Wednesday, 1st February 2023

ಸುಭಾಷಿತಗಳಲ್ಲಿಯೇ ಅಡಗಿದೆ ನಮ್ಮ ಜೀವನ

ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಡಾ.ಕೆ.ಪಿ.ಪುತ್ತೂರಾಯ ಅವರಿಂದ ಅರಿವಿನ ಉಪನ್ಯಾಸ ಅಭಿಮತ

ಬೆಂಗಳೂರು: ನಮ್ಮ ಇಡೀ ಬದುಕನ್ನು ನಮ್ಮ ಹಿರಿಯರು ನಾಲ್ಕು ಸಾಲಿನ ಸುಭಾಷಿತ ಗಳಲ್ಲಿ ಕಟ್ಟಿಕೊಟ್ಟಿದ್ದು, ನಾವು ಹೇಗೆ ಬದುಕ ಬೇಕು ಎಂಬುದನ್ನು ಸರಳ ರೀತಿಯಲ್ಲಿ ಕಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಡಾ.ಕೆ.ಪಿ ಪುತ್ತೂರಾಯ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ನಡೆದ ’ಸುಭಾಷಿತಗಳ ಸಾಮರ್ಥ್ಯ ಹಾಗೂ ಸ್ವಾರಸ್ಯ: ಡಾ. ಪುತ್ತುರಾಯರ ಮಾತು’ ಕಾರ್ಯಕ್ರಮ ದಲ್ಲಿ ಮಾತನಾಡಿ, ಸಂಸ್ಕೃತ ಮತ್ತು ಕನ್ನಡದಲ್ಲಿನ ಸುಭಾಷಿತಗಳಲ್ಲಿ ಬರುವ ಜೀವನಾರ್ಥವನ್ನು ಕೇಳುಗರಿಗೆ ಮನೋಜ್ಞವಾಗಿ ವಿವರಿಸಿದರು.

ಸಂಸ್ಕೃತದಲ್ಲಿ ಬರುವ ಶ್ಲೋಕಗಳಲ್ಲಿ ‘ದುರ್ಜನ ರನ್ನು ಕಂಡಾಗ ಮೊದಲು ವಂದಿಸಬೇಕು’ ಎನ್ನುವ ಮಾತು ಬರುತ್ತದೆ. ದುಷ್ಟರನ್ನು ಕಂಡರೆ ದೂರ ಇರು ಎಂಬ ಮಾತು ಕನ್ನಡ ದಲ್ಲಿದೆ. ಅದೇ ರೀತಿಯ ದುಷ್ಟರನ್ನು ಎದುರು ಹಾಕಿಕೊಂಡು ಇನ್ನಿಲ್ಲದ ಸಮಸ್ಯೆ ಮಾಡಿಕೊಳ್ಳುವುದಕ್ಕಿಂತ, ದುಷ್ಟರನ್ನು  ಕಂಡರೆ ಅವರಿಗೆ ಮೊದಲು ವಂದಿಸಿ ಬಿಡಬೇಕು. ಆಗ ಅವರ ಮನಸ್ಸು ನಾನು ದುಷ್ಟನಾಗಿದ್ದರೂ ನನಗೆ ಮೊದಲು ವಂದಿಸಿದರಲ್ಲ ಎಂಬ ಪ್ರಾಯಶ್ಚಿತಕ್ಕೆ ದೂಡಲ್ಪಡುತ್ತದೆ.

ಇದು ಆತನ ಪರಿವರ್ತನೆಗೆ ಕಾರ ಣವೂ ಆಗಬಹುದು ಎಂದರು. ಅದೇ ರೀತಿ, ದಾನ ಮಾಡುವ ಮಹತ್ವವನ್ನು ಸುಭಾಷಿತಗಳು ಬಹಳ ಸರಳವಾಗಿ ಸಾರುತ್ತವೆ. ಹಣ ಮಾಡ ಬೇಕು, ಆದರೆ, ಅದು ನ್ಯಾಯ ಸಮ್ಮತವಾಗಿರಬೇಕು. ಆಸೆ ಬರುಕನಾಗಿದ್ದುಕೊಂಡು ಅತಿಯಾಗಿ ಹಣ ಮಾಡುವುದು ಸರಿಯಲ್ಲ. ಆಗ ಅದರಿಂದ ಮುಂದಾಗುವ ಅಪಾಯಗಳನ್ನು ನಾವೇ ಎದುರಿಸಬೇಕಾಗುತ್ತದೆ. ಹೀಗಾಗಿ, ನಿಯಮಿತವಾಗಿ ಹಣ ಗಳಿಸಬೇಕು. ಅದನ್ನು ಕಾನೂನು ಮಾರ್ಗದಲ್ಲಿ, ನ್ಯಾಯ ಮಾರ್ಗದಲ್ಲಿ ಮಾಡಬೇಕು.

