Friday, 24th September 2021

ಶಾಸಕಾಂಗದ ಮೇಲೆ ಕಣ್ಣು ಇಟ್ಟಿರಿ !

ಅಭಿಪ್ರಾಯ

ಹೃತಿಕ್ ಕುಲಕರ್ಣಿ

ಇಂದಿನಿಂದ ವಿಧಾನಮಂಡಲ ಅಧಿವೇಶನ ಆರು ತಿಂಗಳ ಬಳಿಕ ನಡೆಯುತ್ತಿದೆ. ಈ ರಾಜ್ಯದ ಪ್ರಜೆಗಳಿಂದ ಆಯ್ಕೆಯಾಗಿ ಹೋಗಿ ಅವರ ಪ್ರತಿನಿಽಗಳು ಎಂದು ವಿಧಾನಸಭೆಯಲ್ಲಿ ಆಸೀನರಾಗುವ ಶಾಸಕರುಗಳು ಈ ನಾಡ ಕ್ಷೇಮಾಭಿವೃದ್ಧಿಯ ಜವಾಬ್ದಾರಿ ಹೊತ್ತವರು.

ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಲು ಅವಶ್ಯವಾಗಿ ಬೇಕಾದ ಕಾನೂನು ಕಟ್ಟಳೆಗಳನ್ನೂ, ಅಶಕ್ತ ವರ್ಗದವರ ಶ್ರೇಯಸ್ಸಿಗೆ ಮತ್ತವರ ಉನ್ನತ ಸ್ಥಿತಿ ಸಾಧನೆಗೆ ಪೂರಕವಾದ ಶಾಸನಗಳನ್ನೂ ನಿರ್ಮಿಸಿ ಮಂಡಿಸುವುದು ಇದೇ ಪ್ರಜಾಚುನಾಯಿತ ಪ್ರತಿನಿಧಿಗಳು, ವಿಧಾನಸಭೆಯಲ್ಲಿ. ಆದರೆ ಇವರಲ್ಲಿ ಅದೆಷ್ಟು ಶಾಸಕರಿಗೆ ಕಾನೂನಿನ ಮೇಲು-ಬುಡ-ಮಧ್ಯದ ಅರಿವಿದೆ ಎನ್ನುವುದನ್ನು ಅವರೇ ಹೇಳಿಕೊಳ್ಳಬೇಕು. ಗಮನಾರ್ಹ ವಿಷಯ ಇದು. ಇವರನ್ನು ಚುನಾಯಿಸಿ ಕಳಿಸುವ ಯಾವ್ಯಾವ ಮತದಾರನೂ ಇವರ ಕಾನೂನಿನ ಪರಿeನವನ್ನು ಮತಚಲಾಯಿಸುವಾಗ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.

ಒಂದೋ ದ್ರವ್ಯಾದಿ ಮಾದಕಗಳಿಗೆ ಮಾರುಹೋಗಿ ಇ ಜಾತಿಧರ್ಮಾದಿಗಳ ಬಲೆಗೆ ಬಿದ್ದು ನಮ್ಮ ಜನ ಶಾಸಕ ರನ್ನು ಆರಿಸಿ ಕಳಿಸುತ್ತಾರೆ ಅಥವಾ ಅಭ್ಯರ್ಥಿಯ ಸೇವಾತತ್ಪರತೆಯನ್ನು ಪರಿಗಣಿಸಿ ಚುನಾವಣೆಯಲ್ಲಿ ಜನ ಅವನಿಗೆ ಜಯಮಾಲೆಯನ್ನು ಹಾಕಿದ ಉದಾಹರಣೆಗಳು ಕಮ್ಮಿಯಾದರೂ, ಇವೆ. ಹಾಗಾದರೆ, ಶಾಸನ ಅಥವಾ ಕಾನೂನು ನಿರ್ಮಾತೃಗಳಾದ ಶಾಸಕರುಗಳಿಗೆ ಕಾನೂನಿನ ಅಭ್ಯಾಸ ಇರಲೇಬೇಕೆ ಎಂದರೆ ಇದ್ದರೆ ಒಳ್ಳೆಯದು ಆದರೆ ಅದು ನಿಯಮವೇನಲ್ಲ ಎಂಬ ಉತ್ತರ ನನ್ನದು. ಶಾಸಕನ ಮನದ ಆಳದಲ್ಲಿ ಪ್ರಜಾಹಿತ ಚಿಂತನೆ ಮಾತ್ರವೇ ಅಂಟಿ ಕುಳಿತಿದ್ದರೆ ಅದೇ ಯಥೇಷ್ಟ. ಅವನು ಪ್ರಜಾಹಿತ ಕಾರ್ಯಕ್ಕೆ ಬೇಕಾದ ಎಲ್ಲವನ್ನೂ ಕಲಿಯಬೇಕಾದ ಸಂದರ್ಭ ಒದಗಿದರೆ ಕಲಿಯುತ್ತಾನೆ.

