ್ರ ದೂರದ ಊರಿನಿಂದಲೋ ಅಥವಾ ದೂರದ ದೇಶದಿಂದಲೋ ಹಿಂದಿರುತ್ತಾಾರೆ. ಇವರಿಗೆ ತಂದೆ-ತಾಯಿಗಳ ನಿಜವಾದ ಪರಿಸ್ಥಿಿತಿಯ ಅರಿವು ಇರುವುದಿಲ್ಲ. ಆದರೆ, ಇವರಿಗೆ ತಾವು ತಮ್ಮ ತಂದೆ-ತಾಯಿಯರ ಕಷ್ಟದ ಪರಿಸ್ಥಿಿತಿಯಲ್ಲಿ ನೆರವಾಗುತ್ತಿಿಲ್ಲ ಅಥವಾ ಅವರ ಇಳಿ ವಯಸ್ಸಿಿನಲ್ಲಿ ನೋಡಿಕೊಳ್ಳುತ್ತಿಿಲ್ಲ ಎಂಬ ಎಂಬ ಪಶ್ಚಾಾತ್ತಾಾಪ ಮನದಲ್ಲಿ ಗಾಢವಾಗಿ ಮನೆ ಮಾಡಿಕೊಂಡಿರುತ್ತದೆ. ತಂದೆ-ತಾಯಿಗಳು ಆಸ್ಪತ್ರೆೆಯಲ್ಲಿ ದಾಖಲಾದ ನಂತರ ಬರುವ ಇಂತಹ ಮಕ್ಕಳು ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡೇ ಬರುತ್ತಾಾರೆ. ಇವರು ತಂದೆ-ತಾಯಿಗಳನ್ನು ಸಂಪೂರ್ಣ ಗುಣಮುಖವಾದ ಪರಿಸ್ಥಿಿತಿಯಲ್ಲಿ ನೋಡುವ ಮನಸ್ಥಿಿತಿ ಹೊಂದಿರುತ್ತಾಾರೆ. ಇವರನ್ನು ತೃಪ್ತಿಿಪಡಿಸುವುದು ಅಸಾಧ್ಯ. ಇವರ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಆದರೂ ಅವರ ಅಸಮಾಧಾನ ಭುಗಿಲೆದ್ದು ಬಿಡುತ್ತದೆ. ಮನಶಾಸ್ತ್ರಜ್ಞರು ಹೇಳುವ ಪ್ರಕಾರ ಇಂತಹ ವ್ಯಕ್ತಿಿಗಳಿಗೆ ಮನದಲ್ಲಿರುವ ಪಶ್ಚಾಾತ್ತಾಾಪವೇ ಈ ನಡೆವಳಿಕೆಗಳಿಗೆ ಕಾರಣ.

ಈ ಮಹಿಳೆ ಮಾಡಿದ ಕಾಮೆಂಟನ್ನು ಪೊಲೀಸರು ಗಮನಿಸಿದ್ದಾರೆ. ಪಶ್ಷಿಿಮ ಬಂಗಾಳದಲ್ಲಿ ಲಿಂಚಿಂಗ್ ಬಗ್ಗೆೆ ಕಠಿಣ ಕಾನೂನು ಜಾರಿಗೆ ಬಂದಿದೆ. ಇದು ಲಿಂಚಿಂಗ್‌ನ್ನು ಪ್ರಚೋದನೆ ನೀಡುವ ಆಕ್ರಮಣಕಾರಿಗೆ ಆಕ್ರಮಣಕಾರ ಹೇಳಿಕೆ ಎಂದು ಪೊಲೀಸರು ಎಚ್ಚರಿಸಿದ ಮೇಲೆ ಆ ಕಾಮೆಂಟ್‌ನ್ನು ಅಳಿಸಿ ಹಾಕಲಾಗಿದೆ.

ದೂರದ ದೇಶದಲ್ಲೋ ಅಥವಾ ದೂರದ ರಾಜ್ಯದಲ್ಲೋ ಆಗುತ್ತಿಿರುವ ಘಟನೆಗಳು, ನಮ್ಮನ್ನ ಕಾಡುತ್ತಿಿರುವುದು ಈ ಕಾಲಘಟ್ಟದಲ್ಲಿ ಸಹಜ. ಅಂತರ್ಜಾಲದ ಕಾರಣದಿಂದ ಮತ್ತು ಜಾಲತಾಣಗಳಿಂದ, ದೇಶ ದೇಶಗಳ ದೂರಗಳು ಕಡಿಮೆಯಾಗುತ್ತಿಿದೆ. ದೂರದ ಊರಿನಲ್ಲಿ ಅಥವಾ ದೂರದ ರಾಜ್ಯದಲ್ಲೂ ಅಥವಾ ದೂರದ ದೇಶದಲ್ಲೂ ನಡೆದ ಘಟನೆಗಳಿಗೆ ನಾವು ಪಕ್ಕದಲ್ಲೇ ನಡೆದ ಘಟನೆಯ ಹಾಗೆ ಪ್ರತಿಕ್ರಿಿಯೆ ನೀಡುತ್ತಿಿದ್ದೇವೆ. ವಸುದೈವ ಕುಟುಂಬಕಂ ಅಂದರೆ ಇದೇ ಏನೋ.

ಸಂತೋಷದ ವಿಚಾರವೇನೆಂದರೆ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ವೈದ್ಯರ ಮೇಲಿನ ದಾಳಿಯನ್ನು ತಡೆಗಟ್ಟುವ ಹೊಸ ಕಾನೂನಿನ ಪ್ರಸ್ತಾಾವನೆ ಸಲ್ಲಿಸಿದ್ದಾರೆ. ಎಲ್ಲ ರಾಜ್ಯದವರಿಗೂ ಸಮಾನವಾಗಿ ಅನ್ವಯಿಸುವ ಈ ಕಾನೂನು ಜಾರಿಗೆ ಬಂದರೆ, ವೈದ್ಯರ ಮೇಲಿನ ಹಲ್ಲೆಗೆ ಹತ್ತು ಲಕ್ಷದವರೆಗೂ ದಂಡ ಮತ್ತು ಹತ್ತು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಈ ಕಾನೂನಿನಲ್ಲಿ ಇದೆ. ಅಷ್ಟೇ ಅಲ್ಲ ಹಲ್ಲೆಗೊಳಗಾದವರಿಗೆ ಐದು ಲಕ್ಷದವರೆಗೆ ಪರಿಹಾರ ನೀಡುವ ಪ್ರಸ್ತಾಾವನೆ ಇದರಲ್ಲಿ ಇದೆ. ಆಗಲಾದರೂ ಇಂತಹ ಅಮಾನುಷ ಘಟನೆಗಳಿಗೆ ಕಡಿವಾಣ ಬೀಳುತ್ತದೋ ಇಲ್ಲವೋ ಕಾಲವೇ ಉತ್ತರಿಸಬೇಕು.