ಜತೆಗೆ, ನಾವು ಗಳಿಸಿದ್ದರಲ್ಲಿ ಒಂದಷ್ಟು ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಆಗ ಜೀವನ ಸಾರ್ಥಕತೆ ಬೆಳೆಸಿ ಕೊಳ್ಳುತ್ತದೆ ಎಂದು ಹೇಳಿದರು. ಇನ್ನು ಕನ್ನಡದ ಕೆಲವು ವಚನಗಳ ಸಾರವನ್ನು ಸಾರಿದ ಪುತ್ತೂರಾಯರು, ಛಲ ಬೇಕು ಶರಣಂಗೆ ಪರಸತಿಯಲ್ಲಂಗೆ ಎಂದು ಶುರುವಾಗುವ ಸುಭಾಷಿತಗಳಲ್ಲಿ ಮನುಷ್ಯ ಧರ್ಮಮಾರ್ಗದಲ್ಲಿ ನಡೆಯಬೇಕಾದರೆ ಏನು ಮಾಡ ಬೇಕು, ಏನು ಮಾಡಬಾರದು ಯಾವ ರೀತಿಯಲ್ಲಿ ಬದುಕಿದರೆ ಮನುಷ್ಯನ ಜೀವನ ಮಕ್ತಿ ಮಾರ್ಗದಲ್ಲಿ ನಡೆಯುತ್ತದೆ ಎಂಬು ದನ್ನು ಸರಳವಾಗಿ ವಿವರಿಸಲಾಗಿದೆ. ಈ ವಚನಗಳೇ ನಮ್ಮ ಬದುಕನ್ನು ರೂಪಿಸುವ ದಾರಿ ದೀಪಗಳಾಗಿವೆ. ಅದನ್ನು ಅರ್ಥೈಸಿ ಕೊಂಡು ನಡೆದವರು ಬದುಕು ಹಸನಾಗಿ ಸಾಗುತ್ತಿದೆ.

ಇಂತಹ ಮಹಾನ್ ಸುಭಾಷಿತಗಳ ಮೂಲಕ ನಮ್ಮ ಹಿರಿಯರು ನಮ್ಮ ಬದುಕನ್ನು ಕಟ್ಟಿಕೊಟ್ಟಿರುವುಕ್ಕೆ ನಾವು ಋಣೀ ಗಳಾಗಿರಬೇಕು ಎಂದು ವಿವರಿಸಿದರು. ಅನಾಥೋ ದೈವ ರಕ್ಷಿತಹಃ, ಕಲಾಹೀನ ಪಶುಸಮಾನ ಮೊದಲಾದ ಸಾಲುಗಳಲ್ಲಿ ಬಡವರ ಪಾಲಿಗೆ ಯಾರೂ ಇಲ್ಲದಿದ್ದರೂ, ಅನಾಥನಾದವನಿಗೆ ಯಾರ ಆಶ್ರಯವಿಲ್ಲದಿದ್ದರೂ, ದೇವರೇ ಅವನಿಗೆ ಆಶ್ರಯದಾತ ನಾಗಿರುತ್ತಾನೆ ಎಂಬುದನ್ನು ಸಾರಿ ಹೇಳಲಾಗಿದೆ. ಅನಾಥರೆಷ್ಟೋ ಜನರು ದೇವರ ನೆರಳಿನಲ್ಲಿ ಬದುಕುತ್ತಿರುವುದು ಇದಕ್ಕೆ ನಿದರ್ಶನ.