ಇಂತಹ ಜನಪ್ರತಿನಿಧಿಗಳು ಜನಪರ ಕಾನೂನುಗಳಿಗೆ ಬೆನ್ನೆಲುಬಾಗಿಯೂ ಅನ್ಯಥಾ ಶಾಸನಗಳಿಗೆ ಬೆನ್ನು ತಿರುಗಿಸಿದವರಾಗಿಯೂ ನಿಲ್ಲಲು ಯಾರ ಮುಲಾಜೂ ನೋಡುವುದಿಲ್ಲ. ಆದರೆ ಇಂತಹವರ ಗಣಿಕೆ ಎಷ್ಟಿದೆ ಇಂದಿನ ಕರ್ನಾಟಕದ ವಿಧಾನಸಭೆಯಲ್ಲಿ? ಕಾನೂನಿನ ತಿಳಿವಳಿಕೆಯೂ ಇಲ್ಲ, ಜನಹಿತಾಸಕ್ತಿಯೂ
ದೂರದೂರ. ಬಹಳ ಹಿಂದಕ್ಕೆ ಹೋಗುವುದು ಬೇಡ. ಈಗಿನ ರಾಜ್ಯದ ಮುಖ್ಯಮಂತ್ರಿಗಳ ಪಿತರಾದ ದಿವಂಗತ ಎಸ್.ಆರ್ ಬೊಮ್ಮಾಯಿಯವರು ರಾಜ್ಯದ ಪ್ರತಿಪಕ್ಷದ ನಾಯಕರಾಗಿದ್ದಾಗ ಅಥವಾ ಅವರು ಸದನದಲ್ಲಿದ್ದ ಕಾಲದಲ್ಲಿ ನಡೆಯುತ್ತಿದ ಚರ್ಚೆಗಳು ವಾದವಿವಾದಗಳು ಅವೆಷ್ಟು ಆರೋಗ್ಯಕರವಾಗಿದ್ದವು
ಎನ್ನುವುದನ್ನು ಓದಿ ಸ್ವಾದಿಸಬೇಕು.

ಜೆ.ಎಚ್ ಪಟೇಲ್, ವಿ.ಪಾಟೀಲ್, ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ ಮುಂತಾದ ಮುಂಚೂಣಿ ನಾಯಕರುಗಳ ಭಾಷಣಗಳನ್ನು ಓದ ಹತ್ತಿದರೆ ಇವತ್ತಿನ ಕಲಾಪಗಳ ಕಾರ್ಯವೈಖರಿ ಅಸಹ್ಯ ಹುಟ್ಟಿಸಿಬಿಡುತ್ತದೆ. ಇಂತಹ ದುಸ್ಥಿತಿಗೆ ಕಾರಣವನ್ನು ಹುಡುಕಿ ಹೊರಟರೆ ಅನೇಕ ಕಾರಣಗಳು ಸಿಗ ಬಹುದು. ಆದರೆ ಈಗ ಸುಸ್ಥಿತಿಯ ಆಲೋಚನೆ ಮಾತ್ರ ಬೇಕಿರುವುದು. ಗದ್ದಲ ಗೊಂದಲಗಳಿಲ್ಲದೆ ಕಲಾಪ ನಡೆಯಬೇಕು ಎಂದರೆ ಕನ್ನಡಿಗರೆಲ್ಲರೂ ‘ನಮ್ಮ ಎರಡೂ ಕಣ್ಣುಗಳು ವಿಧಾನಸಭೆಯ ಮೇಲಿರುತ್ತವೆ, ಅಷ್ಟೇ ಅಲ್ಲ ನಮ್ಮ ದೃಷ್ಟಿ ನಿಮ್ಮ ಮೇಲೇ ನೆಟ್ಟಿರುತ್ತದೆ ಶಾಸಕರುಗಳೇ. ದಾರಿ ತಪ್ಪಿದಿರೊ ಮುಂದಿನ ಚುನಾವಣೆಯಲ್ಲಿ ದಾರಿ ಕಾಣದಾದೀತು ಎಚ್ಚರ’ ಎಂದು ಹೇಳಬೇಕಿದೆ.

ಗದ್ದಲದ ಗೋಜಿನ ಮಧ್ಯೆ ಪಾಸಾಗಿ ಹೋದ ಯಾವ ಕಾನೂನುಗಳು ಶಾಸನಗಳು ಪರಿಣಾಮಕಾರಿಯಾಗಿ ಪರಿಪಾಲನೆಯಾಗಲಾರವು ಮತ್ತು ಅವು ಜನಪರ ವಾಗಿವೆ ಎಂದು ನಂಬುವುದಾದರೂ ಹೇಗೆ ಚರ್ಚೆಯಾಗದೆ? ಅದಕ್ಕಾಗಿಯೇ ಕನ್ನಡಿಗರೆಲ್ಲರೂ ಎಚ್ಚರವಾಗಬೇಕು. ಅವರು ಚುನಾಯಿಸಿರುವ ಶಾಸಕರುಗಳಿಗೆ ಎಚ್ಚರಿಕೆ ಸಂದೇಶ ಪತ್ರಮುಖೇನವೋ, ಮೇಲ್ ಮಾಡಿಯೋ, ಟ್ವಿಟರ್ ಇತ್ಯಾದಿ ಜಾಲತಾಣಗಳ ಮೂಲಕವೋ ರವಾನಿಸಬೇಕು.

When a Law is unjust it is only right to disobey ಎನ್ನುವ ಮಾತನ್ನು ಬಹುಜನಸಮಾಜ ಕಾರ್ಯರೂಪಕ್ಕೆ ತರಹತ್ತಿದರೆ ನೆನಪಿರಲಿ, ಅದಕ್ಕೆ ಏಕಮಾತ್ರ ಕಾರಣ ನೀವಾಗಿರುತ್ತೀರಿ Lawmakers ಗಳೇ.

Leave a Reply

Your email address will not be published. Required fields are marked *