Sunday, 14th August 2022

ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಗುರುರಾಜ್ ಗೌಡೂರು, ಪ್ರ.ಕಾರ್ಯದರ್ಶಿಯಾಗಿ ಅಮರಯ್ಯ‌ ಘಂಟಿ

ಲಿಂಗಸುಗೂರ : ಪತ್ರಕರ್ತರ ಚುನಾವಣೆ ಫಲಿತಾಂಶ ಹೊರಬಿದಿದ್ದೆ.ನೂತನ ಅಧ್ಯಕ್ಷರಾಗಿ ಗುರುರಾಜ್ ಗೌಡೂರು ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆಯಾಗಿದ್ದಾರೆ.

ಲಿಂಗಸುಗೂರ ತಾಲ್ಲೂಕು ಘಟಕದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಪತ್ರಿಕಾ ಭವನದಲ್ಲಿ ನಡೆದಿದ್ದು ಅವಿರೋಧವಾಗಿ ನೂತನ ತಾಲ್ಲೂಕ ಅಧ್ಯಕ್ಷರಾಗಿ ಗುರುರಾಜ್ ಗೌಡೂರು. ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಜಿಲ್ಲಾಧ್ಯಕ್ಷರಾದ ಆರ್ ಗುರುನಾಥ ಅಧಿಕೃತವಾಗಿ ಪ್ರಕಟಿಸಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ೨೦೨೨-೨೫ ನೇ ಸಾಲಿನ ನೂತನ ತಾಲ್ಲೂಕ ಘಟಕದ ಪದಾಧಿಕಾರಿಗಳ ಆಯ್ಕೆ ಗಾಗಿ ಸಭೆ ಕರೆಯಲಾಗಿತ್ತು ಜಿಲ್ಲಾ ಅಧ್ಯಕ್ಷರಾದ ಆರ್.ಗುರುನಾಥ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಯಿತ್ತು.

ಸರ್ವ ಸದಸ್ಯರ ಒಮ್ಮತದದಿಂದ ಒಪ್ಪಿಗೆ ಸೂಚಿಸಿದರು. ನಂತರ ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಿ, ನಂತರ ಮಾತ ನಾಡಿದ ಅಧ್ಯಕ್ಷರಾದ ಆರ್ ಗುರುನಾಥ ಮಾನ್ವಿ ಸಿಂಧನೂರುಗಿಂತಲೂ ಲಿಂಗಸುಗೂರ ಘಟಕದಲ್ಲಿ ಭಿನ್ನವಾಗಿ ಚುನಾವಣೆ ನಡೆದಿದೆ. ಒಗ್ಗಟಿನಲ್ಲಿ ಬಲವಿದೆ ಎಂದು ತೋರಿಸಿದ್ದಿರಾ. ಈ ಒಗ್ಗಟ್ಟಿನ ಒಮ್ಮತ್ತ ಮುಂದೆಯು ಸಹ ಹೀಗೆ ಇರಬೇಕು. ಹಿರಿಯರ ಮಾರ್ಗದರ್ಶನ ಸಲಹೆ ಪಡೆದು ಅಧ್ಯಕ್ಷ ಸ್ಥಾನ ನಿಭಾಯಿಸಲು ಮುಂದಾಗಬೇಕು ಎಂಬ ಸಲಹೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಶಿವರಾಜ್ ಕೆಂಬಾವಿ ಎಲ್ಲರಿಗೂ ಸಹ ಅವಕಾಶ ಅಧಿಕಾರ ಬೇಕು. ಪತ್ರಿಕಾ ಕ್ಷೇತ್ರದಲ್ಲಿ ತಾಳ್ಮೆ ಸಲಹೆ ಬಹು ಮಖ್ಯ ಎಂದರು. ಈ ಸಂದರ್ಭದಲ್ಲಿ ಮಾತಾಡಿದ ನೂತನ ಅಧ್ಯಕ್ಷರು ಕಾರ್ಯದರ್ಶಿಗಳು, ನಿಮ್ಮೆಲ್ಲರ ಪ್ರೀತಿ ವಿಶ್ವಾಸವನ್ನು ಹುಸಿ ಮಾಡದೆ ನಡೆದಕೊಳುತ್ತೆವೆ ಎಂಬ ಸಂತಸದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ‌‌‌.ಇನ್ನೂ ಈ ಸಂದರ್ಭದಲ್ಲಿ ಮುದಗಲ್- ಹಟ್ಟಿ ಹೋಬಳಿ ವಿಭಾಗದ ಪತ್ರಕರ್ತರು ಸಹ ಭಾಗಿಯಾಗಿದ್ದರು.