ಇನ್ನು ಕಲೆಯಿಲ್ಲದ ಜೀವನ ಜೀವನವೇ ಅಲ್ಲ ಎಂಬುದನ್ನು ಸಾರುವಾಗ ಜೇಡನಿಗೆ ಒಂದು ಬಲೆ, ಶರೀರಕ್ಕೆ ಒಂದು ತಲೆ, ಮನುಷ್ಯನಿಗೆ ಒಂದು ಕಲೆ ಬಹಳ ಮುಖ್ಯ ಎಂಬುದನ್ನು ಉಕ್ತಿಗಳು ಸಾರಿ ಸಾರಿ ಹೇಳಿರುವುದನ್ನು ಪುತ್ತೂರಾಯರು ಮನೋಜ್ಞ ವಾಗಿ ವಿವರಿಸಿದರು.

ವಿನಾಶ ಕಾಲೇ ವಿಪರೀತಿ ಬುದ್ಧಿ
ಕೆಟ್ಟ ರಾಜನಿರುವುದಕ್ಕಿಂತ, ರಾಜನಿಲ್ಲದಿರುವುದೇ ಲೇಸು, ಕೆಟ್ಟ ಸ್ನೇಹಿತನಿರುವುದಕ್ಕಿಂತ ಸ್ನೇಹಿತರಿಲ್ಲದಿರುವುದೇ ಲೇಸು ಎಂದು ಹೇಳುವ ನಮ್ಮ ಸಂಸ್ಕೃತ ಉಕ್ತಿಗಳು ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಮಾತನ್ನು ಸಾರಿ ಹೇಳಿವೆ. ಮನುಷ್ಯ ತನ್ನ ಅಂತಿಮ ಘಟ್ಟದಲ್ಲಿ, ಅಂದರೆ ಕೇಡು ಬರುವ ಹೊತ್ತಿನ ವಿಪರೀತ ಬುದ್ಧಿ ಪ್ರಯೋಗ ಮಾಡಿ ಇಲ್ಲಸಲ್ಲದ ತಪ್ಪುಗಳನ್ನು ಮಾಡುತ್ತಾನೆ. ಕೆಟ್ಟ
ದಾರಿಯಲ್ಲಿ ಸಂಪಾದನೆ ಮಾಡಲೋಗಿ ಅತಿಯಾದ ಬುದ್ಧಿಯನ್ನು ಬಳಸಿ ಆತ ತನ್ನ ವಿನಾಶವನ್ನು ತಾನೇ ತನ್ನ ಮುಂದೆ
ತಂದು ಕೊಳ್ಳುತ್ತಾನೆ. ಹೀಗಾಗಿ, ಮಾನವ ಸನ್ಮಾರ್ಗದಲ್ಲಿ ನಡೆಯಲು ಇಂತಹ ಸೂಕ್ತಿಗಳನ್ನು ಸುಭಾಷಯಗಳನ್ನು ಅರ್ಥೈಸಿ ಕೊಂಡು ಬದುಕು ನಡೆಸಬೇಕು. ಆಗ ಮಾತ್ರ ಸನ್ಮಾರ್ಗದಲ್ಲಿ ನಡೆದು ಜೀವನ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದು ಡಾ.ಕೆ.ಪಿ.ಪುತ್ತೂರಾಯ ಹೇಳಿದರು.

*

ಸುಭಾಷಿತಗಳ ಒಳಗನ್ನು ಅಧ್ಯಯನ ಮಾಡಿ, ಸರಳವಾಗಿ ಮಾತನಾಡಿದ್ದಾರೆ. ಸಂಸ್ಕೃತದಲ್ಲಿನ ಸುಭಾಷಿತಗಳ ಜತೆಗೆ, ಅಲ್ಲಿನ ಸಾಹಿತ್ಯಗಳ ಉಕ್ತಿಗಳನ್ನು ಬಳಸಿದ್ದಾರೆ. ಕೇವಲ ಸಂಸ್ಕೃತ ಮಾತ್ರವಲ್ಲದೇ ಕನ್ನಡದ ಸುಭಾಷಿತಗಳನ್ನು ಬಳಸಿಕೊಂಡು ತಿಳಿಸಿದ್ದಾರೆ. ಕೆ.ಪಿ ಪುತ್ತೂರಾಯರ ಇಂದಿನ ಉಪನ್ಯಾಸ ಬಹಳ ಅರ್ಥಗರ್ಭಿತವಾಗಿತ್ತು.
-ನಾಗರಾಜ್ ಶರ್ಮಾ

error: Content is protected !!